Advertisement
ಕ್ಲಪ್ತ ಸಮಯದಲ್ಲಿ ಅಪರಾಧಗಳ ಶೋಧನೆ,ಸಾಮಾಜಿಕ ಜಾಲತಾಣಗಳ ಪ್ರಕರಣ ಭೇದಿಸುವುದು, ಸೈಬರ್ ವಂಚನೆಗಳನ್ನು ನಿಯಂತ್ರಿಸುವ ಸವಾಲುಗಳಿರುವುದರಿಂದ ಸೈಬರ್ ಘಟಕಗಳನ್ನು ಗಟ್ಟಿಗೊಳಿಸಲಾಗುತ್ತಿದೆ.ಕರಾವಳಿ ಕಾವಲು ಪಡೆ ಶಸಕ್ತರಾಗಬೇಕೆನ್ನುವ ಉದ್ದೇಶದಿಂದ ಹೆಚ್ಚುವರಿ ಅನುದಾನ ನೀಡಲಾಗುವುದು. ಕೇಂದ್ರ ಹಾಗೂ ರಾಜ್ಯ ಸರಕಾರದ ಅನುದಾನ ವಿನಿಯೋಗ ಮಾಡಿ ಇಲಾಖೆಯನ್ನು ಇನ್ನಷ್ಟು ಬಲಗೊಳಿಸಲಾಗುತ್ತದೆಎಂದು ಹೇಳಿದರು.
ಕುಂದಾಪುರದಲ್ಲಿರುವ ಮಹಿಳಾ ಠಾಣೆಯನ್ನು ಜಿಲ್ಲಾ ಕೇಂದ್ರ ಸ್ಥಾನಕ್ಕೆ ವರ್ಗಾಯಿಸಲಾಗಿದೆ. ಇದರಿಂದ ಬೈಂದೂರಿನ ಸಂತ್ರಸ್ತರು ಮಹಿಳಾ ಠಾಣೆಗೆ ದೂರು ನೀಡಬೇಕಾದರೆ ಉಡುಪಿಗೆ ತೆರಳಬೇಕು ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾ ಕೇಂದ್ರದಲ್ಲಿ ಮಹಿಳಾ ಠಾಣೆ ಇರಬೇಕಾಗಿರುವ ಉದ್ದೇಶದಿಂದ ವರ್ಗಾಯಿಸಲಾಗಿದೆ. ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಮಾಹಿತಿ ಪಡೆದುಕೊಂಡಿದ್ದು ತಾಲೂಕು ಕೇಂದ್ರವಾದ ಬೈಂದೂರಿಗೆ ಮಹಿಳಾ ಠಾಣೆ ಮಂಜೂರು ಮಾಡುವ ಕುರಿತು ಪ್ರಕ್ರಿಯೆ ಮುಂದುವರಿಸುತ್ತೆನೆ ಎಂದರು. ಜಿಲ್ಲೆಯ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ಕರಾವಳಿಯ ಪ್ರವಾಸೋದ್ಯಮ ಅಭಿವೃದ್ಧಿಗೆ ಸರಕಾರ ಹಾಗೂ ಖಾಸಗಿ ಬಂಡವಾಳ ಹೂಡಿಕೆ ಮಾಡಲಾಗುವುದು. ಔರಾದ್ಕರ್ ವರದಿ ಸಮರ್ಪಕವಾಗಿ ಅನುಷ್ಠಾನವಾಗಿದೆ. ಈ ಬಗ್ಗೆ ಗೊಂದಲಗಳಿಲ್ಲ. ಸಮಾನಾಂತರ ಪಾವತಿ ಕ್ರಮ ನಡೆಯುತ್ತಿದೆ ಎಂದರು.
Related Articles
Advertisement
ಮುಖ್ಯ ಅತಿಥಿಗಳಾಗಿ ಉಡುಪಿ ಶಾಸಕ ರಘುಪತಿ ಭಟ್, ಭಟ್ಕಳ ಶಾಸಕ ಸುನೀಲ್ ನಾಯ್ಕ, ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಶಾ ಜೇಮ್ಸ್, ಯಡ್ತರೆ ಗ್ರಾ.ಪಂ. ಅಧ್ಯಕ್ಷೆ ಮೂಕಾಂಬು ದೇವಾಡಿಗ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರ ಚಂದ್ರ, ಕುಂದಾಪುರ ಸಹಾಯಕ ಪೊಲೀಸ್ ಅಧೀಕ್ಷಕ ಹರಿರಾಮ್ ಶಂಕರ್, ತಾ.ಪಂ. ಅಧ್ಯಕ್ಷೆ ಶ್ಯಾಮಲಾ ಕುಂದರ್, ಮಟ್ಟಾರು ರತ್ನಾಕರ ಹೆಗ್ಡೆ, ಕರ್ನಾಟಕ ಸ್ಟೇಟ್ ಪೊಲೀಸ್ ಕಾರ್ಪೊರೇಶನ್ ಎ.ಇ. ಗೋಪಾಲ ಕೃಷ್ಣ, ಸಂತೋಷ ಕುಮಾರ್ ಉಳ್ಳಾಲ ಎ.ಇ., ಬೈಂದೂರು ವೃತ್ತ ನಿರೀಕ್ಷಕ ಸುರೇಶ ನಾಯ್ಕ,ಠಾಣಾಧಿಕಾರಿ ತಿಮ್ಮೇಶ್ ಬಿ.ಎನ್. ಉಪಸ್ಥಿತರಿದ್ದರು.
ಈ ಸಂದರ್ಭ ಗುತ್ತಿಗೆದಾರ ಪ್ರಮೋದ್ ಶೆಟ್ಟಿ ಅವರನ್ನು ಗೌರವಿಸಲಾಯಿತು. ಶಿಕ್ಷಕ ಸುಧಾಕರ ಪಿ. ಬೈಂದೂರು ಸ್ವಾಗತಿಸಿ, ನಿರ್ವಹಿಸಿದರು.