Advertisement

ಜನರ ವಿಶ್ವಾಸ ಮರುಸ್ಥಾಪಿಸಿ: ಕೇಂದ್ರೀಯ ತನಿಖಾ ಸಂಸ್ಥೆಗೆ ಸಿಜೆಐ ಕಿವಿಮಾತು

08:59 PM Apr 01, 2022 | Team Udayavani |

ನವದೆಹಲಿ: “ಸರ್ಕಾರಗಳು, ಸಚಿವರು ಬದಲಾಗುತ್ತಲೇ ಇರುತ್ತಾರೆ. ಆದರೆ, ನೀವು ಮಾತ್ರ ಶಾಶ್ವತವಾಗಿರುತ್ತೀರಿ. ಹಾಗಾಗಿ, ನಿಮ್ಮ ಸಂಸ್ಥೆಯ ಮೇಲಿನ ಜನರ ವಿಶ್ವಾಸವನ್ನು ಮರುಸ್ಥಾಪಿಸಿಕೊಳ್ಳುವುದು ನಿಮ್ಮ ಮೊದಲ ಆದ್ಯತೆಯಾಗಿರಲಿ” ಎಂದು ಕೇಂದ್ರೀಯ ತನಿಖಾ ಸಂಸ್ಥೆಗೆ (ಸಿಬಿಐ) ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎನ್‌.ವಿ. ರಮಣ ಕಿವಿಮಾತು ಹೇಳಿದ್ದಾರೆ.

Advertisement

ಸಿಬಿಐ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಅವರು, ಕೆಲವು ವಿಚಾರಗಳಲ್ಲಿ ತನಿಖಾ ಸಂಸ್ಥೆಯು ನಡೆದುಕೊಂಡ ರೀತಿ ಹಾಗೂ ತೋರಿದ ನಿರ್ಲಿಪ್ತತೆಯು ಸಂಸ್ಥೆಯ ಮೇಲಿನ ವಿಶ್ವಾಸವನ್ನು ಪ್ರಶ್ನಿಸುವಂತಾಗಿದೆ. ಹಾಗಾಗಿ, ಸಂಸ್ಥೆಯು ಕರ್ತವ್ಯ ಪರತೆಯನ್ನು ಮೆರೆಯುವ ಮೂಲಕ ಸಾಮಾಜಿಕ ಅಭಿಪ್ರಾಯವನ್ನು ಮರುಸ್ಥಾಪಿಸಬೇಕಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಮತೀಯ, ಧಾರ್ಮಿಕ, ಶಾಂತಿ ಕಾಪಾಡುವಲ್ಲಿ ಸಾಮಾಜಿಕ ಜಾಲತಾಣ ಮತ್ತು ಮಾಧ್ಯಮದ ಪಾತ್ರ

ಇದೇ ವೇಳೆ, “ಕೇಂದ್ರೀಯ ತನಿಖಾ ಸಂಸ್ಥೆಗಳನ್ನು ಒಟ್ಟಿಗೆ ನಿರ್ವಹಿಸುವಂಥ ಪ್ರತ್ಯೇಕ ವ್ಯವಸ್ಥೆಯೊಂದು ರೂಪುಗೊಳ್ಳುವುದು ಇಂದಿನ ಅಗತ್ಯತೆಗಳಲ್ಲೊಂದಾಗಿದೆ. ಅದರಿಂದ ತನಿಖಾ ಸಂಸ್ಥೆಗಳು ವಿವಿಧ ಜನಪ್ರತಿನಿಧಿಗಳ ಅವಗಾಹನೆಯಲ್ಲಿ ಕರ್ತವ್ಯ ನಿರ್ವಹಿಸುವುದನ್ನು ತಪ್ಪಿಸಲು ಸಾಧ್ಯವಾಗುತ್ತದೆ” ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next