ರಾಮನಗರ: ಜಿಲ್ಲಾ ಕೇಂದ್ರ ರಾಮನಗರದಲ್ಲಿ ಇಂದು ಮುಖ್ಯಮಂತ್ರಿಗಳ ಕಾರ್ಯಕ್ರಮದ ವೇದಿಕೆಯತ್ತ ಸಾಗಲು ತಡೆವೊಡ್ಡಿದ ಪೊಲೀಸ್ ಅಧಿಕಾರಿಗಳ ವಿರುದ್ಧ ವಿಧಾನ ಪರಿಷತ್ ಸದಸ್ಯ ಪುಟ್ಟಣ್ಣ ಹರಿಹಾಯ್ದ ಘಟನೆ ನಡೆಯಿತು.
ನಗರದ ಜಿಲ್ಲಾ ಕಚೇರಿಗಳ ಸಂಕೀರ್ಣದ ಆವರಣದಲ್ಲಿ ನಡೆಯುತ್ತಿದ್ದ ಮುಖ್ಯಮಂತ್ರಿಗಳ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪುಟ್ಟಣ್ಣ ಆಗಮಿಸಿದ್ದರು.
ಜಿಲ್ಲಾಧಿಕಾರಿ ಕಚೇರಿಯ ಬಲಭಾಗದ ಗೇಟಿಗೆ ಕಾರಿನಲ್ಲಿ ಬಂದ ಪುಟ್ಟಣ್ಣ ಅವರಿದ್ದ ಕಾರನ್ನು ಪೊಲೀಸರು ತಡೆದು, ಎಡ ಭಾಗದ ಗೇಟಿನಿಂದ ಒಳ ಹೋಗುವಂತೆ ತಿಳಿಸಿದ್ದಾರೆ.
ಇದನ್ನೂ ಓದಿ:ಒಂದೇ ತಿಂಗಳಲ್ಲಿ 17.5 ಲಕ್ಷ ಭಾರತೀಯರವಾಟ್ಸ್‌ಆ್ಯಪ್ ಖಾತೆ ಬ್ಯಾನ್
ಅದರಂತೆ ಎಡಭಾಗದ ಗೇಟಿಗೆ ಬಂದಾಗ ಪೊಲೀಸ್ ಅಧಿಕಾರಿಗಳು ಐಜಿಯವರು ಬರುತ್ತಿದ್ದಾರೆ ಎಂದು ಒಳ ಪ್ರವೇಶಿಸಲು ತಡೆವೊಡ್ಡಿದರು. ಇದರಿಂದ ಕೋಪಗೊಂಡ ಪುಟ್ಟಣ್ಣ, ‘ನಿಮ್ಗೆ ಫ್ರೋಟೊಕಾಲ್ ಗೊತ್ತೇನ್ರಿ, ಜನಪ್ರತಿನಿಧಿಗಳನ್ನೇ ಒಳಗೆ ಬಿಡುವುದಿಲ್ಲ ಅಂದರೆ ಹೇಗೆ” ಎಂದು ಕಿಡಿಕಾರಿದರು.
ಅಂತಿಮವಾಗಿ ಪುಟ್ಟಣ್ಣ ಅವರಿದ್ದ ಕಾರನ್ನು ಪೊಲೀಸರು ಒಳಬಿಟ್ಟರು.