Advertisement

ಜಾನುವಾರು ಸಂರಕ್ಷಣೆ ಆದೇಶ ಪಾಲಿಸಲು ಪೊಲೀಸರು ವಿಫ‌ಲ

11:43 AM Sep 07, 2017 | |

ಬೆಂಗಳೂರು: ಶಿವಾಜಿನಗರ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮವಾಗಿ ಕೂಡಿ ಹಾಕಿರುವ ಜಾನುವಾರುಗಳನ್ನು ರಕ್ಷಿಸುವಂತೆ ನೀಡಿದ್ದ ಆದೇಶ ಪಾಲಿಸಲು ವಿಫ‌ಲರಾದ  ಶಿವಾಜಿನಗರ ಪೊಲೀಸರ ಕಾರ್ಯವೈಖರಿಗೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

Advertisement

ಈ ಸಂಬಂಧ ಗೋ ಗ್ಯಾನ್‌ ಫೌಂಡೇಶನ್‌ ಸಲ್ಲಿಸಿದ್ದ ಅರ್ಜಿಯನ್ನು ಬುಧವಾರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅರವಿಂದ ಕುಮಾರ್‌ ಅವರಿದ್ದ ಏಕಸದಸ್ಯ ಪೀಠ, ಶಿವಾಜಿನಗರ ಪೊಲೀಸರು ಹಾಗೂ ಸರ್ಕಾರಿ ಪರ ವಕೀಲರಿಗೆ ತೀವ್ರ ತರಾಟೆ ತೆಗೆದುಕೊಂಡಿತು. 

ಈ ಪ್ರಕರಣದಲ್ಲಿ ಪೊಲೀಸರು ನ್ಯಾಯಾಲಯದ ಆದೇಶ ಪಾಲಿಸುವುದು ಕಷ್ಟ ಸಾಧ್ಯ. ಅಕ್ರಮಮವಾಗಿ ಕೂಡಿ ಹಾಕಿದ್ದ ಜಾನುವಾರಳಿದ್ದ ಸ್ಥಳಕ್ಕೆ ತೆರಳಿದ್ದರೆ ಪರಿಸ್ಥಿತಿ ಕೈ ಮೀರುವ ಹಂತದಲ್ಲಿತ್ತು ಎಂದು ನೀಡಿರುವ ವಿವರಣೆಯನ್ನು ಒಪ್ಪಲಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿತು.

ಇನ್ನು ಅಕ್ರಮವಾಗಿ ಜಾನುವಾರುಗಳು ಸೇರಿದಂತೆ ಪ್ರಾಣಿಗಳನ್ನು ಕೂಡಿಹಾಕುವುದು ಹಾಗೂ  ವಧೆ ಮಾಡುವುದು ಶಿವಾಜಿನಗರಕ್ಕೆ ಮಾತ್ರ ಸೀಮಿತವಾಗಿಲ್ಲ. ಕಲಬುರಗಿ,ಧಾರವಾಡ ಸೇರಿದಂತೆ ರಾಜ್ಯದ ಇತರೆಡೆಯೂ ಇದೇ ಪರಿಸ್ಥಿತಿಯಿದೆ.

ಒಂದು ಜಾನುವಾರು ಕಡಿಯಲು ಅನುಮತಿ ಪಡೆದುಕೊಂಡು 10 ಪ್ರಾಣಿಗಳನ್ನು ಹತ್ಯೆ ಮಾಡಲಾಗುತ್ತಿದೆ. ಈ ರೀತಿಯ ಅಕ್ರಮವನ್ನು ತಡೆಗಟ್ಟಲು ರಾಜ್ಯಸರ್ಕಾರ ಏನು ಕ್ರಮಕೈಗೊಂಡಿದೆ ಎಂದು ಸರ್ಕಾರದ ಪರ ವಕೀಲರನ್ನು ಪ್ರಶ್ನಿಸಿದ ನ್ಯಾಯಪೀಠ, ಈ ಕುರಿತು ವರದಿ ಸಲ್ಲಿಸುವಂತೆ ಸೂಚನೆ ನೀಡಿ ಅರ್ಜಿ ವಿಚಾರಣೆ ಮುಂದೂಡಿತು.

Advertisement

ಇದೇ ಅರ್ಜಿ ಸಂಬಂಧ ಸೆಪ್ಟೆಂಬರ್‌ 1ರಂದು ವಿಚಾರಣೆ ನಡೆಸಿದ್ದ ನ್ಯಾಯಾಲಯ, ಶಿವಾಜಿನಗರದಲ್ಲಿ ಕೂಡಿ ಹಾಕಲಾಗಿದೆ ಎನ್ನಲಾದ ಜಾನುವಾರಗಳ ಪತ್ತೆ ಹಾಗೂ ರಕ್ಷಿಣೆಗೆ ಇಬ್ಬರು ಕೋರ್ಟ್‌ ಕಮಿಷನರ್‌ಗಳನ್ನು ನೇಮಕಗೊಳಿಸಲಾಗಿತ್ತು. ತನಿಖೆ ನಡೆಸುವಂತೆ ಶಿವಾಜಿನಗರ ಪೊಲೀಸ್‌ ಠಾಣೆ ಇನ್ಸಪೆಕ್ಟರ್‌ಗೆ ಆದೇಶ ನೀಡಿತ್ತು. 

ವರದಿಯಲ್ಲಿ ಏನಿದೆ? 
ಶಿವಾಜಿನಗರದ ದೊಡ್ಡಿ ಪ್ರದೇಶ ಸೇರಿದಂತೆ ಹಲವು ಪ್ರದೇಶಗಳಿಗೆ ಕೋರ್ಟ್‌ ಕಮಿಷನರ್‌ಗಳು, ಸರ್ಕಾರಿ ಅಭಿಯೋಜಕರು, ಶಿವಾಜಿನಗರ ಠಾಣೆ ಇನ್ಸಪೆಕ್ಟರ್‌ ಜೊತೆ ತೆರಳಿದ್ದಾಗ ಅಕ್ರಮವಾಗಿ ಕೂಡಿ ಹಾಕಿದ್ದ ಜಾನುವಾರಗಳನ್ನು ಪತ್ತೆ ಮಾಡಲು ಪೊಲೀಸರು ಅವಕಾಶ ಮಾಡಿಕೊಡಲಿಲ್ಲ.

ಕೆಲ ಸ್ಥಳಗಳಲ್ಲಿ ಅಕ್ರಮವಾಗಿ ಕೂಡಿ ಹಾಕಿದ್ದರೂ ರಕ್ಷಿಸಲು ಸಾಧ್ಯವಾಗದಿರುವುದಕ್ಕೆ ಪೊಲೀಸರೇ ಕಾರಣ ಎಂದು ಗೋ ಗ್ಯಾನ್‌ ಫೌಂಡೇಶನ್‌ನ ಜೈನ್‌ ಹಾಗೂ ಜೊಶೀನ್‌ ಆ್ಯಂಟನಿ ಅಫಿಡವಿಟ್‌ ಸಲ್ಲಿಸಿದ್ದಾರೆ. ಅದೇ ರೀತಿ, ಕೋರ್ಟ್‌ ಕಮಿಷನರ್‌ಗಳೂ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು ಪೊಲೀಸರ ವೈಫ‌ಲ್ಯವನ್ನು ದಾಖಲು ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next