Advertisement

ಕ್ರಿಮಿನಲ್‌ ವಿಚಾರಣೆ: ಪೊಲೀಸ್‌ ಡೈರಿ ನೋಂದಣೆ ಕಡ್ಡಾಯವಲ್ಲ: ಸುಪ್ರೀಂ

12:00 PM May 28, 2018 | udayavani editorial |

ಹೊಸದಿಲ್ಲಿ : ಪೊಲೀಸ್‌ ಡೈರಿಯಲ್ಲಿ ಅಪರಾಧದ ವಿವರಗಳು ದಾಖಲಾಗದೇ ಎಫ್ಐಆರ್‌ ಅಥವಾ ಕ್ರಿಮಿನಲ್‌ ವಿಚಾರಣಾ ಪ್ರಕ್ರಿಯೆ ಆರಂಭಿಸುವಂತಿಲ್ಲ ಎಂಬ ಯಾವುದೇ ನಿಯಮ ಇಲ್ಲ ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ. 

Advertisement

ಪೊಲೀಸ್‌ ಡೈರಿಯಲ್ಲಿ ಅಪರಾಧ  ವಿವರ ದಾಖಲಾಗದ ಕಾರಣಕ್ಕೆ ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಆರಂಭಿಸಲ್ಪಟ್ಟ ಕ್ರಿಮಿನಲ್‌ ಪ್ರಕ್ರಿಯೆಯನ್ನು ರದ್ದುಗೊಳಿಸಿದ್ದ ಕರ್ನಾಟಕ ಹೈಕೋರ್ಟ್‌ ತೀರ್ಪಿಗೆ ಸಂಬಂಧಿಸಿ ಜಸ್ಟಿಸ್‌ ಎನ್‌ ವಿ ರಮಣ್‌ ಮತ್ತು ಜಸ್ಟಿಸ್‌ ಅಬ್ದುಲ್‌ ನಜೀರ್‌ ಅವರನ್ನು ಒಳಗೊಂಡ ಪೀಠವು ಈ ಸ್ಪಷ್ಟನೆಯನ್ನು ನೀಡಿತು. 

ಪೊಲೀಸ್‌ ಸ್ಟೇಶನ್‌ ಡೈರಿಯಲ್ಲಿ ಕ್ರಿಮಿನಲ್‌ ಪ್ರಕರಣ ಮಾಹಿತಿ ದಾಖಲಿಸುವುದು ಕಡ್ಡಾಯ ಮತ್ತು ಅದು ವಿಚಾರಣೆಗೆ ಅಗತ್ಯ ಎಂಬ ಅಭಿಪ್ರಾಯ ತಪ್ಪು ಎಂದು ನ್ಯಾಯಪೀಠ ಹೇಳಿತು. 

ಈ ಸಂದರ್ಭದಲ್ಲಿ ಕರ್ನಾಟಕದ ಹೆಚ್ಚುವರಿ ಅಡ್ವೋಕೇಟ್‌ ಜನರಲ್‌ ದೇವದತ್ತ ಕಾಮತ್‌ ಅವರ ವಾದವನ್ನು ನ್ಯಾಯಾಲಯ ಎತ್ತಿ ಹಿಡಿಯಿತು.  

Advertisement

Udayavani is now on Telegram. Click here to join our channel and stay updated with the latest news.

Next