Advertisement

ಸೇನಾ ವಿಚಾರ ಪಾಲಿಟಿಕ್ಸ್ : ರಾಷ್ಟ್ರಪತಿಗಳಿಗೆ ಪತ್ರ ಬರೆದವರು ಯಾರು?

12:15 PM Apr 13, 2019 | Team Udayavani |

ನವದೆಹಲಿ: ಸೇನಾ ವಿಷಯಗಳನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವುದನ್ನು ವಿರೋಧಿಸಿ ಭಾರತೀಯ ಸೇನೆಯ ಕೆಲವು ನಿವೃತ್ತ ಅಧಿಕಾರಿಗಳು ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್‌ ಅವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂಬ ಸುದ್ದಿಯೊಂದು ಗುರುವಾರದಂದು ಭಾರೀ ಸದ್ದು ಮಾಡಿತ್ತು. ಆದರೆ ಈ ರೀತಿಯಾಗಿ ಯಾರೂ ರಾಷ್ಟ್ರಪತಿಯವರಿಗೆ ಪತ್ರವನ್ನೇ ಬರೆದಿಲ್ಲ ಎಂಬ ಅಂಶ ಇದೀಗ ಬಯಲಾಗಿದೆ. ರಾಷ್ಟ್ರಪತಿ ಭವನದ ಕೆಲ ಮೂಲಗಳು ಈ ರೀತಿಯ ಯಾವುದೇ ಪತ್ರ ರಾಷ್ಟ್ರಪತಿ ಭವನ ಸ್ವೀಕರಿಸಿರುವುದನ್ನು ನಿರಾಕರಿಸಿದೆ ಎಂದು ಎ.ಎನ್‌.ಐ. ಸುದ್ದಿಸಂಸ್ಥೆ ವರದಿ ಮಾಡಿದೆ.

Advertisement

ನಿವೃತ್ತ ಸೇನಾ ಪ್ರಮುಖರೂ ಸೇರಿದಂತೆ ಸುಮಾರು 150 ಮಾಜೀ ಸೈನಿಕರು ಈ ಲೋಕಸಭಾ ಚುನಾವಣೆಯಲ್ಲಿ ಸಶಸ್ತ್ರ ದಳಗಳ ರಾಜಕೀಯಕರಣವಾಗುತ್ತಿದೆ ಎಂದು ಆರೋಪಿಸಿ ರಾಷ್ಟ್ರಪತಿಯವರಿಗೆ ಪತ್ರವೊಂದನ್ನು ಬರೆದಿದ್ದಾರೆ ಎಂದು ದೇಶದ ವಿವಿಧ ಮಾಧ್ಯಮಗಳು ಗುರುವಾರದಂದು ವರದಿ ಮಾಡಿದ್ದವು.

ಈ ಪತ್ರಕ್ಕೆ ಪ್ರಮುಖ ಸಹಿದಾರರೆಂದು ಹೇಳಲಾಗಿದ್ದ ನಿವೃತ್ತ ಜನರಲ್‌ ಸುನಿತ್‌ ಫ್ರಾನ್ಸಿಸ್‌ ರೋಡ್ರಿಗಸ್‌ ಅವರು ಈ ರೀತಿಯ ಆಕ್ಷೇಪಣಾ ಪತ್ರವೊಂದಕ್ಕೆ ತಾನು ಸಹಿ ಮಾಡಿರುವ ವಿಚಾರವನ್ನೇ ನಿರಾಕರಿಸಿದ್ದಾರೆ ಮತ್ತು ಈ ರೀತಿಯ ಸುದ್ದಿಯೇ ಸುಳ್ಳು ಎಂದು ಅವರು ಹೇಳಿದ್ದಾರೆ. ‘ಈ ರೀತಿಯ ಪತ್ರದ ಕುರಿತಾಗಿ ನನಗೇನೂ ಗೊತ್ತಿಲ್ಲ . ನನ್ನ ಜೀವಿತಾವಧಿಯುದ್ದಕ್ಕೂ ನಾನು ರಾಜಕೀಯದಿಂದ ದೂರವೇ ಇದ್ದೇನೆ. ನನ್ನ 42 ವರ್ಷಗಳ ಸೇವಾವಧಿಯ ಬಳಿಕ ಇದೀಗ ನನಗೆ ರಾಜಕೀಯ ಒಗ್ಗುವುದಿಲ್ಲ ಎಂದು ನನಗೆ ಗೊತ್ತಿದೆ. ಮತ್ತೆ ಇಂತಹ ಸುಳ್ಳು ಸುದ್ದಿಗಳನ್ನು ಸೃಷ್ಟಿಸುತ್ತಿರುವ ವ್ಯಕ್ತಿಗಳು ಯಾರೆಂದೂ ನನಗೆ ಗೊತ್ತಿಲ್ಲ ಎಂದವರು ಹೆಳಿದ್ದಾರೆ.

ಇನ್ನು ಏರ್‌ ಚೀಫ್ ಮಾರ್ಷಲ್‌ ನಿರ್ಮಲ ಚಂದ್ರ ಸೂರಿ ಅವರು ತಮ್ಮ ಹೇಳಿಕೆಯನ್ನೇ ತಪ್ಪಾಗಿ ಬಿಂಬಿಸಲಾಗಿದೆ ಎಂದು ಹೇಳಿದ್ದಾರೆ. ‘ನಮ್ಮ ಸಶಸ್ತ್ರ ಪಡೆಗಳು ರಾಜಕೀಯ ಮುಕ್ತವಾಗಿವೆ ಮತ್ತು ಚುನಾವಣೆಯಲ್ಲಿ ಆರಿಸಿ ಬರುವ ಸರಕಾರವನ್ನು ಬೆಂಬಲಿಸುತ್ತವೆ. ಮತ್ತು ಇಂತಹ ಯಾವುದೇ ಪತ್ರಕ್ಕೆ ನನ್ನ ಸಮ್ಮತಿಯನ್ನು ಪಡೆದುಕೊಂಡಿಲ್ಲ’ ಎಂದು ಸೂರಿ ಅವರು ಸ್ಪಷ್ಟಪಡಿಸಿದ್ದಾರೆ.

150 ಮಾಜೀ ಸೇನಾಧಿಕಾರಿಗಳ ಸಹಿಯೊಂದಿಗೆ ರಾಷ್ಟ್ರಪತಿಯವರಿಗೆ ಸಲ್ಲಿಸಲಾಗಿದೆ ಎಂದು ಹೇಳಲಾಗುತ್ತಿರುವ ಈ ಪತ್ರ ಕಳೆದೆರಡು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next