Advertisement

ಶರತ್‌ ಕೊಲೆ ಪ್ರಕರಣ ಆರೋಪಿಗಳ ಪತ್ತೆಗೆ ಮುಂದುವರಿದ ಪೊಲೀಸ್‌ ತನಿಖೆ

01:30 AM Jul 10, 2017 | Harsha Rao |

ಮಂಗಳೂರು: ಆರ್‌ಎಸ್‌ಎಸ್‌ ಕಾರ್ಯಕರ್ತ ಬಿ.ಸಿ.ರೋಡ್‌ನ‌ ಉದಯ ಲಾಂಡ್ರಿಯ ಮಾಲಕ  ಶರತ್‌ ಕೊಲೆ ಪ್ರಕರಣ ಸಂಬಂಧ ಕೆಲವರನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಲಾ ಗುತ್ತಿದೆಯೇ ಹೊರತು ನಿಜವಾದ ಆರೋಪಿಗಳನ್ನು ಪತ್ತೆಹಚ್ಚಲು ಇದುವರೆಗೆ ಪೊಲೀಸರಿಗೆ ಸಾಧ್ಯವಾಗಿಲ್ಲ.

Advertisement

ಪೊಲೀಸ್‌ ಮೂಲಗಳ ಪ್ರಕಾರ ಶರತ್‌ ಕೊಲೆ ಪ್ರಕರಣ ಸಂಬಂಧ ಕೆಲವು ಮಂದಿ ಶಂಕಿತರ‌ನ್ನು ಈಗಾಗಲೇ
ವಶಕ್ಕೆ ಪಡೆದು ವಿಚಾರಣೆ ನಡೆಸಲಾ ಗುತ್ತಿದೆ. ಆದರೆ ಕೊಲೆ ಪ್ರಕರಣದ ಬಗ್ಗೆ ಇನ್ನೂ ಕೂಡ ಸ್ಪಷ್ಟವಾದ ಸುಳಿವು ಲಭ್ಯವಾಗಿಲ್ಲ. ಈ ಕಾರಣಕ್ಕೆ ಹೆಚ್ಚಿನ ತನಿಖೆ ಮುಂದುವರಿಸಲಾಗಿದ್ದು, ಕೆಲವೇ ದಿನಗಳಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು. ಆ ಮೂಲಕ ಶರತ್‌ ಕೊಲೆ ಪ್ರಕರಣವನ್ನು ಭೇದಿಸುವ ವಿಶ್ವಾಸವಿದೆ ಎಂದು ಪೊಲೀಸ್‌ ಅಧಿಕಾರಿಗಳು ಉದಯವಾಣಿಗೆ ತಿಳಿಸಿದ್ದಾರೆ.

ಜು. 4ರಂದು ರಾತ್ರಿ ಶರತ್‌ ಅವರ ಮೇಲೆ ದುಷ್ಕರ್ಮಿಗಳಿಂದ ದಾಳಿ ನಡೆದಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಜು. 7ರಂದು ಮೃತಪಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next