Advertisement

ಆಸಿಡ್‌ ಎರಚಿ ಮೆಜೆಸ್ಟಿಕ್‌ನಲ್ಲಿ ಬೈಕ್‌ ಬಿಟ್ಟು ಪರಾರಿಯಾಗಿದ್ದ ಆರೋಪಿ ನಾಗೇಶ್‌

02:02 PM May 04, 2022 | Team Udayavani |

ಬೆಂಗಳೂರು: ಪ್ರೀತಿಗೆ ನಿರಾಕರಿಸಿದ ಯುವತಿ ಮೇಲೆ ಆಸಿಡ್‌ ದಾಳಿ ನಡೆಸಿರುವ ನಾಗೇಶ್‌ ಕೃತ್ಯಕ್ಕೂ ಮೊದಲು ಬ್ಯಾಡರಹಳ್ಳಿಯಲ್ಲಿ ಹೊಸ ಸಿಮ್‌ ಖರೀದಿಸಿರುವುದು ಬೆಳಕಿಗೆ ಬಂದಿದೆ. ಮತ್ತೂಂದೆಡೆ ಮೆಜೆಸ್ಟಿಕ್‌ ಬಳಿ ಆತನ ಬೈಕ್‌ ಪತ್ತೆಯಾಗಿದೆ.

Advertisement

ಆರೋಪಿಯ ಕಾಲ್‌ ಡೀಟೆಲ್ಸ್‌ ಸಂಗ್ರಹಿಸಿದಾಗ ಹೊಸ ಸಿಮ್‌ ಖರೀ ದಿಸಿದ್ದಾನೆ ಎಂಬುದು ಗೊತ್ತಾಗಿದೆ. ಹಳೇ ಮೊಬೈಲ್‌ ಅನ್ನು ಹೊಸಕೋಟೆ ಬಳಿ ಎಸೆದಿದ್ದಾನೆ. ಆದರೆ, ಇದುವರೆಗೂ ಹೊಸ ಸಿಮ್‌ ಆಕ್ಟಿವೇಷನ್‌ ಮಾಡಿಕೊಂಡಿಲ್ಲ. ಈ ಮಧ್ಯೆ ದೈವ ಭಕ್ತನಾಗಿರುವ ನಾಗೇಶ್‌, ಆಗಾಗ್ಗೆ ತಮಿಳು ನಾಡು, ಆಂಧ್ರಪ್ರದೇಶದ ದೇವಾಲಯಗಳಿಗೆ ಹೋಗುತ್ತಿದ್ದ ಎಂಬ ಮಾಹಿತಿ ಮೇರೆಗೆ ನೆರೆ ರಾಜ್ಯಗಳಲ್ಲಿ ಆತನಿಗಾಗಿ ಶೋಧ ನಡೆಸಲಾಗುತ್ತಿದೆ.

ಅದಕ್ಕಾಗಿ ತಿರುಪತಿ, ತಮಿಳು ನಾಡಿನ ಕೆಲ ದೇವಾಲಯಗಳಿಗೆ ಎರಡು ಪ್ರತ್ಯೇಕ ತಂಡಗಳು ಹೋಗಿವೆ. ಮೆಜೆಸ್ಟಿಕ್‌ನಿಂದ ಹೊರಡುವ ಮೊದಲು ಆರೋಪಿ ಸಮೀಪದಲ್ಲಿಯೇ ಬೈಕ್‌ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದರು.

ಟ್ರಿಪ್‌ ಹೋಗುವುದಾಗಿ ಹೇಳಿದ್ದ ನಾಗೇಶ್‌: ಕೃತ್ಯಕ್ಕೂ ಮೊದಲು ನಾಗೇಶ್‌, ತನ್ನ ಸ್ನೇಹಿತರ ಬಳಿ 20 ದಿನಗಳ ಕಾಲ ಪ್ರವಾಸ ಹೋಗುವುದಾಗಿ ಹೇಳಿಕೊಂಡಿದ್ದ ಎಂಬ ಮಾಹಿತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮನಃ ಶಾಂತಿಗಾಗಿ ಹೋಗುತ್ತಿದ್ದೇನೆ ಎಂದಿದ್ದ. ಈ ಬಗ್ಗೆ ಸ್ನೇಹಿತರು ಪ್ರಶ್ನಿಸಿದಾಗ, ಟಿವಿ-ಪೇಪರ್‌ನಲ್ಲಿ ಬರುತ್ತೇನೆ. ಆಗ ನೀವೇ ನೋಡಿಕೊಳ್ಳಿ ಎಂದಿದ್ದ ಎಂದು ಮೂಲಗಳು ತಿಳಿಸಿವೆ.

Advertisement

Udayavani is now on Telegram. Click here to join our channel and stay updated with the latest news.

Next