Advertisement

ಪೊಲೀಸ್‌ ಕಾರ್ಯಾಚರಣೆ: ದಂಡ ವಸೂಲಿ

03:21 PM May 08, 2021 | Team Udayavani |

ಕಂಪ್ಲಿ: ಸರ್ಕಾರದ ಮಾರ್ಗಸೂಚಿ ಉಲ್ಲಂಘನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶುಕ್ರವಾರಬೆಳ್ಳಂಬೆಳಗ್ಗೆ ಕಾರ್ಯಾಚರಣೆಗಿಳಿದ ಸಿಪಿಐ ಸುರೇಶ ಎಚ್‌. ತಳವಾರ್‌, ಪಿಎಸ್‌ಐ ಟಿ.ಎಲ್‌. ಬಸಪ್ಪ ಲಮಾಣಿ ಮತ್ತು ಸಿಬ್ಬಂದಿ ಸಾರ್ವಜನಿಕರನ್ನು ಚದುರಿಸುವ ಜೊತೆಗೆ 5 ಜನರ ಮೇಲೆ ಪ್ರಕರಣ ದಾಖಲಿಸಿದ್ದಾರೆ.

Advertisement

ಎರಡನೇ ಅಲೆ ನಿಯಂತ್ರಣಕ್ಕಾಗಿ ಸರ್ಕಾರ ಕೋವಿಡ್‌ ಮಾರ್ಗಸೂಚಿಗಳನ್ನು ಜಾರಿಗೆ ತಂದು ಬೆಳಗ್ಗೆ 6 ಗಂಟೆಯಿಂದ 10 ಗಂಟೆವರೆಗೆ ಅಗತ್ಯ ವಸ್ತುಗಳಾದ ಕಿರಾಣಿ, ತರಕಾರಿ ಹಾಲು ಮತ್ತು ಔಷಧ ಖರೀದಿಗೆ ಅವಕಾಶ ನೀಡಿದೆ.ಆದರೆ ಇವುಗಳನ್ನು ಮೀರಿ ಕೆಲವರು ಬಟ್ಟೆಅಂಗಡಿಗಳನ್ನು ಹಾಗೂ ಹೋಟೆಲ್‌, ಸ್ಟೀಲ್‌ಫರ್ನಿಚರ್‌ ಅಂಗಡಿಗಳನ್ನು ತರೆದು ಸಾಮಾಜಿಕ ಅಂತರವನ್ನು ಮರೆತು ವ್ಯಾಪಾರದಲ್ಲಿ ತೊಡಗಿದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅಂಗಡಿಗಳನ್ನು ಮುಚ್ಚಿಸಿದರಲ್ಲದೆ ದಂಡ ವಿಧಿಸುವುದರ ಜೊತೆಗೆ 5 ಜನರ ಮೇಲೆ ಪ್ರಕರಣವನ್ನು ದಾಖಲಿಸಿದ್ದಾರೆ.

ಜೊತೆಗೆ ಖಡಕ್ಕಾಗಿ ಸೂಚನೆಯನ್ನು ನೀಡಿದ್ದು ಇನ್ನು ಮುಂದೆ ಸರ್ಕಾರದ ಮಾರ್ಗಸೂಚಿ ಪ್ರಕಾರ ಅಗತ್ಯ ಸೇವೆಯನ್ನು ಹೊರತುಪಡಿಸಿ ಬೇರೆ ಅಂಗಡಿಗಳು ತೆರೆದರೆ ಅಂಥವರ ವಿರುದ್ಧಅಪರಾಧ ಪ್ರಕರಣಗಳನ್ನು ದಾಖಲಿಸುವುದಾಗಿ ಎಚ್ಚರಿಸಿದರು.

ಪಟ್ಟಣದಲ್ಲಿ ಇದುವರೆಗೆ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ 519ಪ್ರಕರಣಗಳಲ್ಲಿ 86200ರೂ, ಅನಗತ್ಯವಾಗಿ ಸಂಚರಿಸುವ ವಾಹನಗಳ ಮಾಲೀಕರ 133ಪ್ರಕರಣಗಳಲ್ಲಿ 75300 ರೂ ದಂಡ ವಸೂಲಿ ಮಾಡಿದರೆ, ಕಾನೂನು ವಿಭಾಗದ ಪಿಎಸ್‌ಐ ವಿರೂಪಾಕ್ಷಪ್ಪ ಮತ್ತು ಅಪರಾಧ ವಿಭಾಗದಪಿಎಸ್‌ಐ ಟಿ.ಎಲ್‌ ಬಸಪ್ಪ ಲಮಾಣಿ ನೇತೃತ್ವದಲ್ಲಿ ಮಾಸ್ಕ್ ಧರಿಸದ ಹಾಗೂ ಸಾಮಾಜಿಕ ಅಂತರ ಕಾಪಾಡದ 371 ಪ್ರಕರಣಗಳಲ್ಲಿ 37100ರೂ, ಅನಗತ್ಯವಾಗಿ ಸಂಚರಿಸುವ ವಾಹನಗಳಮಾಲೀಕರ 132 ಪ್ರಕರಣಗಳಲ್ಲಿ 57200 ರೂಗಳು ಸೇರಿದಂತೆ 2,48,800ರೂಗಳ ದಂಡ ವಸೂಲಿ ಮಾಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next