Advertisement

ಮಂಡ್ಯ ಅಕ್ರಮ ಗಣಿಗಾರಿಕೆಗಳ ಮೇಲೆ ಪೊಲೀಸರ ದಾಳಿ : ಸ್ಫೋಟಕ ವಸ್ತುಗಳ ವಶ

08:49 PM Jan 23, 2021 | Team Udayavani |

ಮಂಡ್ಯ: ಶಿವಮೊಗ್ಗ ಹುಣಸೋಡು ಪ್ರಕರಣದ ನಂತರ ಮಂಡ್ಯ ಜಿಲ್ಲೆಯಲ್ಲೂ ಜಿಲೆಟಿನ್ ಸಂಗ್ರಹ ಮಾಡಿರುವ ಸ್ಥಳಗಳ ಪತ್ತೆ ಮಾಡಿ ವಶಪಡಿಸಿಕೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ. ಶನಿವಾರ ಮೂರು ಕಡೆ ಅಕ್ರಮ ಗಣಿಗಾರಿಕೆಗಳ ಮೇಲೆ ದಾಳಿ ನಡೆಸಿ ವಿದ್ಯುತ್ ಡಿಟೋನೇಟರ್, ಜಿಲೆಟಿನ್ ಕಡ್ಡಿಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ ತಿಳಿಸಿದರು.

Advertisement

ಜಿಲ್ಲೆಯ ಎಲ್ಲ ಕಲ್ಲು ಕ್ವಾರಿಗಳು ಮತ್ತು ಕ್ರಷರ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಶ್ರೀರಂಗಪಟ್ಟಣ ತಾಲೂಕಿನ ಅರೆಕೆರೆ ಹೋಬಳಿಯ ಚನ್ನನಕೆರೆ ಗ್ರಾಮದ ವ್ಯಾಪ್ತಿಯಲ್ಲಿರುವ ರಾಮ್‌ದೇವ್ ಎಂಬುವರಿಗೆ ಸೇರಿದ ಜೆ.ಜೆ.ಕ್ರಷರ್ ಕ್ವಾರಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಪರವಾನಗಿ ಇಲ್ಲದೆ ಬಂಡೆ ಸಿಡಿಸಲು ಬಳಸುತ್ತಿದ್ದ 2 ಮೆಗ್ಗರ್‌ಗಳು, 315 ಎಲೆಕ್ಟ್ರಿಕ್ ಡಿಟೋನೇಟರ್ ವಶಪಡಿಸಿಕೊಳ್ಳಲಾಗಿದೆ. ಇವರ ವಿರುದ್ಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಾಗಮಂಗಲ ತಾಲೂಕಿನ ಕರಡಹಳ್ಳಿ ಗ್ರಾಮದ ಎಲ್ಲೆಯಲ್ಲಿರುವ ಶ್ರೀ ಲಕ್ಷ್ಮಿವೆಂಕಟೇಶ್ವರ ಕ್ರಷರ್ ಮತ್ತು ಕಲ್ಲು ಕ್ವಾರಿಯ ಮೇಲೆ ದಾಳಿ ನಡೆಸಿ ಅಕ್ರಮವಾಗಿ ಬಳಸುತ್ತಿದ್ದ ಒಟ್ಟು 63 ಜಿಲೆಟಿನ್ ಕಡ್ಡಿಗಳು, 18 ಎಲೆಕ್ಟ್ರಿಕ್ ಡಿಟೋನೇಟರ್, 4 ಲೋಡ್ ಬೋಡ್ರಸ್ ಕಲ್ಲುಗಳನ್ನು ವಶಪಡಿಸಿಕೊಳ್ಳಲಾಗಿದೆ. ಕೆಲಗೆರೆ ಗ್ರಾಮದ ಕೆ.ಸಿ.ನಾಗರಾಜು, ಶಿವಣ್ಣ ಆಲಿಯಾಸ್ ಜಾಕಿಶಿವ ಸೇರಿದಂತೆ ಇತರರ ವಿರುದ್ಧ ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ರಸ್ತೆಗೆ ಹಾಕಿದ ಹುರುಳಿಕಾಳು ಸಿಪ್ಪೆ ಕಾರಿನ ಚಕ್ರಕ್ಕೆ ಸಿಲುಕಿ ಬೆಂಕಿ: ಹೊತ್ತಿ ಉರಿದ ಕಾರು

Advertisement
Advertisement

Udayavani is now on Telegram. Click here to join our channel and stay updated with the latest news.

Next