ತೀರ್ಥಹಳ್ಳಿ: ತಾಲೂಕಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಅಕ್ರಮ ಮದ್ಯ ಮಾರಾಟಹಾಗೂ ಗಾಂಜಾ ಹಾವಳಿ ಯನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಬಿಗಿ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಯವತಿಯಿಂದ ಡಿವೈಎಸ್‌ಪಿ ಡಾ| ಸಂತೋಷ್ ಅಧ್ಯಕ್ಷತೆಯಲ್ಲಿ ಪಟ್ಟಣದ ಗೋಪಾಲ ಗೌಡರಂಗಮಂದಿರದಲ್ಲಿ ನಡೆದ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರು ಆಗ್ರಹಿಸಿದ್ದಾರೆ.
ತಾಲೂಕಿನ ಗ್ರಾಮೀಣ ಪ್ರದೇಶದ ಮನೆ-ಮನೆಗಳಲ್ಲಿ ಮಾತ್ರವಲ್ಲದೆ ದ್ವಿಚಕ್ರ ವಾಹನಗಳಲ್ಲಿಹಾದಿ ಬೀದಿಯಲ್ಲೂ ಮದ್ಯವನ್ನು ಅಕ್ರಮವಾಗಿಮಾರಾಟ ಮಾಡಲಾಗುತ್ತಿದೆ. ಇದರಿಂದಮಹಿಳೆಯರು, ಮಕ್ಕಳು ಮದ್ಯದ ಅಮಲಿಗೆಬಲಿಯಾಗುವ ಸ್ಥಿತಿ ನಿರ್ಮಾಣವಾಗಿದೆ. ಈಅಕ್ರಮ ದಂಧೆಯಿಂದಾಗಿ ಕೂಲಿ ಕಾರ್ಮಿಕರಬದುಕು ಅಸಹನೀಯವಾಗುತ್ತಿದೆ ಎಂದರು.
ಪಟ್ಟಣ ವ್ಯಾಪ್ತಿಯಲ್ಲಿ ಗಾಂಜಾ ಹಾವಳಿದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಗಾಂಜಾ ವ್ಯಸನಕ್ಕೆಬಲಿಯಾಗುತ್ತಿದ್ದಾರೆ. ಪಟ್ಟಣ ಮಾತ್ರವಲ್ಲದೆಹಳ್ಳಿಗಳಿಂದ ಬರುವ ಕಾಲೇಜು ವಿದ್ಯಾರ್ಥಿಗಳುತರಗತಿಗಳನ್ನು ಬಹಿಷ್ಕರಿಸಿ ತುಂಗಾನದಿತೀರ ಮುಂತಾದ ಸ್ಥಳಗಳಲ್ಲಿ ಗಾಂಜಾಸೇವಿಸಿ ಕಾಲಹರಣ ಮಾಡುತ್ತಿರುವುದು ಸಾಮಾನ್ಯವಾಗಿದೆ. ಇದರಿಂದ ತಾಲೂಕಿನಶೈಕ್ಷಣಿಕ ಫಲಿತಾಂಶದ ಮೇಲೂ ದುಷ್ಪರಿಣಾಮಬೀರುತ್ತಿದೆ ಎಂದೂ ಆತಂಕ ವ್ಯಕ್ತಪಡಿಸಿದರು. ದ್ವಿಚಕ್ರ ವಾಹನಗಳಲ್ಲಿ ಹೆಚ್ಚುತ್ತಿರುವ ತ್ರಿಬ್ಬಲ್‌ರೈಡ್‌ಗೆ ಕಡಿವಾಣ ಹಾಕಬೇಕು. ಪಟ್ಟಣದ ವಾಹನ ನಿಲುಗಡೆ ಸಮಸ್ಯೆ, ಹೆದ್ದಾರಿಯಲ್ಲಿ ಚೆಕ್‌ಪೋಸ್ಟ್ ನಿರ್ಮಾಣ, ಅಕ್ರಮಗೋಸಾಗಣೆಗೆ ತಡೆ, ಬಂದೂಕು ಪರವಾನಗಿ ಸರಳೀಕರಣ, ನಾಗರಿಕ ಬಂದೂಕು ತರಬೇತಿಶಿಬಿರ ಆಯೋಜನೆ, ಅನಾಥಾಶ್ರಮದನೆಪದಲ್ಲಿ ಮನೆಗಳಿಗೆ ಬರುತ್ತಿರುವವರ ಬಗ್ಗೆಎಚ್ಚರಿಕೆ ಮುಂತಾದ ವಿಚಾರಗಳು ಸಭೆಯಲ್ಲಿ ಪ್ರಸ್ತಾವಾದವು.
ಈ ಬಗ್ಗೆ ವಿವರಣೆ ನೀಡಿದ ಡಿವೈಎಸ್‌ಪಿ ಡಾ| ಸಂತೋಷ್, ಪೊಲೀಸ್ ಇಲಾಖೆಜನಸ್ನೇಹಿಯಾಗಿ ಕಾರ್ಯ ನಿರ್ವಹಿಸಲುಸಾರ್ವಜನಿಕರ ಬೆಂಬಲ ಅತಿ ಅಗತ್ಯವಾಗಿದೆ.ಈ ಸಭೆಯಲ್ಲಿ ಪ್ರಸ್ತಾಪವಾಗಿರುವ ಎಲ್ಲಾಅಂಶಗಳನ್ನು ಇಲಾಖೆ ಗಂಭೀರವಾಗಿಪರಿಗಣಿಸಿದ್ದು ಶೀಘ್ರದಲ್ಲಿ ಅಗತ್ಯ ಕ್ರಮಗಳನ್ನುಕೈಗೊಳ್ಳಲಿದೆ ಎಂದರು.
ಪಟ್ಟಣ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಡಿ.ಕೆ. ಸಂತೋಷ್ ಕುಮಾರ್ ಮಾತನಾಡಿ, ಪಟ್ಟಣದಲ್ಲಿನಡೆಯುವ ಅಪರಾಧವನ್ನು ತಡೆಯಲುನೆರವಾಗುವಂತೆ ಪಟ್ಟಣದಲ್ಲಿ ಸಿಸಿ ಕ್ಯಾಮೆರಾಅಳವಡಿಸುವಂತಹ ವರ್ತಕರು ಮತ್ತುಸಾರ್ವಜನಿಕರು ತಮ್ಮ ಕಟ್ಟಡಗಳಲ್ಲಿ ಒಂದುಕ್ಯಾಮೆರಾವನ್ನು ಹೆದ್ದಾರಿಗೆ ಮುಖ ಮಾಡಿದರೆ ಇಲಾಖೆಗೆ ನೆರವಾಗುತ್ತದೆ ಎಂದರು.
ಸಭೆಯಲ್ಲಿ ಪ್ರಮುಖರಾದ ಸಂದೇಶ್ ಜವಳಿ, ಸೊಪ್ಪುಗುಡ್ಡೆ ರಾಘವೇಂದ್ರ, ರಹಮತ್‌ಉಲ್ಲಾ ಅಸಾದಿ, ಡಾನ್ ರಾಮಣ್ಣ, ವೆಂಕಟೇಶಹೆಗ್ಡೆ ಮೇಗರವಳ್ಳಿ, ಕೆ.ಎಂ. ಮೋಹನ್,ನಾಗರಾಜ ಗೌಡ, ನಾಗರಾಜ ಪೂಜಾರಿ,ಅನಸೂಯ ಬಾಳೇಬೈಲು ಇತರರು ಮಾತನಾಡಿದರು.ಸಿಪಿಐ ಪ್ರವೀಣ್ ನೀಲಮ್ಮನವರ್, ಪಿಎಸ್‌ಐ ಎಲ್ಲಪ್ಪ ಹಾಗೂ ಆಗುಂಬೆ ಪಿಎಸ್‌ಐಶಿವಕುಮಾರ್ ಇದ್ದರು.