Advertisement

Police Find Out: ನಾಪತ್ತೆಯಾಗಿದ್ದ ಸುಳ್ಯದ ಯುವತಿ ಪತ್ತೆ

12:48 AM Sep 01, 2024 | Team Udayavani |

ಸುಳ್ಯ: ಸುಬ್ರಹ್ಮಣ್ಯದಿಂದ ಬೆಂಗಳೂರಿಗೆ ತೆರಳಿ ನಾಪತ್ತೆಯಾಗಿದ್ದ ಸುಳ್ಯ ತಾಲೂಕಿನ ಕೊಲ್ಲಮೊಗ್ರಿನ ಯುವತಿಯನ್ನು ಪೊಲೀಸರು ಪತ್ತೆ ಹಚ್ಚಿ ಮನೆಯವರೊಂದಿಗೆ ಕಳುಹಿಸಿಕೊಟ್ಟಿದ್ದಾರೆ.

Advertisement

18 ವರ್ಷ ಪ್ರಾಯದ ಈಕೆ ಆ.23 ರಂದು, ಶಿಕ್ಷಣಕ್ಕಾಗಿ ಪೋಲೆಂಡ್‌ಗೆ ತೆರಳುತ್ತೇನೆ ಎಂದು ಮನೆಯಲ್ಲಿ ಹೇಳಿ ಕುಕ್ಕೆಯಿಂದ ಬೆಂಗಳೂರಿಗೆ ತೆರಳಿದ್ದರು. ಆ.26ರಂದು ರಾತ್ರಿ ತಾನು ಪೋಲೆಂಡ್‌ಗೆ ತಲುಪಿರುತ್ತೇನೆ ಎಂದು ಯುವತಿ ಮನೆಯವರಿಗೆ ವಾಟ್ಸಾಪ್‌ ಸಂದೇಶ ಕಳುಹಿಸಿದ್ದಾರೆ. ಆ.28ರಂದು ಸಂಬಂಧಿಕರೋರ್ವರು ಆಕೆ ಪೋಲೆಂಡ್‌ಗೆ ತೆರಳಿಲ್ಲ.

ಸುಬ್ರಹ್ಮಣ್ಯ- ಬೆಂಗಳೂರು ಬಸ್ಸಿನಲ್ಲಿ ನೋಡಿರುವುದಾಗಿ ಬಸ್‌ ನಿರ್ವಾಹಕರೋರ್ವರು ತಿಳಿಸಿದ್ದಾರೆ ಎಂದು ಮಾಹಿತಿ ಯುವತಿಯ ಮನೆಯವರಿಗೆ ತಿಳಿಸಿದ್ದರು. ಬಳಿಕ ಮನೆಯವರು ಯುವತಿಗೆ ಕರೆ ಮಾಡಿದಾಗ ಆಕೆ ಸ್ವೀಕರಿಸಿಲ್ಲ. ಆಕೆಯ ಸ್ನೇಹಿತರನ್ನು ಸಂಪರ್ಕಿಸಿದಾಗಲೂ ಯಾವುದೇ ಮಾಹಿತಿ ಸಿಕ್ಕಿಲ್ಲ.

ಯುವತಿ ಬೆಂಗಳೂರಿಗೆ ಬಂದಿರುವ ಮಾಹಿತಿಯಂತೆ ಬೆಂಗಳೂರಿನಲ್ಲೇ ನಾಪತ್ತೆಯಾಗಿರುವ ಬಗ್ಗೆ ಮನೆಯವರು ಬೆಂಗಳೂರಿನ ಉಪ್ಪಾರಪೇಟೆ ಪೊಲೀಸ್‌ ಠಾಣೆಗೆ ಆ.29ರಂದು ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಯುವತಿಯನ್ನು ಬೆಂಗಳೂರಿನಲ್ಲಿ ಪತ್ತೆ ಹಚ್ಚಿದ್ದಾರೆ. ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next