ಲಕ್ನೋ: ಭಾನುವಾರ ಭಾರತ 19 ವಯೋಮಿತಿ ಮಹಿಳಾ ವಿಶ್ವಕಪ್ ಕ್ರಿಕೆಟ್ ಗೆದ್ದಿದೆ. ಈ ಕೂಟದ ಮೂಲಕ ಹಲವು ಅದ್ಭುತ ಪ್ರತಿಭೆಗಳು ಬಂದಿವೆ. ಫೈನಲ್‌ನಲ್ಲಿ ಆಡಿ 2 ವಿಕೆಟ್ ಪಡೆದ ಅರ್ಚನಾ ದೇವಿ ಇವರಲ್ಲೊಬ್ಬರು.
ವಿಚಿತ್ರವೆಂದರೆ ಕಾನ್ಪುರದಿಂದ ಕೇವಲ 30 ಕಿ.ಮೀ. ಅಂತರದಲ್ಲಿ ಅರ್ಚನಾ ಹಳ್ಳಿಯಿದೆ. ಆದರೆ ಇಲ್ಲಿ ವಿದ್ಯುತ್ ನದ್ದು ದೊಡ್ಡ ಸಮಸ್ಯೆ. ಇಡೀ ಗ್ರಾಮಸ್ಥರಿಗೆ ಕರೆಂಟ್ ಕೈಕೊಟ್ಟರೆ ಫೈನಲ್ ನೋಡುವುದು ಹೇಗೆ ಎಂಬ ಚಿಂತೆ. ಇದು ಊರಿನ ಪೊಲೀಸ್ ಅಧಿಕಾರಿಯೊಬ್ಬರಿಗೆ ಗೊತ್ತಾಗಿ ಮನೆಗೊಂದು ಇನ್ವರ್ಟರ್ ಕಳುಹಿಸಿಕೊಟ್ಟು, ಇಡೀ ಹಳ್ಳಿಗೆ ಪಂದ್ಯ ನೋಡಲು ಅವಕಾಶ ಮಾಡಿಕೊಟ್ಟರು ಎಂದು ಸಹೋದರ ರೋಹಿತ್ ಹೇಳಿದ್ದಾರೆ.
ಇದನ್ನೂ ಓದಿ:ಅಪ್ರಾಪ್ತನಿಂದ ಶಿವಾಜಿ ಮಹಾರಾಜರಿಗೆ ಅಪಮಾನ: ವಿಚಾರಣೆ ನಡೆಸುತ್ತಿರುವ ಪೊಲೀಸರು
ಭಾರತ ಪಂದ್ಯ ಕೂಡಲೇ ತಾಯಿ ಸಾವಿತ್ರೀ ದೇವಿ, ಸಹೋದರ ರೋಹಿತ್ ಇಡೀ ಗ್ರಾಮಸ್ಥರಿಗೆ ಲಡ್ಡು ಹಂಚಿದ್ದಾರೆ. ಲಡ್ಡು ಹಂಚುತ್ತಿದ್ದರೂ ಮಗಳು ಮಾಡಿದ ಸಾಧನೆಯೇನೆನ್ನುವುದು ತಾಯಿ ಅರ್ಥವಾಗಿರಲಿಲ್ಲ. ಅದನ್ನು ಅವರೇ ಹೇಳಿಕೊಂಡಿದ್ದಾರೆ. “ನನಗೆ ಕ್ರಿಕೆಟ್ ಬಗ್ಗೆ ಗೊತ್ತಿಲ್ಲ, ಆದರೆ ಅವಳು ಆಡುತ್ತಿರುವುದನ್ನು ಟೀವಿಯಲ್ಲಿ ನೋಡಿ ಸಂಭ್ರಮಿಸಿದ್ದೇನೆ. ಆದ್ದರಿಂದ ಸತತವಾಗಿ ಲಡ್ಡು ಹಂಚುತ್ತಲೇ ಇದ್ದೇನೆ’ ಎಂದು ಹೇಳಿದ್ದಾರೆ.
2008ರಲ್ಲಿ ತಂದೆ, 17ರಲ್ಲಿ ಸಹೋದರನ ಸಾವು: ಬಡತನದ ಕುಟುಂಬ ಅರ್ಚನಾ ಅವರದ್ದು. 2008ರಲ್ಲೇ ತಂದೆ ಶಿವರಾಮ್ ತೀರಿಕೊಂಡಿದ್ದರು. ಆಗ ಅರ್ಚನಾ ಅವರಿಗೆ ಕೇವಲ 4 ವರ್ಷ. 2017ರಲ್ಲಿ ಹಾವು ಕಚ್ಚಿ ಸಹೋದರೊಬ್ಬ ತೀರಿಕೊಂಡರು. ಪರಿಸ್ಥಿತಿ ಹೀಗಿದ್ದಾಗ ಕ್ರಿಕೆಟ್ ಆಡುವುದೇ ಬೇಡವೆಂದು ತಾಯಿ ಹಠ ಹಿಡಿದಿದ್ದರು. ಊರಿನವರೂ ವ್ಯಂಗ್ಯವಾಡಿದ್ದರು. ಈ ಎಲ್ಲ ವಿರೋಧಗಳನ್ನು ದಾಟಿ ಅರ್ಚನಾ ಕ್ರಿಕೆಟ್ ಆಡಿ ಈ ಮಟ್ಟಕ್ಕೆ ತಲುಪಿದ್ದಾರೆ.