Advertisement

ರಸ್ತೆ ನಿರ್ಮಾಣದಲ್ಲೂ ರಾಜಕೀಯ: ಶಾಸಕ ಪ್ರೀತಂಗೌಡ

12:27 PM Jan 14, 2022 | Team Udayavani |

ಹಾಸನ: ನಗರದ ವರ್ತುಲ ರಸ್ತೆ ನಿರ್ಮಾಣಕ್ಕೆ ಅಡ್ಡಿ ಪಡಿಸುವ ಮೂಲಕ ಕೆಲವರು ರಾಜಕೀಯ ಮಾಡು ತ್ತಿದ್ದಾರೆ ಎಂದು ಶಾಸಕ ಪ್ರೀತಂಗೌಡ ಆರೋಪಿಸಿದರು.

Advertisement

ನಗರದ ಪೆನ್‌ಷನ್‌ ಮೊಹಲ್ಲಾ, ಕಾಟೀಹಳ್ಳಿ ಮತ್ತಿತರ ಕಡೆ ಒಳ ಚರಂಡಿ ಕಾಮಗಾರಿಗೆ ಚಾಲನೆ ನೀಡಿ, ವರ್ತುಲ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದ ಉದ್ದೂರು ಗ್ರಾಮದ ಬಳಿ ಗಲಾಟೆಯೇನೂ ನಡೆದಿಲ್ಲ. ಆದರೆ ಕೆಲವರು ರಸ್ತೆ ನಿರ್ಮಾಣದಲ್ಲಿ ರಾಜಕೀಯ ಬೆರೆಸುವ ಪ್ರಯತ್ನ ನಡೆಸಿದರು ಎಂದು ಜೆಡಿಎಸ್‌ ಮತ್ತು ಕಾಂಗ್ರೆಸ್‌ ಮುಖಂಡರ ಹೆಸರು ಹೇಳದೆ ತಿರುಗೇಟು ನೀಡಿದರು. ವರ್ತುಲ ರಸ್ತೆ ಕಾಮಗಾರಿ ಸುಸೂತ್ರವಾಗಿ ಮುಗಿದಿದೆ. ಕೆಲವರ ಅಡ್ಡಿಯಿಂದ ರಸ್ತೆ ನಿರ್ಮಾಣವಾಗುತ್ತಿರುವುದು ಜನರಿಗೂ ಗೊತ್ತಾ ಯಿತು. ನಾನೂ ಇನ್ನಷ್ಟು ಗಟ್ಟಿಯಾಗಿದ್ದೇನೆ. ಬಹಳ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ರಸ್ತೆ ನಿರ್ಮಾಣ ದಿಂದ ಆ ಭಾಗದಲ್ಲಿ ಅಭಿವೃದ್ಧಿ ವೇಗ ಹೆಚ್ಚಲಿದೆ ಎಂದರು.

ವಿವಿಧೆಡೆ ಕಾಮಗಾರಿಗೆ ಚಾಲನೆ

ನಗರದ ಡೇರಿ ವೃತ್ತದಿಂದ ಬಿ.ಕಾಟಿಹಳ್ಳಿ ,ಕಾಟಿಹಳ್ಳಿ ಕೊಪ್ಪಲು ಒಳಗೊಂಡಂತೆ ವಸತಿ ಪ್ರದೇಶ ಗಳ ಒಳಚರಂಡಿ ನಿರ್ಮಾಣದ ಕಾಮಗಾರಿಗೆ ಶಾಸಕ ಪ್ರೀತಂ ಜೆ. ಗೌಡ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹಾಸನ ನಗರದ ಅಭಿವೃದ್ಧಿಗೆ 165 ಕೋಟಿ ರೂ.ಅನುದಾನ ನೀಡಿದ್ದರು. ಆದರಲ್ಲಿ ಹಾಸನ ನಗರದ ಸುತ್ತಮುತ್ತಲಿನ ಕೆರೆಗೆ ಒಳಚರಂಡಿ ಕಲುಷಿತ ನೀರು ನೇರವಾಗಿ ಕೆರೆಗಳಿಗೆ ಆನಂತರ ನದಿಗೆ ಸೇರುತ್ತಿತ್ತು. ಅದಕ್ಕೆ ಶಾಶ್ವತ ಪರಿಹಾರ ಕಂಡು ಕೊಳ್ಳುವ ಸಲುವಾಗಿ ಕೊಳಚೆ ನೀರು ಶುದ್ಧೀಕರಣ ಘಟಕಗಳನ್ನು ಹಾಸನ ನಗರದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸ್ಥಾಪನೆ ಮಾಡಲು ಚಾಲನೆ ನೀಡಲಾಗಿದೆ ಎಂದರು.

Advertisement

ಬಹುದಿನದ ಬೇಡಿಕೆ

ಕೊಳಚೆ ನೀರು ಶುದ್ಧೀಕರಣ ಘಟಕ ಮಾಡುವು ದರ ಜತಗೆ ಒಳಚರಂಡಿ ವ್ಯವಸ್ಥೆ ಇಲ್ಲದೇ ಇರುವ ಪ್ರದೇಶ ಗುರುತಿಸಿ, ಒಳ ಚರಂಡಿ ಜಾಲ ನಿರ್ಮಿಸ ಲಾಗುತ್ತಿದೆ. ಹಾಸನ ನಗರದ ಹೊರ ವಲಯದ ಹೊಸ ಬಡಾವಣೆಗಳಲ್ಲಿ ಒಳಚರಂಡಿ ವ್ಯವಸ್ಥೆ ಆಗಬೇಕೆಂಬುದು ನಿವಾಸಿಗಳ ಬಹು ದಿನಗಳ ಬೇಡಿಕೆ ಎಂದು ತಿಳಿಸಿದರು. ಹಾಸನದ ಸುತ್ತ ಮುತ್ತಲಿನ 25 ಗ್ರಾಮಗಳನ್ನು ಹಾಸನ ನಗರಸಭೆ ವ್ಯಾಪ್ತಿಗೆ ಸೇರಿಸಿ ಅಮೃತ್‌ ಯೋಜನೆ ಮೂಲಕ ದಿನದ 24 ಗಂಟೆ ಕುಡಿಯುವ ನೀರನ್ನು ಕೊಡುವ ಯೋಜನೆ ಮಾಡಿದ್ದೇವೆ. ಒಳ ಚರಂಡಿ ಕಾಮಗಾರಿ ಪೂರ್ಣಗೊಳಿಸಿದ ನಂತರ ರಸ್ತೆ ಕಾಮಗಾರಿ ಪಾರ್ರಂಭ ಮಾಡಲಾಗುವುದು ಎಂದರು. ಹಾಸನ ಡೇರಿ ಸರ್ಕಲ್‌ನಿಂದ ಅರಸಿಕೆರೆ ರಸ್ತೆಯ ಎಡ ಮತ್ತು ಬಲ ಭಾಗದ ಬಡಾವಣೆ ಸೇರಿ ಎಸ್‌.ಎಂ.ಕೃಷ್ಣ ನಗರದ ವರೆಗೆ ಸುಮಾರು 16 ಬಡಾವಣೆಗೆ 24 ಕೋಟಿ ರೂ.ವೆಚ್ಚದಲ್ಲಿ ಒಳ ಚರಂಡಿ ಕಾಮಗಾರಿ ವರ್ಷದ ಅಂತ್ಯದ ಒಳಗೆ ಪೂರ್ಣಗೊಳಿಸಲು ನಿರ್ಧರಿಸಿದ್ದೇವೆಂದರು. ಈ ಕಾಮಗಾರಿ ಮುಗಿದ ನಂತರದ ದಿನಗಳಲ್ಲಿ ಸುಮಾರು 16 ಕೋಟಿ ವೆಚ್ಚದ ಕಾಂಕ್ರಿಟ್‌ ರಸ್ತೆ ನಿರ್ಮಿಸಲಾಗುತ್ತದೆ. ಜತೆಗೆ ದಾಸರಕಪ್ಪಲು, ಜಯನಗರ, ಗುಂಡೇಗೌಡನ ಕೊಪ್ಪಲು, ಬಟ್ಲರ್‌ ಕೊಪ್ಪಲು ಸಾಲಿಗಾಮೆ ರಸ್ತೆಗೆ ಹೊಂದಿಕೊಂಡಿರುವ ಮಾವಿನಹಳ್ಳಿ, ಹರಳಳ್ಳಿ ಗ್ರಾಮದಲ್ಲಿ ಒಳ ಚರಂಡಿ ವ್ಯವಸ್ಥೆ ಮಾಡಲು ಸುಮಾರು 24 ಕೋಟಿ ರೂ. ಕಾಮಗಾರಿ ಕೈಗೊಂಡಿದ್ದೇವೆಂದರು.

Advertisement

Udayavani is now on Telegram. Click here to join our channel and stay updated with the latest news.

Next