Advertisement

Seized: ದಾಖಲೆ ಇಲ್ಲದ 26 ಕೆಜಿ ಬೆಳ್ಳಿ, 3.55 ಲಕ್ಷ ರೂ.‌ ಪೊಲೀಸರ ವಶ

10:28 AM Mar 21, 2024 | Team Udayavani |

ಬಳ್ಳಾರಿ: ಮಾದರಿ ನೀತಿ ಸಂಹಿತೆ ಜಾರಿ ಹಿನ್ನಲೆ ದಾಖಲೆಯಿಲ್ಲದೆ ಅಕ್ರಮವಾಗಿ ಸಾಗಿಸುತ್ತಿದ್ದ 26 ಕೆಜಿ ಬೆಳ್ಳಿ, 3.55 ಲಕ್ಷ ರೂ.‌ ನಗದು ಹಣವನದನು ವಶಪಡಿಸಿಕೊಂಡ ಘಟನೆ ಬಳ್ಳಾರಿ ತಾಲೂಕು ಮೋಕಾ ಬಳಿ ನಡೆದಿದೆ.

Advertisement

ಬಳ್ಳಾರಿಯಿಂದ ಆಂಧ್ರದ ಆದೋನಿಗೆ ತೆಗೆದುಕೊಂಡು ಹೋಗುವಾಗ ಪರಿಶೀಲಿಸಿದ ಪೊಲೀಸರು ಕಚ್ಚಾ ಬೆಳ್ಳಿ ಹಾಗೂ ನಗದು ಹಣ ಪತ್ತೆಯಾಗಿದ್ದು, ವಶಪಡಿಸಿಕೊಂಡಿದ್ದಾರೆ.

ಸಣ್ಣಪುಟ್ಟ ಬೆಳ್ಳಿ ಕರಗಿಸಿ ಅಚ್ಚು ಮಾಡಿಸಿಕೊಂಡು ಕೊಂಡೊಯ್ಯುತ್ತಿದ್ದರು ಎನ್ನಲಾಗಿದ್ದು. ಬೆಳ್ಳಿ ಮತ್ತು ಹಣಕ್ಕೆ ದಾಖಲೆ ಇಲ್ಲದ ಕಾರಣ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಈ‌‌ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ‌ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಫಾರಿನ್ ಟೂರ್ ಹೋಗಲು ಕಿಡ್ನಾಪ್ ನಾಟಕ… ತಂದೆಯ ಬಳಿ 30 ಲಕ್ಷಕ್ಕೆ ಬೇಡಿಕೆ ಇಟ್ಟ ಮಗಳು…

Advertisement
Advertisement

Udayavani is now on Telegram. Click here to join our channel and stay updated with the latest news.

Next