Advertisement
ಪ್ರಧಾನಿ ಮೋದಿ ಅವರು ಈಡೇರಿಸದ ಆಶ್ವಾಸನೆಗಳನ್ನು ಪ್ರಸ್ತಾವಿಸಿ ಕಾಂಗ್ರೆಸ್ ಎಪ್ರಿಲ್ ಫೂಲ್ ದಿನವನ್ನು “ಜುಮ್ಲಾ ದಿನ’ ಎಂದು ಕರೆದರೆ, ಬಿಜೆಪಿಯು ರಾಹುಲ್ ಗಾಂಧಿ ಅವರು ಮಾಡಿರುವ ಎಡವಟ್ಟುಗಳ ವೀಡಿಯೋ ಅಪ್‌ಲೋಡ್ ಮಾಡಿ, ಮೂರ್ಖರ ದಿನವನ್ನು “ಪಪ್ಪು ಡೇ’ ಎಂದು ಕರೆದಿದೆ. ಇದೇ ವೇಳೆ, ಲೇಖಕ ಚೇತನ್ ಭಗತ್ ರವಿವಾರ ತಾವು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾಗಿ ಘೋಷಿಸುವ ಮೂಲಕ ಎಲ್ಲರನ್ನೂ ಮೂರ್ಖರನ್ನಾಗಿಸಿದ್ದಾರೆ.
ಮೂರ್ಖರ ದಿನವನ್ನು ಪಿಎಂ ಮೋದಿ ಅವರನ್ನು ಲೇವಡಿ ಮಾಡಲು ಬಳಸಿರುವ ಕಾಂಗ್ರೆಸ್, ಜುಮ್ಲಾ ದಿನ ಎಂದು ಕರೆದಿದೆ. ಉದ್ಯೋಗ ಸೃಷ್ಟಿ, ಸ್ಮಾರ್ಟ್ ಸಿಟಿ ಯೋಜನೆ, ಕಪ್ಪು ಹಣ ವಾಪಸ್, ಎಲ್ಲರ ಖಾತೆಗೂ 15 ಲಕ್ಷ ಸಹಿತ ವಿವಿಧ ವಿಚಾರಗಳನ್ನು ಪ್ರಸ್ತಾ ವಿಸಿ ಮೋದಿ ಅವರನ್ನು ಟೀಕಿಸಲಾಗಿದೆ. “ನೋಟು ಅಪಮೌಲ್ಯದಿಂದ ಭ್ರಷ್ಟಾಚಾರ ನಿರ್ಮೂಲನೆ ಯಾಗಿದೆ, ನೀರವ್ ಮೋದಿ, ಚೋಕ್ಸಿಯಂಥನವರು ಸ್ವತ್ಛಭಾರತ ಯಶಸ್ವಿಗೊಳಿಸಿದ್ದಾರೆ, ಸರಕಾರ 200 ಕೋಟಿ ಉದ್ಯೋಗ ಸೃಷ್ಟಿಸಿದೆ. ಮಂಗಳ ಗ್ರಹದಲ್ಲಿನ ಏಲಿಯನ್‌ಗಳೂ ಭಾರತದಲ್ಲಿ ನೌಕರಿ ಮಾಡಲಿವೆ, ರೋಬೋಟ್‌ಗಳು ಸ್ಮಾರ್ಟ್‌ಸಿಟಿಯಲ್ಲಿ ಕಸ ಎತ್ತುತ್ತಿವೆ’ ಎಂದು ವ್ಯಂಗ್ಯ ಮಾಡಲಾಗಿದೆ.
Related Articles
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರನ್ನು ಉಲ್ಲೇಖೀಸಿ, ಮೂರ್ಖರ ದಿನವನ್ನು “ಪಪ್ಪು ದಿವಸ’ ಎಂದು ಬಿಜೆಪಿ ಕರೆದಿದೆ. ರಾಹುಲ್ ಅವರು ಹಲವು ಬಾರಿ ತಮ್ಮ ಭಾಷಣಗಳಲ್ಲಿ ಮಾಡಿರುವ ಎಡವಟ್ಟುಗಳು, ತಪ್ಪು ಗಳನ್ನು ತೋರಿಸುವ ವಿಡಿಯೋವೊಂ ದನ್ನು ಬಿಜೆಪಿ ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದೆ. ಜತೆಗೆ, “ಮಿಸ್ಟರ್ ರಾಹುಲ್ ತಪ್ಪೇ ಮಾಡು ವುದಿಲ್ಲ. ನೀವು ಎಡವಟ್ಟು ಗಳ ಅನಭಿಷಿಕ್ತ ದೊರೆ. ಇದು ಕೇವಲ ಟ್ರೇಲರ್. ನೀವು ಯಾವತ್ತೂ ನಮಗೆ ಮನ ರಂಜನೆ ನೀಡುವು ದನ್ನು ಮುಂದು ವರಿಸುತ್ತೀರಿ ಎಂದು ನಂಬುತ್ತೇನೆ’ ಎಂದೂ ಬರೆದು ರಾಹುಲ್ ಕಾಲೆಳೆಯಲಾಗಿದೆ.
Advertisement