Advertisement
ಕೆ.ಆರ್.ಪೇಟೆ ಉಪಚುನಾವಣೆ ಗೆದ್ದು ಜಿಲ್ಲೆಯಲ್ಲಿ ಖಾತೆ ತೆರೆದಕಮಲ, ಪಕ್ಷ ಸಂಘಟನೆಗೆ ಒತ್ತು ನೀಡಿತ್ತು. ಅದರಂತೆ ಪಕ್ಷವನ್ನು ಜಿಲ್ಲಾದ್ಯಂತ ವಿಸ್ತರಿಸಲು ಕಸರತ್ತು ನಡೆಸುತ್ತಿದೆ. ಆದರೆ ಪ್ರಸ್ತುತ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಒಳ ಒಪ್ಪಂದದ ಪರಿಣಾಮ ಕೇಸರಿ ಪಡೆ ಮುಗ್ಗರಿಸುವಂತಾಗಿದೆ. ಇದು ಪಕ್ಷ ಸಂಘಟನೆ ಮೇಲೆ ದೊಡ್ಡ ಹೊಡೆತ ಬಿದ್ದಂತಾಗಿದೆ.
Related Articles
Advertisement
ಒಳ ಮೈತ್ರಿಯಿಂದ ಹಿನ್ನಡೆ: ಚುನಾವಣೆಯಲ್ಲಿ ಜೆಡಿಎಸ್ ಹಾಗೂ ಕಾಂಗ್ರೆಸ್ ಪಕ್ಷಗಳಿಗೆ ತ್ರಿಕೋನ ಸ್ಪರ್ಧೆ ನೀಡುವ ಮೂಲಕ ನಡುಕ ಹುಟ್ಟಿಸಿದ್ದ ಬಿಜೆಪಿ ಕೊನೇ ಕ್ಷಣದಲ್ಲಿ ಮಂಕಾಗಿತ್ತು. ರಾಜ್ಯ ನಾಯಕರ ನಡುವಿನ ಒಳ ಮೈತ್ರಿಗಳಿಂದ ಪಕ್ಷಕ್ಕೆ ಹಿನ್ನಡೆಯಾಯಿತು. ಸರ್ಕಾರ, ಸಚಿವರು ಇದ್ದರೂ ಚುನಾವಣೆಯಲ್ಲಿ ನಿರೀಕ್ಷಿತ ಸಾಧನೆ ಮಾಡಲು ಸಾಧ್ಯವಾಗದಿರುವುದು ಒಳ ಮೈತ್ರಿಯೇಕಾರಣವಾಗಿದೆ ಎನ್ನಲಾಗುತ್ತಿದೆ. 2015ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಯಲ್ಲಿ ಸುಮಾರು 150ಕ್ಕೂ ಹೆಚ್ಚು ಮತ ಪಡೆದಿದ್ದ ಬಿಜೆಪಿ ಆದರೆ ಈ ಬಾರಿ ತೀವ್ರ ಪೈಪೋಟಿ ನೀಡಿದರೂ ಕೇವಲ 50 ಮತಗಳಿಗೆ ಕುಸಿಯುವಂತಾಗಿತ್ತು.
ಬಿಜೆಪಿ ಮತಗಳುಕೈ ಪಾಲು
2020ರಲ್ಲಿ ನಡೆದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಿಜೆಪಿ ಉತ್ತಮ ಸಾಧನೆ ಮಾಡಿತ್ತು. ಸ್ಥಳೀಯ ಸಂಸ್ಥೆಗಳಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ಸುಮಾರು 350ಕ್ಕೂ ಹೆಚ್ಚು ಬೆಂಬಲಿತ ಸದಸ್ಯರನ್ನು ಗೆಲ್ಲಿಸಿಕೊಂಡಿತ್ತು. ಬಹುತೇಕ ಕಡೆ ಗ್ರಾಪಂ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆದರೆ ಆ ಮತಗಳು ಸಹ ಬಿಜೆಪಿಗೆ ಬಿದ್ದಿಲ್ಲ.
ಇದನ್ನೂ ಓದಿ:- ವಿಜಯಪುರ: ಶೀಲ ಶಂಕಿಸಿ ಪತ್ನಿಯನ್ನು ಹತ್ಯೆ ಮಾಡಿ ಪತಿ ಆತ್ಮಹತ್ಯೆ
50 ಮತಗಳು ಹೊರತು ಪಡಿಸಿ ಉಳಿದ ಮತಗಳೆಲ್ಲವೂ ಕಾಂಗ್ರೆಸ್ ಪಾಲಾಗಿವೆ ಎಂಬ ರಾಜಕೀಯ ಚರ್ಚೆಗಳು ನಡೆಯುತ್ತಿವೆ. ಸ್ಥಳೀಯ ಮಟ್ಟದಲ್ಲಿ ಜೆಡಿಎಸ್ ವಿರುದ್ಧವಾಗಿರುವ ಬಿಜೆಪಿ ಕೊನೇ ಕ್ಷಣದಲ್ಲಿ ಕಾಂಗ್ರೆಸ್ ಪರ ಮತಗಳನ್ನು ತಿರುಗಿಸಿದ್ದು, ಪಕ್ಷ ಠೇವಣಿ ಕಳೆದುಕೊಳ್ಳಲು ಕಾರಣವಾಗಿದೆ. ಇನ್ನಾದರೂ ರಾಜ್ಯ ಹಾಗೂ ಸ್ಥಳೀಯ ನಾಯಕರು ಒಳ ಮೈತ್ರಿ ಬಿಟ್ಟು ಪಕ್ಷದ ಬೆಳವಣಿಗೆಗೆ ಮುಂದಾಗಬೇಕು ಎಂಬುದು ಬಿಜೆಪಿ ಕಾರ್ಯಕರ್ತರ ಆಗ್ರಹವಾಗಿದೆ.
ವಲಸಿಗರಿಗೆ ಹೆಚ್ಚು ಮಣೆ
ಜಿಲ್ಲೆಯಲ್ಲಿ ಸಾಕಷ್ಟು ಮಂದಿ ನಿಷ್ಠಾವಂತ ಕಾರ್ಯಕರ್ತರು, ಮುಖಂಡರಿದ್ದಾರೆ. ಆದರೆ ವಿಧಾನಸಭೆ ಚುನಾವಣೆಯಲ್ಲಿ ಬೇರೆ ಪಕ್ಷಗಳಿಂದ ಬರುವ ವಲಸಿ ಗರಿಗೆ ಹೆಚ್ಚು ಮನ್ನಣೆ ನೀಡಲಾಗು ತ್ತಿದೆ. ನಂತರ ಪಕದಿಂದ ಅನುಕೂಲ ಪಡೆದ ನಂತರ ಮತ್ತೆ ಬೇರೆ ಪಕ್ಷಗಳಿಗೆ ಹಾರುವುದು ಸಾಮಾನ್ಯವಾಗಿದೆ. ಅಲ್ಲದೆ, ಪ್ರತೀ ಚುನಾವಣೆಯಲ್ಲೂ ಜೆಡಿಎಸ್‌ನೊಂದಿಗಿನ ಒಳ ಮೈತ್ರಿಯಿಂದ ಪಕ್ಷ ಹಿನ್ನಡೆ ಅನುಭವಿಸುವಂತಾಗಿದೆ ಎಂದು ಬಿಜೆಪಿ ಮುಖಂಡರೊಬ್ಬರು ಬೇಸರ ವ್ಯಕ್ತಪಡಿಸುತ್ತಾರೆ
ಸಂಘಟನೆ ಮಾಡಿದ್ದ ಬೂಕಹಳ್ಳಿ ಮಂಜು
ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುವ ದೃಷ್ಟಿಯಿಂದ ಬೂಕಹಳ್ಳಿ ಬಿ.ಸಿ.ಮಂಜುಕಳೆದ10 ತಿಂಗಳಿನಿಂದ ಜಿಲ್ಲೆ ಸುತ್ತುವ ಮೂಲಕ ಸಂಘಟನೆ ಮಾಡಿದ್ದರು. ಪ್ರತಿ ಗ್ರಾಪಂ ಸದಸ್ಯರನ್ನು ಭೇಟಿ ಮಾಡಿ ಪಕ್ಷದ ಬಲ ಹೆಚ್ಚುವಂತೆ ಮಾಡಿದ್ದರು. ಆದರೆ ಮತದಾನಕ್ಕೂ ಮುನ್ನ ನಡೆದ ಬೆಳವಣಿಗೆಗಳಿಂದ ಬೇಸತ್ತುಕಣ್ಣೀರು ಹಾಕುವ ಮೂಲಕ ಏನೂ ಮಾಡಲಾಗದಂಥ ಸ್ಥಿತಿ ನಿರ್ಮಾಣವಾಗಿತ್ತು. ನಮ್ಮ ಜತೆಗಿದ್ದವರೇ ನನಗೆ ಕೈಕೊಟ್ಟರು. ಪಕ್ಷದ ಬೆಳವಣಿಗೆ ಸಹಿಸದೇ ತುಳಿಯುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
– ಎಚ್.ಶಿವರಾಜು