Advertisement

ನರಸಾಪುರದಲ್ಲಿ ಪೋಲಿಯೋ ಲಸಿಕೆ ಕಾರ್ಯಕ್ರಮ

07:41 AM Mar 11, 2019 | Team Udayavani |

ಕೋಲಾರ: ತಾಲೂಕಿನ ನರಸಾಪುರ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಭಾನುವಾರ ಮೊದಲನೇ ಹಂತದ ರಾಷ್ಟ್ರೀಯ ಪಲ್ಸ್‌ ಪೋಲಿಯೋ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. 

Advertisement

ಈ ಕಾರ್ಯಕ್ರಮಕ್ಕೆ ನರಸಾಪುರ ಗ್ರಾಮ ಪಂಚಾಯ್ತಿ ಸದಸ್ಯ ಆಂಜಿ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿ  ಮಾತನಾಡಿ, 5ವರ್ಷದೊಳಗಿನ ಪ್ರತಿ ಮಗುವಿಗೂ ಲಸಿಕೆ ಹಾಕಿಸುವುದರಿಂದ ಪೋಲಿಯೋ ವೈರಾಣು ಹರಡುವಿಕೆಯನ್ನು ತಡೆಗಟ್ಟಿ ದೇಶದಲ್ಲಿ ಪೋಲಿಯೋ ಅಂಗವಿಕಲತೆ ನಿರ್ಮೂಲನೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ರೇಷ್ಮೆ ಬೆಳೆಗಾರರ ಸಂಘದ ನಿರ್ದೇಶಕ ಕೆಇಬಿ ಚಂದ್ರಶೇಖರ್‌ ಮಾತನಾಡಿ, ನವಜಾತ ಶಿಶುಗಳಿಗೆ ನೀಡುವ ಲಸಿಕಾ ಡೋಸಿನೊಂದಿಗೆ, 6 ವಾರಗಳ ನಂತರ ಒಂದು ತಿಂಗಳ ಅಂತರದಲ್ಲಿ ಮಕ್ಕಳಿಗೆ ಮೂರು ಸಾರಿ ನೀಡುವ ಲಸಿಕೆಯೊಂದಿಗೆ ಪಲ್ಸ್‌ ಪೋಲಿಯೋ ಕಾರ್ಯಕ್ರಮ ಹಾಗೂ ವಿಶೇಷ ಸುತ್ತಿನ ಲಸಿಕಾ ಕಾರ್ಯಕ್ರಮಗಳ ಎಲ್ಲಾ ಸುತ್ತುಗಳಲ್ಲಿ ಲಸಿಕೆ ಹಾಕಿಸುವುದರಿಂದ ಮಾತ್ರ ಪೋಲಿಯೋ ನಿರ್ಮೂಲನೆಯಾಗುತ್ತದೆ ಎಂದು ತಿಳಿಸಿದರು.

ಅಂಗನವಾಡಿ ಕಾರ್ಯಕರ್ತೆ ಮುನಿರತ್ನಮ್ಮ, ಸಹಾಯಕಿ ಶೇಷಮ್ಮ, ಆಶಾ ಕಾರ್ಯಕರ್ತೆ ಯಲ್ಲಮ್ಮ, ನಾಗರತ್ನಮ್ಮ, ಅವಿನಾಶ್‌, ಪವನ್‌, ಗ್ರಾಮ ಪಂಚಾಯ್ತಿ ಉಪಾಧ್ಯಕ್ಷರು, ಸದಸ್ಯರು, ಗ್ರಾಮಸ್ಥರು, ಯುವ ಮುಖಂಡರು ಭಾಗವಹಿಸಿದ್ದರು.

ವೇಮಗಲ್‌: ಸಂಜೆವರೆಗೂ ಪೋಲಿಯೋ ಲಸಿಕೆ
ಕೋಲಾರ:
ತಾಲೂಕಿನ ವೇಮಗಲ್‌ ಸಮೀಪದ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್‌ ಪೋಲಿಯೋ ಕಾರ್ಯಕ್ರಮಕ್ಕೆ ಗ್ರಾಪಂ ಅಧ್ಯಕ್ಷೆ ಶಶಿಕಲಾ ಮಗುವಿಗೆ ಲಸಿಕೆ ಹಾಕುವುದರ ಮೂಲಕ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಹೋಬಳಿಯ ಎಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಪಲ್ಸ್‌ ಪೋಲಿಯೋ ಲಸಿಕೆಯನ್ನು ಬೆಳಿಗ್ಗೆಯಿಂದ ಸಂಜೆಯತನಕ ಹಾಕಿದರು.

Advertisement

ವೇಮಗಲ್‌ ಬಸ್‌ ನಿಲ್ದಾಣದಲ್ಲಿ ಆಶಾ ಕಾರ್ಯಕರ್ತೆಯರು ಪಲ್ಸ್‌ ಪೋಲಿಯೋ ಲಸಿಕೆ ಹಾಕಲು ಸಿದ್ಧರಾಗಿದ್ದರು. ವೈದ್ಯಾಧಿಕಾರಿ ರವಿಕಿರಣ್‌, ಸಿಬ್ಬಂದಿ ಆನಂದ್‌, ರಾಮಕ್ಕ, ನಾಗಮಣಿ, ಸೌಭಾಗ್ಯ, ಆಶಾ, ಮುಕ್ತಾಂಬಾ, ಶೈಲಜಾ, ಅರವಿಂದ್‌, ಸರೋಜಮ್ಮ ಮತ್ತು ಗ್ರಾಮದ ಪೋಷಕರು ಮಕ್ಕಳಿಗೆ ಲಸಿಕೆ ಹಾಕಿಸಲು ಆಗಮಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next