Advertisement
ಜಾತ್ಯತೀತ ಜನತಾದಳ ಮುಖಂಡ ಎಚ್ .ಡಿ.ಕುಮಾರಸ್ವಾಮಿ ಹಿಂದೊಮ್ಮೆ ಜಾತ್ಯತೀತತೆಗೆ ಅರ್ಥವೇನೆಂದು ಪ್ರಶ್ನಿಸಿ ವಿವಾದ ಸೃಷ್ಟಿಸಿಕೊಂಡಿದ್ದರು. ಆದರೆ, ಜಾತೀವಾರು ಮತಯಾಚಿಸಲು ಜನರನ್ನು ಪ್ರತ್ಯೇಕಿಸುವ ವಿಭಜಿಸುವ ರಾಜಕೀಯ ಪಕ್ಷಗಳಿಗೆ ಜಾತ್ಯತೀತತೆ ಒಗ್ಗುವುದಿಲ್ಲವೆಂಬುದನ್ನು ಕುಮಾರಸ್ವಾಮಿ ತಮ್ಮದೇ ಮಾತುಗಳಲ್ಲಿ ಹೇಳಿದ್ದಾರೆ ಎಂಬುದು ಅಷ್ಟೇ ಸತ್ಯವಾದ ಮಾತು.
Related Articles
Advertisement
ಬಿಜೆಪಿ: ಕೋಲಾರ ಕ್ಷೇತ್ರದಲ್ಲಿ ಬಿಜೆಪಿಗೆ ಗೆದ್ದು ಬಿಡುವಷ್ಟು ಮತದಾರರ ಒಲವಿಲ್ಲ. ಆದರೂ, ಲೋಕಸಭಾ ಚುನಾವಣೆ ನಂತರ ಎಲ್ಲಾ ಕ್ಷೇತ್ರ ಗೆಲ್ಲುವ ಉತ್ಸಾಹ ಬಂದು ಬಿಟ್ಟಿದೆ. ಅಲ್ಪಸಂಖ್ಯಾತರ ವಿರೋಧಿಗಳೆಂದು ಯಾವುದೇ ಮುಜುಗರವಿಲ್ಲದೆ ಗುರುತಿಸಿಕೊಳ್ಳುವ ಬಿಜೆಪಿಯ ಸಂಸದ ಮುನಿಸ್ವಾಮಿ ಇತ್ತೀಚೆಗೆ ಅಲ್ಪಸಂಖ್ಯಾತರಿಗೆ ಸೇವಾಕಾರ್ಯಕ್ರಮ ಗಳು ಮತ್ತು ಅಲ್ಪಸಂಖ್ಯಾತರ ಬಿಜೆಪಿಸೇರ್ಪಡೆ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಕೋಲಾರದ ಬಿಜೆಪಿ ಅಭ್ಯರ್ಥಿ ಎಂದೇ ಗುರುತಿ ಸಲ್ಪಟ್ಟಿರುವ ವರ್ತೂರು ಪ್ರಕಾಶ್, ಸಿದ್ದರಾಮಯ್ಯ ಕಣ್ಣಿಟ್ಟಿರುವ ಅಹಿಂದ ಮತದಾರರ ಮೇಲೆ ಪ್ರೀತಿ ಸುರಿಸುತ್ತಾ ಬಾಂಧವ್ಯವನ್ನು ಮತ್ತಷ್ಟು ಗಟ್ಟಿ ಮಾಡಿಕೊಳ್ಳುತ್ತಿದ್ದಾರೆ. ಬಿಜೆಪಿ, ಫೆ.9 ರಂದು ಕೋಲಾರದಲ್ಲಿ ದೊಡ್ಡ ಮಟ್ಟದಲ್ಲಿಯೇ ಎಸ್‌ಸಿ ಮೋರ್ಚಾ ಸಮಾವೇಶವನ್ನು ಬಹಿರಂಗವಾಗಿ ಏರ್ಪಡಿಸುತ್ತಿದೆ. ಈ ಸಭೆಯ ಮೂಲಕ ದಲಿತ ಮತದಾರರನ್ನು ಓಲೈಸಲು ಬಿಜೆಪಿ ಸಜ್ಜಾಗುತ್ತಿದೆ. ಜೊತೆಗೆ ಸಂಸದ ಮುನಿಸ್ವಾಮಿ ಮೇಲೆ ಮುನಿಸಿಕೊಂಡಿರುವ ಬಲಗೈನ ಒಂದು ಪಂಗಡದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನವೂ ನಡೆಸುತ್ತಿದೆ.
ಇರುವುದೆಲ್ಲವ ಬಿಟ್ಟು ಬೇರೆಡೆ ಗಮನ : ಪಕ್ಷಕ್ಕೆ ಮೂಲ ಬಂಡವಾಳ, ಠೇವಣಿಯಂತಿರುವ ಜಾತಿ ಧರ್ಮೀಯರ ಬಗ್ಗೆ ಅಷ್ಟಾಗಿ ಗಮನಹರಿಸದೆ ತಮಗೆ ವಿರೋಧಿಯಾಗಿರುವವರು ಅಥವಾ ತಮ್ಮ ಪಕ್ಷದ ಸಿದ್ದಾಂತದಿಂದ ದೂರ ಇರುವ ಮತದಾರರನ್ನು ಓಲೈಸಿಕೊಳ್ಳಲು ರಾಜಕೀಯ ಪಕ್ಷಗಳು ಮತ್ತು ರಾಜಕಾರಣಿಗಳು ಪ್ರಯತ್ನ ಪಡುತ್ತಿರುವುದು ಜಾತಿ ಮತ ಧರ್ಮದ ಸಭೆ, ಸಮಾವೇಶಗಳಲ್ಲಿ ದೃಢಪಡುತ್ತಿದೆ. ಬಿಜೆಪಿ ಬೆಂಬಲಿಗರು ಎಂದು ಗುರುತಿಸಿರುವ ಬ್ರಾಹ್ಮಣ, ಲಿಂಗಾಯಿತರ ಸಭೆಯನ್ನು ಬಿಜೆಪಿ ಇದುವರೆವಿಗೂ ಮಾಡಿಲ್ಲ. ದೂರವಿರುವ ಅಲ್ಪಸಂಖ್ಯಾತರನ್ನು ಸೆಳೆಯುತ್ತಿದೆ. ಹಾಗೆಯೇ ಜೆಡಿಎಸ್‌ಗೆ ಒಕ್ಕಲಿಗರ ಸಭೆ ಮಾಡುವ ಅನಿವಾರ್ಯತೆಯೂ ಇಲ್ಲ. ಆದ್ದರಿಂದಲೇ ದಲಿತ, ಹಿಂದುಳಿದವರ ಮೇಲೆ ಕಣ್ಣಿಟ್ಟಿದೆ. ಕಾಂಗ್ರೆಸ್‌ನ ಬೆಂಬಲಿಗರೆಂದು ಗುರುತಿಸಿಕೊಂಡಿರುವ ಅಹಿಂದ ಮತದಾರರನ್ನು ಬಿಟ್ಟು ಕಾಂಗ್ರೆಸ್ ಮುಖಂಡರು ಒಕ್ಕಲಿಗರ ಸಭೆ ಮಾಡಿ ಮುಗಿಸಿದ್ದಾರೆ. ಇದರ ಬೆನ್ನಲ್ಲೇ ಕೋಲಾರದಲ್ಲಿ ಕುರುಬ ಮುಖಂಡರ ಸಭೆಯೂ ನಡೆದಿದೆ. ಬಲಜಿಗರನ್ನು ವಿಧಾನಪರಿಷತ್ ಸದಸ್ಯಎಂ.ಆರ್.ಸೀತಾರಾಂ ಸಂಘಟಿಸುತ್ತಿದ್ದಾರೆ. ಸಿದ್ದರಾಮಯ್ಯರ ಪುತ್ರ ಯತೀಂದ್ರ ಸಮ್ಮುಖದಲ್ಲಿ ಜೆಡಿಎಸ್‌ನತ್ತ ವಾಲುತ್ತಿದ್ದಾರೆಂಬ ಕಾರಣಕ್ಕೆ ಅಲ್ಪಸಂಖ್ಯಾರ ಸಭೆಯನ್ನು ನಡೆಸಿ ಅವರ ವಿಶ್ವಾಸವನ್ನು ಮತ್ತಷ್ಟು ಸುಭದ್ರಪಡಿಸಿಕೊಳ್ಳುವ ಪ್ರಯತ್ನ ಮಾಡಿದೆ.
– ಕೆ.ಎಸ್.ಗಣೇಶ್