Advertisement

ಪೊಲೀಸ್‌ ಸಿಬ್ಬಂದಿ ವೇತನ ಹೆಚ್ಚಳ: ಸಚಿವ ಬೊಮ್ಮಾಯಿ

11:08 PM Oct 19, 2019 | Team Udayavani |

ಹಾವೇರಿ: ರಾಘವೇಂದ್ರ ಔರಾದ್ಕರ ವರದಿ ಶಿಫಾರಸಿನಂತೆ ಪೊಲೀಸ್‌ ಅಧಿ ಕಾರಿ ಹಾಗೂ ಸಿಬ್ಬಂದಿ ವೇತನ ಶ್ರೇಣಿ ಉನ್ನತೀಕರಿಸಿ ಕಳೆದ ಆಗಸ್ಟ್‌ನಿಂದಲೇ ಪೂರ್ವಾನ್ವಯವಾ ಗುವಂತೆ ರಾಜ್ಯ ಸರ್ಕಾರ ಜಾರಿಗೊಳಿಸಿದೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು, ದೀಪಾವಳಿ ಉಡುಗೊರೆ ಹಾಗೂ ಪೊಲೀಸ್‌ ಹುತಾತ್ಮ ದಿನ ಮುನ್ನಾದಿನ ಸರ್ಕಾರ ತಕ್ಷಣ ಜಾರಿಗೆ ಬರುವಂತೆ ವೇತನ ಹೆಚ್ಚಳ ಮಾಡಿದೆ. ಹೊಸ ವೇತನ ಶ್ರೇಣಿಯಂತೆ ಹೊಸದಾಗಿ ಸೇರುವ ಪೊಲೀಸ್‌ ಪೇದೆಗಳಿಗೆ ಹಾಲಿ ಮಾಸಿಕ ವೇತನ ರೂ. 30,427 (ಎಲ್ಲ ಭತ್ಯೆ ಸೇರಿ)ರ ಬದಲಿಗೆ ರೂ.34,267 ಸಿಗಲಿದೆ ಎಂದು ತಿಳಿಸಿದ್ದಾರೆ.

ಇದರೊಂದಿಗೆ ಸರ್ಕಾರ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿ ಮೇಲಿನ ಕಳಕಳಿಯಿಂದ ಈಗಾಗಲೇ ಎಲ್ಲ ಶ್ರೇಣಿಯ ಸಿಬ್ಬಂದಿಗೆ ಈಗಿರುವ ಕಷ್ಟ ಪರಿಹಾರ ಭತ್ಯೆ ಜತೆಗೆ ಹೆಚ್ಚುವರಿಯಾಗಿ 1000 ರೂ. ಮಂಜೂರು ಮಾಡಿದೆ. ಇದರಿಂದ ಮಾಸಿಕವಾಗಿ 10.70 ಕೋಟಿ ರೂ. ಹಾಗೂ ವಾರ್ಷಿಕ 128.38 ಕೋಟಿ ರೂ. ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next