Advertisement
ಇವರನ್ನು ಭೇಟಿ ಮಾಡಲು ತೆರಳುತ್ತಿದ್ದ ಬಿಜೆಪಿ ಸಂಸದ ಕಿರೋಡಿ ಲಾಲ್ ಮೀನಾರನ್ನು ಪೊಲೀಸರು ಶುಕ್ರವಾರ ವಶಕ್ಕೆ ಪಡೆದಿದ್ದರು. ಈ ವೇಳೆ ತನ್ನ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆಂದು ಮೀನಾ ಆರೋಪಿಸಿದ್ದರು. ಅನಂತರ ನಂತರ ಬಿಜೆಪಿ ಕಾರ್ಯಕರ್ತರು ರೊಚ್ಚಿಗೆದ್ದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಿವಾಸದತ್ತ ಮೆರವಣಿಗೆ ಆರಂಭಿಸಿದರು. ಪೊಲೀಸರು ಬಿಜೆಪಿ ಕಾರ್ಯಕರ್ತರನ್ನು ತಡೆದ ಹಿನ್ನೆಲೆಯಲ್ಲಿ ಕೆಲವರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಅವರನ್ನು ನಿಯಂತ್ರಿಸಲು ಪೊಲೀಸರು ಲಾಠಿ ಚಾರ್ಜ್ ಆರಂಭಿಸಿದರು. ಬ್ಯಾರೆಕೇಡ್‌ಗಳನ್ನು ಕೂಡ ಉದ್ರಿಕ್ತರು ಧ್ವಂಸಗೊಳಿಸಿದ್ದಾರೆ. ಜತೆಗೆ ಕೆಲವು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಲಾಗಿದೆ.
ಯೋಧರ ಪತ್ನಿಯರ ನಿಯೋಗದ ಜತೆಗೆ ಸಿಎಂ ಅಶೋಕ್ ಗೆಹ್ಲೋಟ್ ಭೇಟಿಯಾಗಿ ಅವರ ಅಹವಾಲು ಆಲಿಸಿದರು. ಬಳಿಕ ಟ್ವೀಟ್ ಮಾಡಿದ ಅವರು ಯೋಧರ ತ್ಯಾಗವನ್ನು ಮರೆಯಲಾಗದು. ಅವರಿಗೆ ನನ್ನ ನಮನಗಳು ಎಂದು ಬರೆದುಕೊಂಡಿದ್ದಾರೆ. ರಾಜ್ಯ ಸರ್ಕಾರ ಅವರ ಬಗ್ಗೆ ಗೌರವ ಹೊಂದಿದೆ ಎಂದು ಹೇಳಿದ್ದಾರೆ.
Related Articles
ಫೆ.28ರಿಂದ ಜೈಪುರದಲ್ಲಿರುವ ರಾಜಸ್ಥಾನ ಉಪ ಮುಖ್ಯಮಂತ್ರಿ ಸಚಿನ್ ಪೈಲಟ್ ನಿವಾಸದೆದುರು ಮೂವರು ಹುತಾತ್ಮ ಯೋಧರ ಪತ್ನಿಯರು ಧರಣಿ ಆರಂಭಿಸಿದ್ದರು. ಕೆಲವು ದಿನಗಳ ಹಿಂದಷ್ಟೇ ಅನಿರ್ದಿಷ್ಟಾವಧಿ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು. ಸರ್ಕಾರಿ ನಿಯಮಗಳನ್ನು ಬದಲಾಯಿಸೇಕು, ಹುತಾತ್ಮ ಯೋಧರ ಮಕ್ಕಳಿಗೆ ಮಾತ್ರವಲ್ಲ, ಮಾನವೀಯ ನೆಲೆಯಲ್ಲಿ ಕುಟುಂಬಸ್ಥರಿಗೂ ನೌಕರಿ ಸಿಗುವಂತೆ ಮಾಡಬೇಕು. ಯೋಧರ ಹಳ್ಳಿಗಳಿಗೆ ರಸ್ತೆ ನಿರ್ಮಿಸಬೇಕು, ಅವರ ವಿಗ್ರಹ ಸ್ಥಾಪನೆ ಮಾಡಬೇಕೆಂದು ಆಗ್ರಹಿಸಿದ್ದಾರೆ.
Advertisement