ಕುಣಿಗಲ್ : ಹುಲಿಯೂರುದುರ್ಗ ಪೊಲೀಸರು ಜೂಜು ಅಡ್ಡೆ ಮೇಲೆ ದಾಳಿ ನಡೆಸಿ ಏಳು ಆರೋಪಿಗಳನ್ನು ಬಂಧಿಸಿ ಪಣಕ್ಕೆ ಇಟ್ಟಿದ 1.50 ಲಕ್ಷ ರೂ ಗೂ ಅಧಿಕ ಹಣ ಹಾಗೂ ಕಾರು ಮತ್ತು ಬೈಕ್‌ಗಳನ್ನು ವಶಕ್ಕೆ ಪಡೆದಿದ್ದಾರೆ.
ನಾಗಮಂಗಲ, ಹಾಸನ, ಮದ್ದೂರು, ಕುಣಿಗಲ್, ಮಾಗಡಿ ಮೂಲದವರು ಎನ್ನಲಾದ ರಮೇಶ್, ಪ್ರಸನ್ನ, ರೂಪೇಶ್, ಪುಟ್ಟೇಗೌಡ, ಸಂತೋಷ್, ವಿಜಯಕುಮಾರ್, ಮಹೇಶ್ ಬಂಧಿತ ಆರೋಪಿಗಳಾಗಿದ್ದಾರೆ, ಹಲವು ಮಂದಿ ಓಡಿ ಹೋಗಿ ತಲೆ ಮರಿಸಿಕೊಂಡಿದ್ದಾರೆ.
ಕುಣಿಗಲ್ ತಾಲೂಕಿನ ಅಮೃತೂರು ಹೋಬಳಿ ಹುಲಿಯೂರುದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಗೆರೆ ಗ್ರಾಮದ ಸಾರ್ವಜನಿಕ ಅರಣ್ಯ ಪ್ರದೇಶದಲ್ಲಿ ಸುಮಾರು ೧೦ ರಿಂದ ೧೨ ಮಂದಿ ಹಲವು ಊರುಗಳಿಂದ ಕಾರು ಹಾಗೂ ಬೈಕ್‌ಗಳಲ್ಲಿ ಬಂದು ಅಂದರ್, ಬಾಹರ್ ಜೂಜು ಆಡುತ್ತಿದ್ದಾರೆ ಎಂಬ ಖಚಿತ ಮಾಹಿತಿಯೊಂದಿಗೆ ಡಿವೈಎಸ್‌ಪಿ ಜಿ.ಆರ್.ರಮೇಶ್, ಸಿಪಿಐ ಅರುಣ್‌ಸಾಲುಂಕೆ, ಪಿಎಸ್‌ಐ ಟಿ.ವೆಂಕಟೇಶ್ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿತ್ತು.
ಪೊಲೀಸರನ್ನು ನೋಡಿದ ಹಲವು ಆರೋಪಿಗಳು ಅಲ್ಲಿಂದ ಓಡಿ ಹೊದರು, ಆದರೆ ಏಳು ಮಂದಿ ಜೂಜು ಕೊರರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ, ಪಣಕ್ಕೆ ಇಟ್ಟಿದ 1.51.200 ರೂ ಹಾಗೂ ಎರಡು ಕಾರು, ಬೈಕುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಈ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ, ತಲೆ ಮರಿಸಿಕೊಂಡು ಆರೋಪಿಗಳ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ ಎನ್ನಲಾಗಿದೆ.