Advertisement

Mangaluru: ಬಸ್ಸಿನ ಫುಟ್‌ಬೋರ್ಡ್‌ನಿಂದ ಬಿದ್ದ ವಿದ್ಯಾರ್ಥಿ: ಅಪಾಯದಿಂದ ಪಾರು

12:39 AM Sep 13, 2024 | Team Udayavani |

ಮಂಗಳೂರು: ತಲಪಾಡಿ ಯಿಂದ ಮಂಗಳೂರಿಗೆ ಬರುತ್ತಿದ್ದ ಸಿಟಿ ಬಸ್ಸೊಂದು ಪ್ರಯಾಣಿಕರನ್ನು ತುಂಬಿಸಿಕೊಂಡು ಬರುತ್ತಿದ್ದಾಗ ತೊಕ್ಕೊಟ್ಟು ಮೇಲ್ಸೇತುವೆ ಚಾಲಕ ದಿಢೀರ್‌ ಬ್ರೇಕ್‌ ಹಾಕಿದ ಪರಿಣಾಮ ಫುಟ್‌ಬೋರ್ಡ್‌ನಲ್ಲಿ ನೇತಾಡುತ್ತಿದ್ದ ವಿದ್ಯಾರ್ಥಿಯೊಬ್ಬ ಬಸ್ಸಿನಿಂದ ಕೆಳಕ್ಕೆ ಬಿದ್ದಿದ್ದಾನೆ. ಘಟನೆಯಲ್ಲಿ ವಿದ್ಯಾರ್ಥಿಗೆ ಯಾವುದೇ ಗಾಯವಾಗದೆ ಅಪಾಯ ದಿಂದ ಪಾರಾಗಿದ್ದಾನೆ.

Advertisement

ಬುಧವಾರ ಬೆಳಗ್ಗೆ 8.25ರ ಸುಮಾರಿಗೆ ಘಟನೆ ನಡೆದಿದ್ದು, ಬಸ್ಸಿನ ಚಾಲಕ ಮಹಮ್ಮದ್‌ ಫಯಾಝ್ ಮತ್ತು ನಿರ್ವಾಹಕ ಮನೀಶ್‌ ಯಾನೆ ಕಾರ್ತಿಕ್‌ ವಿರುದ್ಧ ಸಂಚಾರ ದಕ್ಷಿಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಸ್ಸಿನಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿಕೊಂಡು, ವಿದ್ಯಾರ್ಥಿಗಳು ಸಹಿತ ಪ್ರಯಾಣಿಕರನ್ನು ಫುಟ್‌ಬೋರ್ಡ್‌ನಲ್ಲಿ ನೇತಾಡಿಸಿಕೊಂಡು ನಿರ್ಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ ಬಗ್ಗೆ ಸಾರ್ವಜನಿಕರೊಬ್ಬರು ವೀಡಿಯೋ ಮಾಡಿದ್ದು, ಇದರ ಆಧಾರದಲ್ಲಿ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next