Advertisement

ತನ್ನ ಹಸಿವು ನೀಗಿಸಲು ತಂದಿದ್ದ ಆಹಾರವನ್ನು ಹಸಿದವನಿಗೆ ನೀಡಿದ ಪೊಲೀಸರು..!

08:12 PM May 10, 2021 | Team Udayavani |

ಪುತ್ತೂರು : ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯ ಸಂಟ್ಯಾರು ಬಳಿ ಉಣ್ಣಲು ಆಹಾರವಿಲ್ಲದೆ ಬಾವಲಿ ತಿಂದು ಬಿದ್ದಿದ್ದ ಹಣ್ಣುಗಳನ್ನು ಸೇವಿಸುತ್ತಿದ್ದ ಮಡಿಕೇರಿ ನಿವಾಸಿಯೊಬ್ಬರಿಗೆ ಇಬ್ಬರು ಪೊಲೀಸ್ ಸಿಬಂದಿಗಳು ಮನೆಯಿಂದ ತಂದಿದ್ದ ಆಹಾರವನ್ನು ನೀಡಿ ಹಸಿವು ನೀಗಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ.

Advertisement

ಓದಿ : 5 ವರ್ಷಗಳ ಹಿಂದೆ “ಕೋವಿಡ್” ಬಗ್ಗೆ ಚರ್ಚೆ ನಡೆಸಿದ್ದರು ಚೀನಾ ವಿಜ್ಞಾನಿಗಳು..! : ವರದಿ

ಮಡಿಕೇರಿ ರಾಣಿಪೇಟೆ ನಿವಾಸಿ ಕೆಲ ದಿನಗಳ ಹಿಂದೆ ಕೆಲಸಕ್ಕೆಂದು ಮಂಗಳೂರಿಗೆ ಬಂದಿದ್ದರು. ಆದರೆ ಲಾಕ್ ಡೌನ್ ಪರಿಣಾಮ ಕೆಲಸ ಇಲ್ಲದೆ, ಊರಿಗೆ ತೆರಳಲು ಬಸ್ ಇಲ್ಲದೆ ಮಂಗಳೂರಿನಿಂದ ಮಡಿಕೇರಿಗೆ ನಡೆದುಕೊಂಡು ಹೊರಟಿದ್ದರು. ಎರಡು ದಿನಗಳಿಂದ ಆಹಾರ ಸಿಗದೆ ಉಪವಾಸದಿಂದಲೇ ಪಯಣ ಮುಂದುವರಿಸಿದ್ದರು. ಮಾಣಿ- ಮೈಸೂರು ಹೆದ್ದಾರಿಯ ಪುತ್ತೂರು ತಾಲೂಕಿನ ಸಂಟ್ಯಾರು ಬಳಿ ತಲುಪಿದ್ದು ಹಸಿವು ತಡೆದುಕೊಳ್ಳಲಾಗದೆ ಅಲ್ಲಿ ಬಾವಲಿ ಅರ್ಧ ತಿಂದು ಹಾಕಿದ ಮಾವಿನ ಹಣ್ಣು ತಿನ್ನಲು ತೊಡಗಿದ್ದರು. ಈ ವಿಚಾರ ಸಂಟ್ಯಾರು ಚೆಕ್ ಪಾಯಿಂಟ್ ಬಳಿ ಕರ್ತವ್ಯ ನಿರ್ವಹಿಸುತ್ತಿದ್ದ ಸಂಪ್ಯ ಠಾಣಾ ಪೊಲೀಸ್ ಸಿಬಂದಿಗಳಾದ ದಯಾನಂದ ಹಾಗೂ ಕಿರಣ್ ಅವರ ಗಮನಕ್ಕೆ ಬಂದಿತು. ತತ್‌ಕ್ಷಣ ಪೋಲಿಸರು ಮಧ್ಯಾಹ್ನದ ಹಸಿವು ನೀಗಿಸಲು ಮನೆಯಿಂದ ತಂದಿದ್ದ ಊಟವನ್ನು ಆ ವ್ಯಕ್ತಿಗೆ ನೀಡಿ ಹಸಿವು ನೀಗಿಸಿ ಅನಂತರ ವಾಹನವೊಂದರಲ್ಲಿ ಮಡಿಕೇರಿಗೆ ಕಳುಹಿಸಿದ್ದಾರೆ.

ಲಾಕ್ ಡೌನ್ ಸಂಕಷ್ಟದ ಕರ್ತವ್ಯದ ನಡುವೆ ಪೊಲೀಸರಿಬ್ಬರ ಮಾನವೀಯತೆಗೆ ಎಲ್ಲೆಡೆ ಶ್ಲಾಘನೆ ವ್ಯಕ್ತವಾಗುತ್ತಿದ್ದು, ಸಿಬಂದಿಗಳ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹೃಷಿಕೇಶ್ ಸೋನಾವಣೆ ಮೆಚ್ಚುಗೆ ಸೂಚಿಸಿದ್ದಾರೆ.

ಓದಿ : ವಿಶೇಷ ಅಧಿವೇಶನ; ವಿಶ್ವಾಸ ಮತಯಾಚನೆಯಲ್ಲಿ ನೇಪಾಳ ಪ್ರಧಾನಿ ಕೆಪಿ ಶರ್ಮಾಗೆ ಸೋಲು

Advertisement
Advertisement

Udayavani is now on Telegram. Click here to join our channel and stay updated with the latest news.

Next