ಹೌದು, ಪಾಟ್ನಾ ಮೂಲದ ಮಹಿಳೆಯೊಬ್ಬರು ತೀವ್ರ ಅನಾರೋಗ್ಯದಿಂದ ಎರ್ನಾಕುಲಂನಲ್ಲಿರುವ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರ ಪತಿ ಪ್ರಕರಣವೊಂದರಲ್ಲಿ ಜೈಲು ಸೇರಿದ್ದಾರೆ. ಇದರಿಂದ ಅವರ 4 ಮಕ್ಕಳೂ ಬೀದಿ ಪಾಲಾಗುವ ಪರಿಸ್ಥಿತಿ ಬಂದೊದಗಿದೆ. ಈ ಮಕ್ಕಳನ್ನು ಠಾಣೆಗೆ ಕರೆತಂದು ಮಹಿಳಾ ಪೊಲೀಸರೇ ಆರೈಕೆ ಮಾಡಿದ್ದಾರೆ. ಈ ವೇಳೆ ಅಧಿಕಾರಿ ಎಂ.ಎ. ಆರ್ಯ ಎಂಬವರು ಅಳುತ್ತಿದ್ದ 4 ತಿಂಗಳ ಮಗುವಿಗೆ ಎದೆಹಾಲುಣಿಸಿ, ಆಡಿಸಿ, ನಿದ್ದೆಗೆ ಜಾರಿಸಿದ್ದಾರೆ. ಸ್ವತಃ 9 ತಿಂಗಳ ಮಗುವಿನ ತಾಯಿಯಾಗಿರುವ ಅಧಿಕಾರಿ, ಪರರ ಮಗುವಿನ ಹಸಿವನ್ನು ಅರ್ಥೈಸಿಕೊಂಡು ಮಾತೃಪ್ರೇಮ ತೋರಿರುವುದು ಎಲ್ಲೆಡೆ ಮೆಚ್ಚುಗೆಗೆ ಕಾರಣವಾಗಿದೆ. ನಾಲ್ಕು ಮಕ್ಕಳನ್ನೂ ಆರೈಕೆ ಕೇಂದ್ರಗಳಿಗೆ ಕಳುಹಿಸಲಾಗಿದೆ.
Advertisement