Advertisement
ನಗರದಲ್ಲಿ ಶನಿವಾರ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋಕುಲ್ ಅವರ ಆರೋಗ್ಯ ವಿಚಾರಿಸಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಭದ್ರಾವತಿಯಲ್ಲಿ ಯುವಮೋರ್ಚಾ ಪದಾಧಿಕಾರಿ ಗೋಕುಲ್ ಮೇಲೆ ಶಾಸಕರ ಕಡೆಯವರು ಹಲ್ಲೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ಆದರೆ ಕಾಂಗ್ರೆಸ್ ಮುಖಂಡರು ಗೋಕುಲ್ ಮೇಲೆಯೇ ಕೇಸು ದಾಖಲಿಸಿದ್ದಾರೆ. ಇದೆಲ್ಲ ಸರಿಯಲ್ಲ ಎಂದರು.
ಸಂಸತ್ ಮೇಲಿನ ದಾಳಿಗೆ ಸಂಬಂಧಿಸಿ ಪ್ರತಿಕ್ರಿಯಿಸಿದ ರಾಘವೇಂದ್ರ, ಇದೊಂದು ಗಂಭೀರ ಮತ್ತು ತಲೆತಗ್ಗಿಸುವ ವಿಷಯ. ಇದರ ಹಿಂದೆ ಷಡ್ಯಂತ್ರವಿದೆ. ಮೈಸೂರಿನ ಸಂಸದ ಪ್ರತಾಪಸಿಂಹ ಅವರ ಮೇಲೆ ವೃಥಾ ಆರೋಪ ಮಾಡಲಾಗುತ್ತಿದೆ. ಕರ್ನಾಟಕದವರು ಎಂದರೆ ಎಲ್ಲರಿಗೂ ಪ್ರೀತಿ ಇರುತ್ತದೆ. ಸಹಜವಾಗಿಯೇ ಸಂಸತ್‌ಗೆ ಪ್ರವೇಶ ಮಾಡಲು ಪಾಸು ಕೊಡುತ್ತಾರೆ. ಹಾಗೆಯೇ ಅವರೂ ಕೊಟ್ಟಿದ್ದಾರೆ. ಇದರಲ್ಲಿ ತಪ್ಪೇನಿಲ್ಲ ಎಂದರು.
Related Articles
Advertisement