Advertisement

ಮುಂಬಯಿ ಸಮೀಪ 12 ಲಕ್ಷ ರೂ. ಮೌಲ್ಯದ ಅಕ್ರಮ ಸಾಗಣೆಯ ಘುಟ್‌ಕಾ ವಶ

12:34 PM Feb 22, 2018 | Team Udayavani |

ಪಾಲಘರ್‌ : ಮಹಾರಾಷ್ಟ್ರದಲ್ಲಿ ನಿಷೇಧಗೊಂಡಿರುವ, ಅಕ್ರಮ ಕಳ್ಳಸಾಗಣೆಯ ಸುಮಾರು 12 ಲಕ್ಷ ರೂ. ಮೌಲ್ಯದ ಘುಟ್‌ಕಾ ವನ್ನು ಪಾಲಘರ್‌ ಪೊಲೀಸರು ರಾಜ್ಯದೊಳಗೆ ಬರುತ್ತಿದ್ದ ಟೆಂಪೋ ಒಂದರಿಂದ ವಶಪಡಿಸಿಕೊಂಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

Advertisement

ಟೆಂಪೋದೊಳಗೆ ವಿಶೇಷವಾಗಿ ರೂಪಿಸಲಾಗಿದ್ದ ಕುಳಿಯೊಳಗೆ ಈ ಘುಟ್‌ಕಾವನ್ನು ಅವಿತಿರಿಸಲಾಗಿತ್ತು. ಅದರ ಮೇಲೆ ಗುಜರಿ ಐಟಂ ಗಳನ್ನು ರಾಶಿ ಹಾಕಲಾಗಿತ್ತು. ವಶಪಡಿಸಿಕೊಳ್ಳಲಾಗಿರುವ ಘುಟ್‌ಕಾ  ಮೌಲ್ಯ 12.28 ಲಕ್ಷ ರೂ. ಎಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next