Advertisement

ಜಡ್ಜ್ ಗಳ ನೇಮಕಾತಿ ಹಕ್ಕು ಕೇಂದ್ರ ಸರ್ಕಾರದ್ದು, ಕೊಲಿಜಿಯಂ ಬಗ್ಗೆ ಸಚಿವ ರಿಜಿಜು ಅಸಮಾಧಾನ

10:20 AM Oct 18, 2022 | Team Udayavani |

ನವದೆಹಲಿ: ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ದೇಶದ ಜನರು ಅಸಮಧಾನ ಹೊಂದಿರುವುದಾಗಿ ಕೇಂದ್ರ ಕಾನೂನು ಮತ್ತು ನ್ಯಾಯ ಸಚಿವ ಕಿರಣ್ ರಿಜಿಜು, ಸಂವಿಧಾನದ ಪ್ರಕಾರ ನ್ಯಾಯಾಧೀಶರನ್ನು ನೇಮಕ ಮಾಡುವ ಕೆಲಸ ಕೇಂದ್ರ ಸರ್ಕಾರದ್ದಾಗಿದೆ ಎಂದು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಸುರತ್ಕಲ್ ಟೋಲ್ ತೆರವಿಗೆ ಹೋರಾಟಗಾರರು ಸಜ್ಜು: ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್

ಸೋಮವಾರ (ಅಕ್ಟೋಬರ್ 17) ಆರ್ ಎಸ್ ಎಸ್ ನ “ಪಾಂಚಜನ್ಯ” ವಾರಪತ್ರಿಕೆ ಅಹಮದಾಬಾದ್ ನಲ್ಲಿ ಆಯೋಜಿಸಿದ್ದ ಸಾಬರಮತಿ ಸಂವಾದ್ ಕಾರ್ಯಕ್ರಮದಲ್ಲಿ ಮಾತನಾಡಿದ ರಿಜಿಜು, ನ್ಯಾಯಾಧೀಶರು ಜಡ್ಜಗಳ ನೇಮಕಾತಿಯನ್ನು ನಿರ್ಧರಿಸುವಲ್ಲಿ ಹೆಚ್ಚಿನ ಸಮಯ ವ್ಯಯಿಸುತ್ತಿರುವುದನ್ನು ಗಮನಿಸಿದ್ದೇನೆ. ಇದರ ಪರಿಣಾಮ ಪ್ರಾಥಮಿಕ ಹಂತದ ನ್ಯಾಯವನ್ನು ಒದಗಿಸುವಲ್ಲಿ ವಿಳಂಬವಾಗುತ್ತಿದೆ ಎಂದು ದೂರಿದರು.

ಒಂದು ವೇಳೆ ನ್ಯಾಯಾಂಗವನ್ನು ಹದ್ದುಬಸ್ತಿನಲ್ಲಿಡಲು ಬೇರೆ ಮಾರ್ಗವಿಲ್ಲದಿದ್ದರೆ, ಅದಕ್ಕೆ ನ್ಯಾಯಾಂಗ ಕಾರ್ಯಶೀಲತೆ ಎಂಬ ಪದವನ್ನು ಬಳಸಬೇಕಾಗುತ್ತದೆ. ಹಲವು ನ್ಯಾಯಾಧೀಶರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಾರೆ. ಆದರೆ ಇದು ಎಂದಿಗೂ ತೀರ್ಪಿನ ಭಾಗವಾಗುವುದಿಲ್ಲ. ನ್ಯಾಯಾಧೀಶರಾಗಿ ನಿಮಗೆ ಪ್ರಾಯೋಗಿಕ ಸಮಸ್ಯೆ ಮತ್ತು ಆರ್ಥಿಕ ಮಿತಿಗಳ ಬಗ್ಗೆ ತಿಳಿದಿಲ್ಲ ಎಂದು ರಿಜಿಜು ಹೇಳಿದರು.

ಕಳೆದ ತಿಂಗಳು ಜೈಪುರದಲ್ಲಿ ನಡೆದ ಸಮ್ಮೇಳನದಲ್ಲಿಯೂ ಕೂಡಾ ಸಚಿವ ರಿಜಿಜು, ದೇಶದ ಉನ್ನತ ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಧೀಶರನ್ನು ನೇಮಕ ಮಾಡುವ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಪುನರ್ ಪರಿಶೀಲಿಸಬೇಕಾಗಿದೆ ಎಂದು ಅಭಿಪ್ರಾಯವ್ಯಕ್ತಪಡಿಸಿರುವುದಾಗಿ ವರದಿ ತಿಳಿಸಿದೆ.

Advertisement

ಏನಿದು ಕೊಲಿಜಿಯಂ ವ್ಯವಸ್ಥೆ:

ನ್ಯಾಯಾಧೀಶರಿಂದ ನ್ಯಾಯಾಧೀಶರ ನೇಮಕ ಮಾಡುವ ವ್ಯವಸ್ಥೆ ಇದಾಗಿದೆ. ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ನಾಲ್ವರು ಹಿರಿಯ ನ್ಯಾಯಾಧೀಶರನ್ನು ಒಳಗೊಂಡ ಸಮಿತಿಯು, ಇತರ ನ್ಯಾಯಾಧೀಶರ ನೇಮಕ ಮತ್ತು ವರ್ಗಾವಣೆ ಬಗ್ಗೆ ಅಂತಿಮ ತೀರ್ಮಾನ ಕೈಕೊಳ್ಳುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next