Advertisement

ಪೊಲೀಸ್‌ ಬಂದೋಬಸ್ತ್ ವ್ಯವಸ್ಥೆ

04:01 PM Dec 21, 2020 | Suhan S |

ಚಿಕ್ಕಬಳ್ಳಾಪುರ: ಜಿಲ್ಲೆಯ ಶಿಡ್ಲಘಟ್ಟ, ಚಿಂತಾಮಣಿ ಹಾಗೂ ಬಾಗೇಪಲ್ಲಿ ತಾಲೂಕಿನಲ್ಲಿ ಡಿ.22 ರಂದು ನಡೆಯಲಿರುವ ಮೊದಲ ಹಂತದ ಗ್ರಾಪಂ ಚುನಾವಣೆಯಲ್ಲಿ ಶಾಂತಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್‌ ತಿಳಿಸಿದ್ದಾರೆ.

Advertisement

ಸಿಬ್ಬಂದಿ ನಿಯೋಜನೆ: ಈ ಕುರಿತು ಹೇಳಿಕೆ ನೀಡಿರುವ ಅವರು, ಒಟ್ಟು 748 ಮತಗಟ್ಟೆಗಳಿದ್ದು ಅದರಲ್ಲಿ 74 ಸೂಕ್ಷ್ಮ, 74 ಅತೀ ಸೂಕ್ಷ್ಮ ಹಾಗೂ 562 ಸಾಮಾನ್ಯ ಮತಗಟ್ಟೆಗಳಿದ್ದು, ಅದಕ್ಕಾಗಿ ಅಗತ್ಯ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಾಗಿದೆ. ಚಿಂತಾಮಣಿ ತಾಲೂಕಿನಲ್ಲಿ 416, ಶಿಡ್ಲಘಟ್ಟ ತಾಲೂಕಿಗೆ 278 ಹಾಗೂ ಬಾಗೇಪಲ್ಲಿ ತಾಲೂಕಿಗೆ 314 ಪೊಲೀಸ್‌ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು (ಗೃಹ ರಕ್ಷಕ ಸಿಬ್ಬಂದಿ ಸಹಿತ) ನಿಯೋಜಿಸಲಾಗಿದೆ ಎಂದಿದ್ದಾರೆ.

702 ಪ್ರಕರಣ ದಾಖಲು: ಚುನಾವಣೆಯ ಹಿನ್ನೆಲೆಯಲ್ಲಿ ನವೆಂಬರ್‌ 30 ರಿಂದ ಡಿಸೆಂಬರ್‌ 31ರ ಸಂಜೆ 5 ಗಂಟೆವರೆಗೆ ನೀತಿಸಂಹಿತೆ ಜಾರಿಯಲ್ಲಿರುವುದರಿಂದ ಅಹಿತರ ಘಟನೆಗಳು ಸಂಭವಿಸದಂತೆ ಅಗತ್ಯ ಕ್ರಮ ಕ್ರಮಕೈಗೊಳ್ಳುವ ಜೊತೆಗೆ ಮುಂಜಾಗ್ರತಾ ಕ್ರಮಕ್ಕಾಗಿ ಭದ್ರತಾ ಕಾಯ್ದೆಯಡಿಯಲ್ಲಿ ಒಟ್ಟು 702 ಪ್ರಕರಣ ದಾಖಲಿಸಲಾಗಿದೆ. 653 ಆಪಾದಿತರನ್ನು ಸ್ಥಳೀಯ ತಾಲೂಕು ದಂಡಾಧಿಕಾರಿಗಳ ಮುಂದೆ ಹಾಜರುಪಡಿಸಿ ಸದ್ವರ್ತನೆಯ ಬಗ್ಗೆ ಭದ್ರತಾ ಮುಚ್ಚಳಿಕೆ ಪಡೆಯಲಾಗಿದೆ ಎಂದರು. ಜಿಲ್ಲಾದ್ಯಂತ ಅಬಕಾರಿ ಕಾಯ್ದೆಯಡೆಯಲ್ಲಿ 86 ಪ್ರಕರದಾಖಲಿಸಿ 62 ಆರೋಪಿಗಳನ್ನು ಬಂಧಿಸಿ ಅವರಿಂದ 803 ಲೀ.ಮದ್ಯ ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಸೂಕ್ಷ್ಮ, ಅತೀ ಸೂಕ್ಷ್ಮ ಮತಗಟ್ಟೆ: ಬಾಗೇಪಲ್ಲಿ ತಾಲೂಕಿನಲ್ಲಿ 23 ಸೂಕ್ಷ್ಮ35 ಅತೀ ಸೂಕ್ಷ್ಮ, 173 ಸಾಮಾನ್ಯ ಸೇರಿದಂತೆ 231 ಮತಗಟ್ಟೆ, ಚಿಂತಾಮಣಿ 31 ಸೂಕ್ಷ್ಮ,47 ಅತೀ ಸೂಕ್ಷ್ಮ,237 ಸಾಮಾನ್ಯ ಸೇರಿದಂತೆ 315 ಮತಗಟ್ಟೆ ಕೇಂದ್ರಗಳು. ಶಿಡ್ಲಘಟ್ಟ ತಾಲೂಕಿನಲ್ಲಿ 20 ಸೂಕ್ಷ್ಮ, 30 ಅತೀ ಸೂಕ್ಷ್ಮ ಹಾಗೂ 152 ಸಾಮಾನ್ಯ ಮತಗಟ್ಟೆಗಳು ಸಹಿತ 202 ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದ್ದು, ಪಾರದರ್ಶಕ ಹಾಗೂ ನ್ಯಾಯಸಮ್ಮತವಾಗಿ ಚುನಾವಣೆ ನಡೆಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next