Advertisement

ಮೃತದೇಹಗಳ ಮೇಲೆ ರಾಜಕೀಯ: ಮಮತಾ ಬ್ಯಾನರ್ಜಿ ವಿರುದ್ದ ವಾಗ್ದಾಳಿ ನಡೆಸಿದ ಬಿಜೆಪಿ ನಾಯಕ

09:39 AM Nov 01, 2019 | Mithun PG |

ಕೊಲ್ಕತ್ತಾ:  ಜಮ್ಮು ಕಾಶ್ಮೀರದ ಕುಲ್ಗಾಂವ್ ನಲ್ಲಿ ಐವರು ಕಾಶ್ಮೀರೇತರ ಕಾರ್ಮಿಕರರನ್ನು ಭಯೋತ್ಪಾದಕರು ಹತ್ಯೆ ಮಾಡಿದನ್ನು ಖಂಡಿಸಿ ಕೇಂದ್ರ ಸರ್ಕಾರವನ್ನು ದೂಷಿಸಿದ್ದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ಮುಖಂಡರು ವಾಗ್ದಾಳಿ ನಡೆಸಿದ್ದಾರೆ.

Advertisement

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮೃತದೇಹಗಳ ಮೇಲೆ ರಾಜಕೀಯ ಮಾಡುವ ಅಭ್ಯಾಸವನ್ನು ಹೊಂದಿದ್ದಾರೆ. ಭಯೋತ್ಪಾದರ ಕೃತ್ಯವನ್ನು ಖಂಡಿಸದೆ ಅವರು ಕೇಂದ್ರ ಸರ್ಕಾರವನ್ನು ದೂಷಿಸುತ್ತಿದ್ಧಾರೆ. ಇದು ಅವರು ಯಾರನ್ನು ಬೆಂಬಲಿಸುತ್ತಾರೆ ಎಂಬುದನ್ನು ಸಾಬಿತು ಪಡಿಸುತ್ತದೆ . ಅವರು ಪಾಕಿಸ್ಥಾನವನ್ನು ಮತ್ತು ಭಯೋತ್ಪಾದಕರನ್ನು ಬೆಂಬಲಿಸುತ್ತಿದ್ದಾರೆಯೇ ? ಎಂದು ಬಿಜೆಪಿ ನಾಯಕ ರಾಹುಲ್ ಸಿಹ್ನಾ ಪ್ರಶ್ನಿಸಿದ್ದಾರೆ.

ಬುಧವಾರ ಸರಣಿ ಟ್ವೀಟ್ ಮಾಡಿ ಘಟನೆ ಯನ್ನು ಖಂಡಿಸಿದ ಮಮತಾ ಬ್ಯಾನರ್ಜಿ, ಕಾಶ್ಮೀರದಲ್ಲಿ ನಡೆದ ಘಟನೆ ಅತ್ಯಂತ ದುರದೃಷ್ಟಕರ, ಐವರು ಮುಗ್ಧ ಕಾರ್ಮಿಕರನ್ನು ಪೂರ್ವಯೋಜಿತ ರೀತಿಯಲ್ಲಿ ಭಿಕರವಾಗಿ ಹತ್ಯೆ ಮಾಡಲಾಯಿತು. ಪ್ರಸ್ತುತ ಜಮ್ಮು -ಕಾಶ್ಮೀರದಲ್ಲಿ ಯಾವುದೇ ರಾಜಕೀಯ ಚಟುವಟಿಕೆಗಳಿಲ್ಲ. ಸಂಪೂರ್ಣ ಕಾನೂನು ಸುವ್ಯವಸ್ಥೆ ಕೇಂದ್ರ ಸರ್ಕಾರದ ಕೈಯಲ್ಲಿದೆ. ಅದ್ದರಿಂದ ಸತ್ಯ ಹೊರಬರಬೇಕು ಎಂದು ಹೇಳಿದ್ದರು.

ಇದೀಗ ಈ ಘಟನೆ ರಾಜಕೀಯ ಸ್ವರೂಪ ಪಡೆದುಕೊಂಡಿದೆ.

Advertisement

Udayavani is now on Telegram. Click here to join our channel and stay updated with the latest news.

Next