Advertisement

ನಂಜನಗೂಡಲ್ಲಿ ಜನರ ಸುರಕ್ಷತೆಗಾಗಿ ಪೊಲೀಸರ ಓಟ

12:16 PM Nov 08, 2017 | Team Udayavani |

ನಂಜನಗೂಡು: ಪಟ್ಟಣದ ಬೀದಿಗಳಲ್ಲಿ ಮಂಗಳವಾರ ಬೆಳಗ್ಗೆ ಪೊಲೀಸ್‌ ಅಧಿಕಾರಿಗಳು ವಾಕಿಂಗ್‌ ಉಡುಪಿನಲ್ಲಿ ವಾಕಿಂಗ್‌ ಮಾಡಿದರು.  
ಜನರ ಸುರಕ್ಷತೆಗಾಗಿ ಕೈಗೊಂಡಿದ್ದ ಓಟದಲ್ಲಿ ಅಪರ ಪೊಲೀಸ್‌ ಅಧೀಕ್ಷಕಿ ಮಹ‌ಮ್ಮದ್‌ ಸುಜೀತಾ ಅವರ ನೇತೃತ್ವದಲ್ಲಿ ಉಪ ವಿಭಾಗದ ಪೊಲೀಸ್‌ ಪಡೆ ಭಾಗವಹಿಸಿತ್ತು.

Advertisement

ನಗರದ ಹುಲ್ಲಹಳ್ಳಿ ವೃತ್ತದಿಂದ ಓಟ ಪ್ರಾರಂಭಿಸಿ ಮೋಟೋ ಕ್ರಾಸಿಗಾಗಿ ಸಿದ್ಧವಾದಂತಹ ಆರ್‌ಪಿ ರಸ್ತೆ ಮೂಲಕ ಶ್ರೀಕಂಠೇಶ್ವರಸ್ವಾಮಿ ದೇವಸ್ಥಾನ ಸುತ್ತಿ ಮತ್ತೆ ಹುಲ್ಲಹಳ್ಳಿ ವೃತ್ತದವರೆಗೆ ಓಡುತ್ತ ಜನ ಜಾಗೃತಿ ಮೂಡಿಸಿದರು.

ಎಎಸ್‌ಪಿ ಮಹಮ್ಮದ್‌ ಸುಜೀತಾ ಮಾತನಾಡಿ, ನಗರದಲ್ಲಿ ಕಳ್ಳತನ ಪ್ರಕರಣಗಳು ಮತ್ತು ಇತರೆ ಕೃತ್ಯಗಳು ಹೆಚ್ಚಾಗಿದ್ದು ಇದನ್ನು ತಪ್ಪಿಸಲು ಮತ್ತು ಸಾರ್ವಜನಿಕರಿಗೆ ರಸ್ತೆ ಸುರಕ್ಷತೆ ಬಗ್ಗೆ ಅರಿವು ಉಂಟು ಮಾಡುತ್ತಿದ್ದೇವೆಂದು ಹೇಳಿದರು. 

ಸಾರ್ವಜನಿಕರ  ರಕ್ಷಣೆಯೇ ನಮ್ಮ ಮುಖ್ಯ ಗುರಿ ಎಂದು ಭಾವಿಸಿ ಹಗಲಿರುಳು ದುಡಿಯುತ್ತಿರುವ ಇಲಾಖೆಯೊಂದಿಗೆ ಸದಾ ಸಾರ್ವಜನಿಕರು ಮಾಹಿತಿ ಹಂಚಿಕೊಂಡರೆ ಇಲಾಖೆ ಸೇವೆಗೆ ಅನುಕೂಲವಾಗುತ್ತದೆ ಎಂದು ತಿಳಿಸಿದರು.

ಓಟದಲ್ಲಿ ವೃತ್ತ ನಿರೀಕ್ಷಕ ಗೋಪಾಲಕೃಷ್ಣ, ಪಿಎಸ್‌ಐ ಗಳಾದ ಕುಮಾರಿ  ಸವಿ, ಪುನೀತ್‌ಗೌಡ, ಆನಂದ್‌, ವಿ.ಚೇತನ್‌, ವೀರಭದ್ರಪ್ಪ, ಶಿವಮಾದಯ್ಯ, ಎಎಸ್‌ಐಗಳಾದ ಶಂಕರಪ್ಪ, ನಂದಿಬಸಪ್ಪ, ಪ್ರಭುಲಿಂಗಾರಾಧ್ಯ ಗೋಪಾಲಕೃಷ್ಣ, ಅಚ್ಚುತ, ಮುಖ್ಯ ಪೇದೆಗಳಾದ ನಾಗೇಂದ್ರ, ಜಯರಾಮು, ಜಯಕುಮಾರ್‌, ಪ್ರಸನ್ನ, ಶ್ರೀನಿವಾಸ್‌, ಮಹೇಶ್‌, ಸೋಮಶೇಖರ್‌, ಪ್ರಕಾಶ್‌ ಮತ್ತಿತರರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next