Advertisement
ಅಲ್ಲಿಗೆ ರಾಜ್ಯದಲ್ಲಿ ಬಿಜೆಪಿ ಹೊಸ ನಾಯಕತ್ವಬೆಳೆಸಲು ತಾಲೀಮು ಶುರುವಿಟ್ಟುಕೊಂಡಿದ್ದೇವೆಎಂಬ ಸಂದೇಶ ನೀಡಿದ್ದಾರೆಯೇ ಎಂಬ ಪ್ರಶ್ನೆಮೂಡತೊಡಗಿದೆ.ರಾಜ್ಯ ರಾಜಕೀಯದಲ್ಲಿ ನಡೆದಬೆಳವಣಿಗೆಯಲ್ಲಿ ಮುಖ್ಯಮಂತ್ರಿ ಸ್ಥಾನಬದಲಾಗಿತ್ತು. ಯಡಿಯೂರಪ್ಪ ಸ್ಥಾನದಲ್ಲಿ, ಅವರಸಮ್ಮತಿಯೊಂದಿಗೆ ಬಸವರಾಜ ಬೊಮ್ಮಾಯಿಮುಖ್ಯಮಂತ್ರಿ ಪಟ್ಟ ಅಲಂಕರಿಸಿದ್ದರು.
Related Articles
Advertisement
ಕೆಲರಾಜ್ಯಗಳಲ್ಲಿ ಯಶಸ್ಸನ್ನೂ ಕಂಡಿದೆ. ಅದೇ ಮಾದರಿಪ್ರಯೋಗವನ್ನು ಕರ್ನಾಟಕದಲ್ಲಿ ಮಾಡಲುಮುಂದಾಗಿದೆಯೇ? ಇದರ ಸಾಧಕ-ಬಾಧಕಸನ್ನಿವೇಶ ಏನೆಲ್ಲಾ ಸೃಷ್ಟಿಯಾಗಬಹುದು,ಯಾವ ತಿರುವುಗಳನ್ನು ಪಡೆದುಕೊಳ್ಳಬಹುದುಎಂಬ ಪರೀಕ್ಷೆಗೆ ಈ ಪ್ರಾಯೋಗಿಕ ಅಸ್ತ್ರಬಳಸಿರಬಹುದು ಎಂಬ ಅನಿಸಿಕೆ ಬಿಜೆಪಿವಲಯದಲ್ಲಿ ಮೂಡಿವೆ.
ಸಿಎಂಗೆ ಟಾಸ್ಕ್ ಕೊಟ್ಟರೆ ಶಾ?: ರಾಜ್ಯದಲ್ಲಿ ಹೊಸನಾಯಕತ್ವ ಬೆಳೆಸುವ ಚಿಂತನೆಯಲ್ಲಿರುವ ಬಿಜೆಪಿಹೈಕಮಾಂಡ್ ಚುನಾವಣೆಗೆ ಇನ್ನೂ ಸುಮಾರು 18ತಿಂಗಳು ಇರುವಾಗಲೇ ಅಗತ್ಯ ಪೂರ್ವ ತಯಾರಿ,ಪಕ್ಷ ಸಂಘಟನೆ, ನಾಯಕತ್ವ ಬೆಳೆಸಿಕೊಳ್ಳುವ,ಪಕ್ಷದಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು,ಒಗ್ಗೂಡಿಸಿಕೊಂಡು ಹೋಗುವ ನಿಟ್ಟಿನಲ್ಲಿ ಸಿಎಂಬಸವರಾಜ ಬೊಮ್ಮಾಯಿ ಅವರಿಗೆ ಟಾಸ್ಕ್ನೀಡಿದೆಯೇ? ಅಮಿತ್ ಶಾ ಅವರ ಹೇಳಿಕೆಇಂತಹ ವ್ಯಾಖ್ಯಾನಕ್ಕೆ ಕಾರಣವಾಗಿದೆ.
ಮುಖ್ಯಮಂತ್ರಿಯಾಗಿ ಕಳೆದೊಂದು ತಿಂಗಳಲ್ಲಿಯೇ ಬಸವರಾಜ ಬೊಮ್ಮಾಯಿ ಸರಳನಡೆ, ಆರ್ಥಿಕ ವೆಚ್ಚ ಕಡಿತ, ವಿಐಪಿ ಸಂಸ್ಕೃತಿಗೆವಿದಾಯ, ಹಂತ ಹಂತವಾಗಿ ಆಡಳಿತದಲ್ಲಿಬಿಗಿ ಹಿಡಿತ, ಅಧಿಕಾರಿ ಶಾಹಿಗೆ ಮೂಗುದಾರಹಾಕುವ, ಆಡಳಿತ ಸುಧಾರಣೆಗೆ ಮಹತ್ವದಹೆಜ್ಜೆಗಳನ್ನಿರಿಸುವ, ಯಾವುದೇ ವಿವಾದಗಳಿಗೆಅವಕಾಶ ನೀಡದ ರೀತಿಯಲ್ಲಿ ಸಾಗಿರುವುದು,ಸಹಜವಾಗಿಯೇ ಬಿಜೆಪಿ ಹೈಕಮಾಂಡ್ ಗಮನಸೆಳೆದಿದೆ ಎಂದು ಹೇಳಲಾಗುತ್ತಿದೆ.
2023 ವಿಧಾನಸಭೆ ಚುನಾವಣೆಗೆ ಇನ್ನೂಕಾಲವಕಾಶವಿದೆ ಅಲ್ಲಿವರೆಗೆ ಏನಾಗುತ್ತದೆಯೋನೋಡೋಣ. ಆದರೆ ನಾವೆಲ್ಲ ಪಕ್ಷದ ಶಿಸ್ತಿನಸಿಪಾಯಿಗಳು. ಪಕ್ಷ ಹೇಳುವುದನ್ನು ಒಪ್ಪಿನಡೆಯುತ್ತೇವೆ ಎಂಬ ಬಿಜೆಪಿ ಹಿರಿಯನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶಶೆಟ್ಟರ ಅಭಿಪ್ರಾಯ ಹಾಗೆಯೇ ಸಾಮೂಹಿಕನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂಬ ಮತ್ತೂಬ್ಬ ಹಿರಿಯ ಮುಖಂಡ ಈಶ್ವರಪ್ಪಹೇಳಿಕೆ ಜತೆಗೆ ಇನ್ನೂ ಕೆಲ ಸಚಿವರು-ನಾಯಕರು ಬೊಮ್ಮಾಯಿ ನಾಯಕತ್ವಕ್ಕೆ “ಸೈ’ ಎಂದಿರುವುದು ಬಿಜೆಪಿಯಲ್ಲಿನ ಸಂಚಲನ, ಜಿಜ್ಞಾಸೆಗೆನಾಂದಿಯಾಡಿದೆ.
ಮತ್ತೂಂದೆಡೆ ಮಾಜಿ ಸಿಎಂಯಡಿಯೂರಪ್ಪರನ್ನು ಬದಿಗೆ ಸರಿಸುವ ಯತ್ನನಡೆಯುತ್ತಿಲ್ಲ ಎಂಬ ಸ್ಪಷ್ಟನೆಗಳೂ ಕೇಳಿಬರುತ್ತಿರುವಹಿನ್ನೆಲೆಯಲ್ಲಿ ಶಾ ಹೇಳಿಕೆ ಮುಂದಿನ ದಿನಗಳಲ್ಲಿಯಾವ ತಿರುವುಗಳನ್ನು ಪಡೆದುಕೊಳ್ಳಲಿದೆ ಎಂದುಕಾದು ನೋಡಬೇಕಾಗಿದೆ.
ಅಮರೇಗೌಡ ಗೋನವಾರ