ಬೆಂಗಳೂರು: ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರ ಇಡಿ ವಿಚಾರಣೆಯನ್ನು ಖಂಡಿಸಿ ಇಂದು ಕಾಂಗ್ರೆಸ್ ಬೃಹತ್ ಪ್ರತಿಭಟನಾ ರ್ಯಾಲಿ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್ ಬಳಿ ಪ್ರತಿಭಟನೆ ನಡೆಸಿದ ಕಾಂಗ್ರೆಸ್ ರಾಜಭವನ ಮುತ್ತಿಗೆಗೆ ಮುಂದಾಯಿತು. ಈ ವೇಳೆ ಹಾಸ್ಯ ಪ್ರಸಂಗವೊಂದು ನಡೆಯಿತು.
ಹೋರಾಟದ ಸಂದರ್ಭದಲ್ಲಿ ಕೈ ಕಾರ್ಯಕರ್ತರನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದರು. ಪೊಲೀಸರು ಸ್ಥಳಕ್ಕೆ ಬಂದಾಗ ಕಾಂಗ್ರೆಸ್ ಕಾರ್ಯಕರ್ತರು ವಾಪಸ್ ತೆರಳುತ್ತಿದ್ದರು. ಹೀಗಾಗಿ ಪೊಲೀಸರೇ ಕಾಂಗ್ರೆಸ್ ಕಾರ್ಯಕರ್ತರನ್ನ ಕರೆದು ಅರೆಸ್ಟ್ ಮಾಡಲು ಮುಂದಾದ ಘಟನೆ ನಡೆಯಿತು.
ಇದನ್ನೂ ಓದಿ:ಆರ್ ಎಸ್ಎಸ್ ನವರು ಹಿಟ್ಲರನ್ನು ಹಾಡಿ ಹೊಗಳಿದ್ದು ಇತಿಹಾಸದಲ್ಲಿದೆ : ಸಿದ್ದರಾಮಯ್ಯ
ಎಲ್ಲರೂ ಅರೆಸ್ಟ್ ಆಗಬೇಕು ಎಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದಾರೆ. ಆದ್ದರಿಂದ ಬನ್ನಿ ಅರೆಸ್ಟ್ ಆಗಿ ಎಂದು ಪೊಲೀಸರೇ ಆಹ್ವಾನ ನೀಡಿದರು.
ಮೆರವಣಿಗೆ ಪ್ರಾರಂಭಕ್ಕೂ ಮುನ್ನ ಪ್ರತಿಯೊಬ್ಬರೂ ಅರೆಸ್ಟ್ ಆಗಬೇಕು ಎಂದು ಡಿಕೆ ಶಿವಕುಮಾರ್, ಸಿದ್ದರಾಮಯ್ಯ ಹೇಳಿದ್ದರು.