Advertisement

Political ಪ್ರಜ್ಞೆ ಅನಿವಾರ್ಯ ; ಸ್ಪರ್ಧೆ ವಯೋಮಿತಿ 18ಕ್ಕೆ ಇಳಿಕೆ

10:21 AM Aug 14, 2023 | Team Udayavani |

ದೇಶದಲ್ಲಿ ಚುನಾವಣೆಗೆ ಸ್ಪರ್ಧಿಸುವವರ ವಯೋಮಿತಿಯನ್ನು 25ರಿಂದ 18ಕ್ಕೆ ಇಳಿಸಬೇಕೆಂದು ಈಚೆಗೆ ಸಂಸದೀಯ ಸಮಿತಿಯೊಂದು ಶಿಫಾರಸು ಮಾಡಿದೆ. ಇದರ ಸಾಧಕ-ಬಾಧಕಗಳೇನು? ಈ ಬಗ್ಗೆ ಚಾವಡಿಯಲ್ಲೊಂದು ಚರ್ಚೆ

Advertisement

ಭಾರತದ ಸಂಸದೀಯ ಸಮಿತಿಯು ಚುನಾವಣೆಯಲ್ಲಿ ಸ್ಪರ್ಧಿಸುವವರ ವಯಸ್ಸಿನ ಮಿತಿಯನ್ನು 25ರಿಂದ 18ಕ್ಕೆ ಇಳಿಸುವಂತೆ ಸ್ಥಾಯಿ ಸಮಿತಿ ಪ್ರಸ್ತಾವನೆ ಸಲ್ಲಿಸಿರುವುದು ನಿಜಕ್ಕೂ ಸ್ವಾಗತಾರ್ಹ.

ಯುಗದಿಂದ ಯುಗಕ್ಕೆ ಯುವಜನತೆಯ ಸಮಸ್ಯೆಗಳು ಉಳಿದಿವೆ, ಬೆಳೆದಿವೆ. ಸಾಮಾಜಿಕ ಸಂಕೀ ರ್ಣತೆಯಿಂದಾಗಿ ಇಂದು ಅವು ಹೆಚ್ಚು ಜಟಿಲಗೊಂಡಿವೆ. ರಾಜಕೀಯ ಕ್ಷೇತ್ರಗಳಲ್ಲೂ ತಮಗೆ ಸರಿಯೆನಿಸಿದ್ದನ್ನು ಸಾಧಿಸಲು, ಅಸಮ್ಮತವಾದದ್ದನ್ನು ಪ್ರತಿಭಟಿಸಲು ಎಂದಿಗಿಂತ ಹೆಚ್ಚಾಗಿ ಯುವಜನತೆ ಇಂದು ಸಿದ್ಧವಾಗಿದೆ. ಆದರೆ ನಿರುದ್ಯೋಗ, ಬಡತನ, ಹಿಂಸೆ, ಭ್ರಷ್ಟಾಚಾರ, ಅಸಮಾನತೆ ಇವುಗಳನ್ನೆಲ್ಲ ಪೋಷಿಸಿಕೊಂಡು ಬಂದಿರುವ ಸದ್ಯದ ರಾಜಕೀಯ ವ್ಯವಸ್ಥೆ, ನಡುವಿನಿಂದ ನಮ್ಮ ರಾಜಕೀಯ ನಾಯಕರು ಆಯ್ಕೆಯಾಗುತ್ತಾರೆ. ಆದರೆ ಸಮಸ್ಯೆಗಳು ಹುಟ್ಟುವುದೇ ಇಲ್ಲಿ. ರಾಜಕೀಯವೇ ವೃತ್ತಿಯಾಗಿರುವ ಕಪಟಿಗಳು, ವಂಚಕರು, ಮೋಸಗಾರರು, ಸ್ವಾರ್ಥಿಗಳು ರಾಜಕೀಯ ನಾಯಕರಾಗುತ್ತಿರುವ ಈ ಸಂದರ್ಭ ದಲ್ಲಿ ಯುವ ಜನತೆಗೆ ಚುನಾವಣೆಯಲ್ಲಿ ಸ್ಪರ್ಧಿಸುವ ಅವಕಾಶ ಕಲ್ಪಿಸುವುದು ಬದಲಾವಣೆಯ ಸಂಕೇತ.

ಏಕೆಂದರೆ ತಮ್ಮ ಅಸ್ತಿತ್ವವೇ ಅನವಶ್ಯಕವೆನಿಸುವ ಮೂಲಭೂತ ಬದಲಾವಣೆಯನ್ನು ರಾಜಕೀಯ ವನ್ನು ವೃತ್ತಿ ಮಾಡಿಕೊಂಡ ಈ ವ್ಯವಸ್ಥೆಯನ್ನು ಯಾರೂ ಬಯಸುವುದಿಲ್ಲ. ಇಂಥ ವೃತ್ತಿನಿರತ ರಾಜಕೀಯ ಧುರೀಣರನ್ನು ಮೊದಲು ಹೋಗಲಾಡಿಸಿ, ಆಯಾ ಕ್ಷೇತ್ರಗಳಲ್ಲಿ ಆಡಳಿತ ನಡೆಸಬಲ್ಲ ಯುವ ಶಕ್ತಿಯನ್ನು ತರಬೇಕು.

ಸ್ವಾತಂತ್ರ್ಯಾ ಅನಂತರದ ಭಾರತ ಒಬ್ಬ ಪ್ರಾಮಾ ಣಿಕ ನಿಷ್ಠುರ ನಾಯಕನನ್ನು ಪಡೆಯುವ ಅವಕಾಶ, 20 ವರ್ಷಗಳ ಹಿಂದೆ ಜಯ ಪ್ರಕಾಶ್‌ ನಾರಾಯಣ್‌ ಮನೆ ಬಾಗಿಲಿಗೆ ಬಂದ ಪ್ರಧಾನಿ ಪದವನ್ನು ತಿರಸ್ಕರಿಸಿ ದಾಗಲೇ ದೊರಕದೆ ಹೋಯಿತು. ಈ ವ್ಯಕ್ತಿ ಖಂಡಿತ ವಾಗಿ ದೇಶದ ರಾಜಕೀಯವನ್ನು ಬೇರೊಂದು ದಿಶೆಯಲ್ಲಿ ತಿರುಗಿಸಲು ಸಮರ್ಥರಾಗಿದ್ದರು.

Advertisement

ವಯಸ್ಸಿನ ಆಧಾರ ದಿಂದಾದರೂ ಯುವಕರು ಎಂದು ಕರೆಯಬಹುದಾದ ನಮ್ಮ ಬಹುಪಾಲು ಯುವಜನಾಂಗ ದೊಡ್ಡ ವರ ಭ್ರಷ್ಟ, ಕುರೂಪಿ ಜಗತ್ತಿಗೆ ಹೊಂದಿಕೊಂಡು ಹೇಗಾದರೂ ಬದುಕುವುದರಲ್ಲಷ್ಟೇ ತೃಪ್ತಿ ಕಾಣುತ್ತಿದ್ದಾರೆ ಎಂಬ ಆರೋಪ ಸತ್ಯಕ್ಕೆ ದೂರವಾದದ್ದು. ಎಲ್ಲ ಯುವಜನರೂ ತಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಒಂದು ಸಮರ್ಪಕ ನೆಲೆ ದೊರಕಿಸಿಕೊಳ್ಳಬೇಕೆಂದು ಯತ್ನಿಸುತ್ತಾರೆ. ಪ್ರಸ್ತುತ ನಮ್ಮ ಈ ರಾಜಕೀಯ ವ್ಯವಸ್ಥೆ ಗಲೀಜಾಗಿದೆ. ಅದನ್ನು ಮೂಲಭೂತವಾಗಿ ಮಾರ್ಪಡಿಸಲು ಯವಜನರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ನೀಡುವ ಈ ಸಂಸದೀಯ ಸಮಿತಿಯ ಶಿಫಾರಸನ್ನು ಮೆಚ್ಚಬೇಕು.

ಏಕೆಂದರೆ ಈಗಿರುವ ರಾಜಕೀಯ ವ್ಯವಸ್ಥೆಯನ್ನು ಬದಲಿಸಲು ಕಷ್ಟಸಾಧ್ಯ. ಒಂದೊಮ್ಮೆ ಬದಲಿಸಲು ಸಾಧ್ಯವಿದ್ದರೆ ಅದು ಯುವಜನರಿಂದ ಮಾತ್ರ.

  • ಜಯನ್‌ ಮಲ್ಪೆ, ಉಡುಪಿ
Advertisement

Udayavani is now on Telegram. Click here to join our channel and stay updated with the latest news.

Next