Advertisement

ಆದೂರಿನ ಮನೆಯ ಮೇಲೆ ಪೊಲೀಸರ ದಾಳಿ: ಬೃಹತ್‌ ಪ್ರಮಾಣದ ಸ್ಫೋಟಕ ವಸ್ತು ವಶಕ್ಕೆ

11:26 PM May 30, 2023 | Team Udayavani |

ಕಾಸರಗೋಡು: ಅಬಕಾರಿ ಇಲಾಖೆಯ ವಿಶೇಷ ತಂಡ ಮತ್ತು ಆದೂರು ಪೊಲೀಸರು ಮಂಗಳ ವಾರ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಕಾರು ಮತ್ತು ಮನೆಯೊಂದರಿಂದ ಬೃಹತ್‌ ಪ್ರಮಾಣದ ಸ್ಫೋಟಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

Advertisement

ಈ ಸಂಬಂಧ ಮುಳಿಯಾರು ಪಂಚಾಯತ್‌ನ ಕೆಟ್ಟುಂಗಲ್‌ ಕೋಲಾಚಿಯಡ್ಕದ ಮೊಹಮ್ಮದ್‌ ಮುಸ್ತಫ (30) ಎಂಬಾತನನ್ನು ಬಂಧಿಸಿ ಕಾರನ್ನು ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿದ ಸ್ಫೋಟಕ ವಸ್ತುಗಳಲ್ಲಿ ಸುಮಾರು 2,800 ಜಿಲೆಟಿನ್‌ ಸ್ಟಿಕ್‌, 6 ಸಾವಿರ ಡಿಟೋನೇಟರ್‌ ಮತ್ತು 300 ಏರ್‌ ಕ್ಯಾಪ್‌ ಒಳಗೊಂಡಿವೆ. ಆದೂರು ಪೊಲೀಸರು ಸಮಗ್ರ ತನಿಖೆ ನಡೆಸುತ್ತಿದ್ದಾರೆ.

ಕಾಸರಗೋಡು ಎಕ್ಸೈಸ್‌ ಎನ್‌ಫೋರ್ಸ್‌ಮೆಂಟ್‌ ಆ್ಯಂಡ್‌ ಆ್ಯಂಟಿ ನಾರ್ಕೋಟಿಕ್ಸ್‌ ಸ್ಪೆಷಲ್‌ ಸ್ಕ್ವಾಡ್‌ನ‌ ಸರ್ಕಲ್‌ ಇನ್‌ಸ್ಪೆಕ್ಟರ್‌ ಶಂಕರ್‌ ಜಿ.ಎ. ನೇತೃತ್ವದ ತಂಡ ಮಾದಕ ವಸ್ತು ಸಾಗಾಟ ಸಂಬಂಧ ಚೆರ್ಕಳ ಕೆಟ್ಟುಂಗಲ್‌ನ ಕೋಲಾಚಿಯಡ್ಕದಲ್ಲಿ ಸೋಮವಾರ ರಾತ್ರಿ ವಾಹನ ತಪಾ ಸಣೆಯಲ್ಲಿ ತೊಡ ಗಿದ್ದಾಗ ಆ ದಾರಿಯಲ್ಲಿ ಬಂದ ಡಸ್ಟರ್‌ ಕಾರನ್ನು ತಡೆದು ನಿಲ್ಲಿಸಿ ತಪಾ ಸಣೆ ಗೊಳಪಡಿಸಿದಾಗ ಸ್ಫೋಟಕ ಪತ್ತೆಯಾಯಿತು. ಕಾರಿನಲ್ಲಿದ್ದ ಮೊಹಮ್ಮದ್‌ ಮುಸ್ತಫ ನನ್ನು ತತ್‌ಕ್ಷಣ ಕಾರು ಸಹಿತ ವಶಕ್ಕೆ ತೆಗೆದುಕೊಳ್ಳ ಲಾಯಿತು. ಅನಂತರ ಆದೂರು ಪೊಲೀಸರ ನೆರವಿ ನೊಂದಿಗೆ ಆರೋಪಿಯ ಮನೆಗೆ ತೆರಳಿ ಪರಿಶೀಲಿಸಿ ಅಲ್ಲಿಂದಲೂ ಬೃಹತ್‌ ಪ್ರಮಾಣದ ಸ್ಫೋಟಕ ವಶಪಡಿಸಿಕೊಳ್ಳಲಾಯಿತು.

ಕಾರ್ಯಾಚರಣೆಯಲ್ಲಿ ಅಬಕಾರಿ ಸ್ಪೆಷಲ್‌ ಸ್ಕ್ವಾಡ್‌ನ‌ ಇನ್‌ಸ್ಪೆಕ್ಟರ್‌ ರಾಧಾಕೃಷ್ಣನ್‌ ಪಿ.ಜೆ, ಪ್ರಿವೆಂಟಿವ್‌ ಆಫೀಸರ್‌ಗಳಾದ ಸುರೇಶ್‌ ಬಾಬು ಕೆ, ಉಣ್ಣಿಕೃಷ್ಣನ್‌ ಕೆ, ಸಿವಿಲ್‌ ಎಕ್ಸೈಸ್‌ ಅಧಿಕಾರಿಗಳಾದ ಅಜೇಶ್‌ ಕೆ., ಹಮೀದ್‌ ಎಂ., ಅಬಕಾರಿ ವಾಹನ ಚಾಲಕ ದಿಜಿತ್‌ ಪಿ.ವಿ. ಮತ್ತು ಕ್ರಿಸ್ಟಿನ್‌ ಎ.ಎ. ಮೊದಲಾದವರಿದ್ದರು.

ನರ ಕತ್ತರಿಸಿ ಆಸ್ಪತ್ರೆ ಸೇರಿದ ಆರೋಪಿ!
ಬಂಧಿತ ಆರೋಪಿ ಮೊಹಮ್ಮದ್‌ ಮುಸ್ತಫನನ್ನು ಆತನ ಮನೆಗೆ ಕರೆದೊಯ್ದು ಅಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ವೇಳೆ ತನ್ನ ಕೈಯ ನರವನ್ನು ಕತ್ತರಿಸಿಕೊಂಕು ಆತ್ಮಹತ್ಯೆ ಯತ್ನಿಸಿದನು. ಪೊಲೀಸರು ಆತನನ್ನು ಕಾಸರಗೋಡಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕರ್ನಾಟಕದ ಕಗ್ಗಲ್ಲು ಕೋರೆಗೆ ಪೂರೈಸಲು ತಾನು ಈ ಸ್ಫೋಟಕ ವಸ್ತುಗಳನ್ನು ತಂದಿದ್ದೇನೆಂದು ಆತ ವಿಚಾರಣೆ ವೇಳೆ ಪೊಲೀಸರಲ್ಲಿ ಹೇಳಿದ್ದಾನೆ. ಆದರೆ ಕರ್ನಾಟಕಕ್ಕೆ ಸಾಗಿಸುವ ಮಾಲನ್ನು ತನ್ನ ಮನೆಯಲ್ಲಿ ತಂದಿರಿಸಿರುವುದರ ಉದ್ದೇಶವಾದರೂ ಏನು ಎಂಬ ಪ್ರಶ್ನೆಗೆ ಉತ್ತರ ಲಭಿಸಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next