Advertisement

ನಿರ್ಗತಿಕರಿಗೆ ಆಹಾರ ವಿತರಿಸಿದ ಪೊಲೀಸರು

09:55 PM May 19, 2021 | Team Udayavani |

ಬೆಂಗಳೂರು: ಕೊರೊನಾದ ವಿಷಮಸ್ಥಿತಿಯಲ್ಲಿ ಕಾನೂನು ಸುವ್ಯವಸ್ಥೆ, ಲಾಕ್‌ಡೌನ್‌ಕರ್ತವ್ಯದ ಜತೆಗೆ ಮಾನವೀಯತೆ ಮೆರೆಯುವಂತಹ ಕೆಲಸಗಳಲ್ಲೂ ನಗರಪೊಲೀಸರು ತೊಡಗಿಸಿಕೊಂಡಿದ್ದಾರೆ. ಮೊದಲ ಅಲೆಯ ಲಾಕ್‌ ಡೌನ್‌ ಸಂದರ್ಭದಲ್ಲಿ ನಗರದ ಬಹುತೇಕ ಪೊಲೀಸ್‌ಠಾಣೆಗಳ ಪೊಲೀಸರು ನಿತ್ಯ ಕನಿಷ್ಠ 500ಮಂದಿಗೆ ಅಡುಗೆ ಮಾಡಿಸಿ ನಿರ್ಗತಿಕರು, ಭಿಕ್ಷುಕರು ಹಾಗೂ ಹಸಿದವರಿಗೆ ಅನ್ನದಾನಮಾಡಿದರು. ಅದೇ ಕಾರ್ಯವನ್ನು ಎರಡನೇಅಲೆಯಲ್ಲೂ ಮುಂದುವರಿಸಿದ್ದಾರೆ.

Advertisement

ಪಶ್ಚಿಮ ವಿಭಾಗದ ಜಗಜೀವನರಾಮ್‌ ನಗರ ಪೊಲೀಸ್‌ ಠಾಣೆ ಇನ್‌ ಸ್ಪೆಕ್ಟರ್‌ ಮಂಜುನಾಥ್‌ ಮತ್ತು ಸಿಬ್ಬಂದಿ ತಮ್ಮ ಠಾಣಾವ್ಯಾಪ್ತಿಯಲ್ಲಿರುವ ನಿರ್ಗತಿಕರು, ಭಿಕ್ಷುಕರು,ತಳ್ಳು ಗಾಡಿ ವ್ಯಾಪಾರಿಗಳಿಗೆ ಅನ್ನದ ಪಾಕೆಟ್‌ಗಳನ್ನು ನೀಡಿ ಹಸಿದ ಹೊಟ್ಟೆತುಂಬಿಸುತ್ತಿದ್ದಾರೆ. ಅದೇ ಕಾರ್ಯವನ್ನು ನಗರದ ಕೆಲ ಪೊಲೀಸ್‌ಠಾಣೆಗಳ ಅಧಿಕಾರಿ-ಸಿಬ್ಬಂದಿ ಮಾಡುತ್ತಿದ್ದಾರೆ.

ಚಾಮರಾಜಪೇಟೆ ಪೊಲೀಸರು ಕೂಡ ಇದೇ ಕಾರ್ಯದಲ್ಲಿತೊಡಗಿದ್ದಾರೆ.ವಾಹನಗಳ ಜಪ್ತಿ: ಕಠಿಣ ಲಾಕ್‌ಡೌನ್‌ ನಡುವೆಯೂ ಅನಗತ್ಯವಾಗಿನಗರದಲ್ಲಿ ಸಂಚರಿಸುತ್ತಿದ್ದ 1404ವಾಹನಗಳನ್ನು ಮಂಗಳವಾರ ಪೊಲೀಸರು ಜಪ್ತಿ ಮಾಡಿದ್ದಾರೆ.1275 ದ್ವಿಚಕ್ರವಾಹನಗಳು, 62ತ್ರಿಚಕ್ರವಾಹನಗಳು,67 ನಾಲ್ಕು ಚಕ್ರದ ವಾಹನಗಳನ್ನುಜಪ್ತಿ ಮಾಡಲಾಗಿದೆ. ಇದೇ ವೇಳೆ 12ಎನ್‌ ಡಿಎಂಎ ಪ್ರಕರಣ ದಾಖಲಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next