ಶ್ರೀನಗರ: ಭಯೋತ್ಪಾದಕರು ನಡೆಸಿದ ಗುಂಡಿನ ದಾಳಿಯಲ್ಲಿ ಪೊಲೀಸ್ ಸಿಬ್ಬಂದಿಯೊಬ್ಬರು ಗಾಯಗೊಂಡ ಘಟನೆ ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ಶನಿವಾರ ಬೆಳಗ್ಗೆ ನಡೆದಿದೆ.
“ಬೆಳಿಗ್ಗೆ 8:40 ರ ಸುಮಾರಿಗೆ, ಭಯೋತ್ಪಾದಕರು ಜಮ್ಮು ಮತ್ತು ಕಾಶ್ಮೀರ ಪೊಲೀಸ್ ಕಾನ್‌ಸ್ಟೆಬಲ್ ಗುಲಾಮ್ ಹಾಸನ್ ಅವರನ್ನು ನಗರದ ಸಫಕದಲ್ ಪ್ರದೇಶದ ಐವಾ ಸೇತುವೆಯ ಬಳಿ ಗುಂಡು ಹಾರಿಸಿ ತೀವ್ರವಾಗಿ ಗಾಯಗೊಂಡಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಳಗ್ಗೆ 7 ಗಂಟೆಗೆ ಕರ್ತವ್ಯಕ್ಕೆ ತೆರಳಿದ್ದರು. 10 ನಿಮಿಷಗಳ ನಂತರ ನನಗೆ ಅವನ ಬಗ್ಗೆ ಕರೆ ಬಂದಿತು. ಆತ ಅಧಿಕಾರಿಗಳಿಗೆ ಡ್ರೈವರ್ ಆಗಿ ಕೆಲಸ ಮಾಡುತ್ತಾನೆ. ಯಾರಿಗಾದರೂ ಕೇಡು ಮಾಡಿದ್ದಾನಾ? ಅವನು ಏನೂ ಮಾಡಲಿಲ್ಲ. ನಮ್ಮ ಕಣಿವೆಯಲ್ಲಿ ಇಂತಹ ಕೃತ್ಯಗಳು ನಡೆಯುವುದು ತಪ್ಪು” ಎಂದು ಪೊಲೀಸ್ ಸಿಬ್ಬಂದಿಯ ಸಹೋದರ ಹೇಳಿದರು.
ಇದನ್ನೂ ಓದಿ:ಅಸಾನಿ ಚಂಡಮಾರುತದ ಎಫೆಕ್ಟ್: ಒಡಿಶಾ, ಆಂಧ್ರ ಕರಾವಳಿ ಭಾಗದಲ್ಲಿ ಚಂಡಮಾರುತ, ಮಳೆ ಸಾಧ್ಯತೆ?
ಘಟನೆ ನಡೆದ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ದಾಳಿಕೋರರ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ವರದಿ ತಿಳಿಸಿದೆ.
ಶುಕ್ರವಾರ ಪಾಲ್ಘಾಮ್ ನಲ್ಲಿ ನಡೆದಿದ್ದ ಎನ್ ಕೌಂಟರ್ ನಲ್ಲಿ ಮೂವರು ಹಿಜ್ಬುಲ್ ಉಗ್ರರನ್ನು ಹತ್ಯೆ ಮಾಡಲಾಗಿದೆ.