Advertisement

Politics: ಫುಲ್ಪುರ್‌ನಲ್ಲಿ ಪ್ರಿಯಾಂಕಾ ವಾದ್ರಾ ಅದೃಷ್ಟ ಪರೀಕ್ಷೆ!

09:01 PM Oct 03, 2023 | Team Udayavani |

ನವದೆಹಲಿ: ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ 2024ರ ಲೋಕಸಭೆ ಚುನಾವಣೆಯಲ್ಲಿ ಉತ್ತರ ಪ್ರದೇಶದಿಂದಲೇ ಅದೃಷ್ಟ ಪರೀಕ್ಷೆಗೆ ಇಳಿಯುತ್ತಾರೆ ಎಂಬ ಸುದ್ದಿಗಳು ರಾಜಕೀಯ ಪಡಸಾಲೆಯಲ್ಲಿ ಕೇಳಿಬರಲಾರಂಭಿಸಿವೆ. ಅಂದ ಹಾಗೆ, ಅವರು ಯಾವ ಕ್ಷೇತ್ರವನ್ನು ಆಯ್ಕೆ ಮಾಡಬಹುದು? ಗಾಂಧಿ ಕುಟುಂಬದ ಭದ್ರಕೋಟೆಯಾಗಿದ್ದ ಫ‌ುಲ್ಪರ್‌ ಕ್ಷೇತ್ರವನ್ನು ಪ್ರಿಯಾಂಕಾ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುತ್ತಿವೆ ಮೂಲಗಳು.

Advertisement

1952, 1957 ಮತ್ತು 1962ರಲ್ಲಿ ಅಂದರೆ ಸತತ 3 ಬಾರಿ ಜವಾಹರಲಾಲ್‌ ನೆಹರೂ ಅವರು ಇದೇ ಕ್ಷೇತ್ರದಲ್ಲಿ ಸ್ಪರ್ಧಿಸಿ ಜಯ ಗಳಿಸಿದ್ದರು. ಉತ್ತರಪ್ರದೇಶದಲ್ಲಿ ಗಾಂಧಿ ಕುಟುಂಬದ ಭದ್ರಕೋಟೆ ಎಂದು ಪರಿಗಣಿಸಲಾಗಿರುವ ಮೂರು ಕ್ಷೇತ್ರಗಳ ಪೈಕಿ ಫ‌ುಲ್ಪುರ್‌ ಕೂಡ ಒಂದು. ಆದರೆ, ತಮ್ಮ ಸ್ಪರ್ಧೆ ಕುರಿತು ಇನ್ನೂ ಪ್ರಿಯಾಂಕಾ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ. ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಏನಾದರೂ ಗೆದ್ದರೆ, ಅಲ್ಲಿನ ಜಬಲ್ಪುರ ಲೋಕಸಭಾ ಕ್ಷೇತ್ರವನ್ನು ಪ್ರಿಯಾಂಕಾ ಆಯ್ಕೆ ಮಾಡುವ ಸಾಧ್ಯತೆಯೂ ಇದೆಯಂತೆ.

Advertisement

Udayavani is now on Telegram. Click here to join our channel and stay updated with the latest news.

Next