Advertisement

ಪೋಲಿಯೋ ಲಸಿಕೆ ಜಾಗೃತಿ ಅಭಿಯಾನ

02:23 PM Jan 19, 2020 | Suhan S |

ಗಜೇಂದ್ರಗಡ: ಜ. 19ರಂದು ಐದು ವರ್ಷದೊಳಗಿನ ಮಕ್ಕಳಿಗೆ ಪಲ್ಸ್‌ ಪೋಲಿಯೋ ಲಸಿಕೆ ಹಾಕಿಸುವ ಕುರಿತು ಪಟ್ಟಣದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಶನಿವಾರ ಜಾಗೃತಿ ಜಾಥಾ ನಡೆಸಿದರು.

Advertisement

ಪಟ್ಟಣದ ಸರಕಾರಿ ಪ್ರೌಢಶಾಲೆ ಹಾಗೂ ಆರೋಗ್ಯ ಇಲಾಖೆ ಸಹಯೋಗದಲ್ಲಿ ಪೋಲಿಯೋ ಲಸಿಕೆ ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಾಯಿತು. ಮುಖ್ಯ ಶಿಕ್ಷಕ ಆರ್‌. ಎನ್‌. ಶೆಟ್ಟರ, ಎಸ್‌.ವಿ. ಮಲಜಿ, ಕೆ.ವಿ. ಮ್ಯಾಕಲ್‌, ಎಂ.ಎನ್‌. ಕಡಗದ, ಬಿ.ಐ. ನಂದಿಕೋಲಮಠ, ಡಿ.ಎಂ. ಧಾರವಾಡ, ಆರೋಗ್ಯ ಇಲಾಖೆಯ ಎಂ.ಬಿ. ಗಡ್ಡಿ, ಸುನೀಲ ಹಬೀಬ, ಪ್ರವೀಣ ರಾಠೊಡ ಸೇರಿ ಇತರರು ಇದ್ದರು.

ತೋಂಟದಾರ್ಯ ಶಾಲೆ: ಪಟ್ಟಣದ ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಪ್ರಾಥಮಿಕ ಮತ್ತು ಪ್ರೌಢಶಾಲೆ ವತಿಯಿಂದ ಪೋಲಿಯೋಲಸಿಕೆ ಜಾಗೃತಿ ಜಾಥಾ ನಡೆಸಿದರು. ಶಿಕ್ಷಕರಾದ ಪಿ.ಸಿ. ಗೌರಿಮಠ, ಎಸ್‌.ಎಸ್‌. ತೊಟ್ಟಿಬಸಪ್ಪನವರ, ಕೆ.ಆರ್‌. ಗೊಲಗೇರಿ, ಎಸ್‌.ಬಿ. ಗೆದಗೇರಿ, ಆರ್‌.ಎ. ಅಮಟೆ, ಪಿ.ಡಿ. ಮಾಳಗಿ ಇದ್ದರು.

ಕೆಂಪಣ್ಣವರ ಕಾನ್ವೆಂಟ್‌: ಪಟ್ಟಣದ ಶ್ರೀ ಸಿದ್ದರಾಮೇಶ್ವರ ಶಿಕ್ಷಣ ಸಮಿತಿಯ ಕೆಂಪಣ್ಣವರ ಕಾನ್ವೆಂಟ್‌ ಶಾಲೆ ವತಿಯಿಂದ ಪಲ್ಸ್‌ ಪೋಲಿಯೋ ಲಸಿಕೆ ಜಾಗೃತಿ ಜಾಥಾ ನಡೆಯಿತು. ಮನೆ ಮನೆಗೆ ತೆರಳಿ ಐದು ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯ ಪೋಲಿಯೋ ಲಸಿಕೆ ಹಾಕಿಸಲು ಸೂಚಿಸಿದರು. ಮುಖ್ಯ ಶಿಕ್ಷಕ ಎ.ಎಂ. ಕೊಪ್ಪಳ, ಎಂ.ಟಿ. ಕೆಂಪಣ್ಣವರ, ಎಸ್‌.ಎಸ್‌. ರೆಡ್ಡೇರ, ಮಂಜುಳಾ ಚಂಪಳ್ಳಿ, ಕನಕಾ ಅರಳಿಗಿಡದ, ಬಿ.ಕೆ. ಬಾವಾನ, ಆರತಿ ಬೆಂಡಿಗೇರ, ರಶ್ಮಿ ಪಿ, ಕಸ್ತೂರಿ ಜಾವೂರ, ಯಾಸ್ಮಿನಬೇಗಂ ಬೆಂಗಳೂರಿ ಸೇರಿ ಇತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next