Advertisement

ಅಂಗಡಿಗಳು ಮುಚ್ಚದೇ ವ್ಯಾಪಾರಿಗಳ ಅಸಡ್ಡೆ: ಲಾಠಿ ಬಿಸಿ ತೋರಿಸಿದ ಪೋಲೀಸರು

04:55 PM Jul 20, 2020 | keerthan |

ಕಡಬ: ಕರಾವಳಿಯಲ್ಲಿ ಆಷಾಢ ಅಮವಾಸ್ಯೆ ಪ್ರಯುಕ್ತ ಜನರು ಮಾಂಸ ಮೀನು ಖರೀದಿಗೆ ಮುಗಿಬಿದ್ದಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರು ಲಾಕ್ ಡೌನ್ ಇರುವುದನ್ನೇ ಮರೆತಿದ್ದಾರೆ.

Advertisement

ದಕ್ಷಿಣ ಕನ್ನಡ ಜಿಲ್ಲೆಯ ಕಡಬದಲ್ಲಿ ಚಿಕನ್ ಮಟನ್ ಸೆಂಟರ್ ಗಳಲ್ಲಿ ಭಾರಿ ಜನಜಂಗುಳಿ ಕಂಡುಬಂದಿದೆ. ಜನರು ಸಾಮಾಜಿಕ ಅಂತರವಿಲ್ಲದೆ, ಮಾಸ್ಕ್ ಧರಿಸದೇ ಚಿಕನ್ ಮಟನ್ ಖರೀದಿಗೆ ಮುಂದಾಗುತ್ತಿದ್ದರು.

ಲಾಕ್ ಡೌನ್ ಪ್ರಯಕ್ತ ಬೆಳಿಗ್ಗೆ 11 ಗಂಟೆಯವರೆಗೆ ಮಾತ್ರ ಅಗತ್ಯ ಸಾಮಾಗ್ರಿ ಖರೀದಿಗೆ ಅವಕಾಶವಿದೆ. ಆದರೆ 11 ಗಂಟೆಯ ನಂತರವೂ ಅಂಗಡಿಗಳು ಬಂದ್ ಮಾಡದೇ ವ್ಯಾಪಾರಿಗಳು ಅಸಡ್ಡೆ ತೋರುತ್ತಿದ್ದರು. ಪೋಲೀಸರು, ಅಧಿಕಾರಿಗಳು ಅಂಗಡಿ ಬಂದ್ ಮಾಡುವಂತೆ ವಿನಂತಿ ಮಾಡಿದರೂ ವ್ಯಾಪಾರಿಗಳು, ಜನರು ಮನ್ನಣೆ ನೀಡದ ಕಾರಣ ಪೊಲೀಸರು ಹಲವರಿಗೆ ಲಾಠಿ ಪ್ರಯೋಗ ಮಾಡಿದರು. ಕಡಬ, ಕಳಾರ, ಅಲಂಕಾರು, ಕೋಡಿಂಬಾಳದಲ್ಲಿ ಹಲವರಿಗೆ ಲಾಠಿ ಏಟು ಬಿದ್ದಿದೆ.

ಕಡಬ ಪೊಲೀಸ್ ಠಾಣಾಧಿಕಾರಿ ರುಕ್ಮ ನಾಯ್ಕ್ ನೇತೃತ್ವದಲ್ಲಿ ಗಸ್ತು ತಿರುಗುವಿಕೆ ನಡೆಯುತ್ತಿದ್ದು, ಕಂದಾಯ ನಿರೀಕ್ಷಕ ಅವಿನ್ ರಂಗತ್ತಮಲೆ ಸೇರಿದಂತೆ ಅಧಿಕಾರಿಗಳು ಅಂಗಡಿಗಳನ್ನು ಮುಚ್ಚಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

Advertisement

Advertisement

Udayavani is now on Telegram. Click here to join our channel and stay updated with the latest news.

Next