Advertisement

ಸ್ವತಂತ್ರ ಧರ್ಮ ಹೋರಾಟದ ಹಿಂದೆ ರಾಜಕೀಯ

12:48 PM Aug 08, 2017 | Team Udayavani |

ಧಾರವಾಡ: ವೀರಶೈವ, ಲಿಂಗಾಯತರು ಸ್ವತಂತ್ರ ಧರ್ಮಕ್ಕಾಗಿ ನಡೆಸಿರುವ ಹೋರಾಟದ ಹಿಂದೆ ರಾಜಕೀಯ ಅಡಗಿದೆ ಎಂದು ಕರ್ನಾಟಕ ಉತ್ತರ ಪ್ರಾಂತ ಸಹ ಸಂಘಚಾಲಕ ಅರವಿಂದರಾವ್‌ ದೇಶಪಾಂಡೆ ಹೇಳಿದರು. 

Advertisement

ಇಲ್ಲಿನ ದೈವಜ್ಞ ಕಲ್ಯಾಣ ಮಂಟಪದಲ್ಲಿ ರಾಷ್ಟ್ರೀಯ  ಸ್ವಯಂ ಸೇವಕ ಸಂಘದ ಧಾರವಾಡ ಘಟಕದ ವತಿಯಿಂದ  ಸೋಮವಾರ ಹಮ್ಮಿಕೊಂಡಿದ್ದ ರಕ್ಷಾ ಬಂಧನ ಉತ್ಸವದಲ್ಲಿ ಅವರು ಮಾತನಾಡಿದರು. ಈ ವಿಷಯದ ಮೂಲಕ ಸಮಾಜವನ್ನು ಒಡೆಯುವುದು ರಾಜಕಾರಣಿಗಳ ಉದ್ದೇಶವಾಗಿದೆ. 

ಇನ್ನು ವೀರಶೈವ, ಲಿಂಗಾಯರು ತಾವು ಹಿಂದುಗಳಲ್ಲ ಎಂಬುದಾಗಿ ಹೇಳಿಕೊಂಡಿದ್ದರೂ ಅವರ ಆಚರಣೆಗಳು ಮಾತ್ರ ಹಿಂದೂಗಳಾಗಿಯೇ ತೋರುತ್ತವೆ.  ಇನ್ನು ಇದರ ನಡುವಿನ ಬಡಿದಾಟದಿಂದ ಬಸವಣ್ಣನಿಗೆ ಅಪಮಾನ ಮಾಡಿದಂತಾಗಿದೆ ಎಂದರು.

ಚೀನಾದಿಂದ ನಾವು ಆಮದು ಮಾಡಿಕೊಳ್ಳುವ ವಸ್ತುಗಳಿಂದಲೇ ಚೀನಾ ಬೃಹತ್‌ ಆಗಿ ಬೆಳೆಯುತ್ತಿದೆ. ಭಾರತ ದೇಶಕ್ಕಿಂತ ಚೀನಾ ಸೈನಿಕರ ಬಳಿ ಶಸ್ತ್ರಾಸ್ತಗಳ ಸಂಖ್ಯೆ ಇದೆ. ಆದರೆ ನಮ್ಮ ದೇಶದ ವಿರುದ್ಧ ಯುದ್ಧ ಮಾಡುವ ಶಕ್ತಿ ಇಲ್ಲವಾಗಿದೆ.  

ಹೀಗಾಗಿ ನಾವುಗಳು ಚೀನಾ ಉತ್ಪಾದಿತ ವಸ್ತುಗಳ ಖರೀದಿಗೆ ನಿಷೇಧ ಹೇರಬೇಕಿದೆ ಎಂದರು. ಕ್ಲಾಸಿಕ್‌ ಸ್ಪರ್ಧಾತ್ಮ ಪರೀಕ್ಷಾ ತರಬೇತಿ ಕೇಂದ್ರದ ನಿರ್ದೇಶಕ ಲಕ್ಷ್ಮಣ ಉಪ್ಪಾರ, ಜಿಲ್ಲಾ ಸಂಘ ಚಾಲಕ ಮಲ್ಲಿಕಾರ್ಜುನ ನಡಕಟ್ಟಿ ಸೇರಿದಂತೆ ನೂರಾರು ಸಂಘದ ಸ್ವಯಂ ಸೇವಕರು ಹಲವರು ಇದ್ದರು. 

Advertisement

ಇದಕ್ಕೂ ಮೊದಲು ಭಗವಾ ಧ್ವಜಕ್ಕೆ ಅತಿಥಿಗಳು ರಾಖೀ ಕಟ್ಟುವುವ  ಮೂಲಕ ರಕ್ಷ ಬಂಧನ ಉತ್ಸವಕ್ಕೆ ಚಾಲನೆ ನೀಡಿದರು. ನಂತರ ಸ್ವಯಂ ಸೇವಕರು ಪರಸ್ಪರ ರಾಖೀ ಕಟ್ಟಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next