Advertisement
ಫುಟ್‌ಪಾತ್‌ನ ಅಕ್ರಮಿಸಿ ಕೊಂಡವರನ್ನು ತೆರವುಗೊಳಿಸಿದ್ದಕ್ಕೆ ಉದಯವಾಣಿ ಪತ್ರಿಕೆಯ ವರದಿಗೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ. ಕೆ.ಆರ್.ಪುರ ಮಾರುಕಟ್ಟೆಗೆ ನಿತ್ಯ ಕೋಲಾರ, ಮುಳಬಾಗಿಲು, ಚಿಂತಾಮಣಿ, ಬಂಗಾರಪೇಟೆ, ಮಾಲೂರು, ಶಿಡ್ಲಘಟ್ಟ ಹಾಗೂ ಬೆಂಗಳೂರು ಗ್ರಾಮಾಂತರ ಭಾಗಗಳಿಂದ ರೈತರು ತರಕಾರಿಗಳನ್ನು ಟೆಂಪೋಗಳಲ್ಲಿ ತೆಗೆದುಕೊಂಡು ಬರುತ್ತಾರೆ. ಮಾರುಕಟ್ಟೆಗೆ ಬರುವ ರೈತರು, ವ್ಯಾಪಾರಿಗಳು ವಾಹನಗಳನ್ನು ಮುಖ್ಯರಸ್ತೆಯಲ್ಲಿ ನಿಲುಗಡೆ ಮಾಡಿ ಅನ್‌ಲೋಡ್ ಮಾಡುತ್ತಿದ್ದರು. ಇದರಿಂದ ಪಾದಾಚಾರಿಗಳಿಗೆ ಹೆಚ್ಚಿನ ಸಮಸ್ಯೆ ಉಂಟಾಗುತ್ತಿತ್ತು.ಈ ಕುರಿತು ಉದಯವಾಣಿಯಲ್ಲಿ ವರದಿ ಪ್ರಕಟವಾಗಿತ್ತು. ಇದರಿಂದ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ ವಾಹನಗಳನ್ನು ನಿಲುಗಡೆ ಮಾಡದಂತೆ ಬ್ಯಾರಿಕೇಡ್ ಅಳವಡಿಸಿ ಮಾರುಕಟ್ಟೆಗೆ ಬರುವ ವಾಹನಗಳನ್ನು ಬಿಬಿಎಂಪಿ ಕಚೇರಿಯ ಹಿಂಭಾಗದ ಮೂಲಕ ಮಾರುಕಟ್ಟೆಗೆ ಪ್ರವೇಶ ಮಾಡಲು ಅನುವು ಮಾಡಿಕೊಟ್ಟಿದ್ದಾರೆ. ಜತೆಗೆ ರಸ್ತೆ ಬದಿ ವ್ಯಾಪಾರಸ್ಥರನ್ನು ತೆರವುಗೊಳಿಸಿ ಮಾರುಕಟ್ಟೆ ಬಳಿ ಉಂಟಾಗುತ್ತಿದ್ದ ಸಂಚಾರದಟ್ಟಣೆಯನ್ನು ಕಡಿಮೆ ಮಾಡಿದ್ದಾರೆ.
ಮಾರುಕಟ್ಟೆಗೆ ಬರುವ ವಾಹನಗಳನ್ನು ನಿಲ್ಲಿಸದಂತೆ ಬ್ಯಾರಿಕೇಡ್‌ಗಳನ್ನು ನಿರ್ಮಿಸಲಾಗಿದೆ. ಬೆಳಗ್ಗೆ 6 ರಿಂದ 7 ಘಂಟೆಯಲ್ಲಿ ಹೆಚ್ಚು ವಾಹನಗಳು ನಿಲ್ಲುತ್ತಿದ್ದವು. ಈಗಾಗಲೇ ಮಾರುಕಟ್ಟೆ ಬಳಿಯ ರಸ್ತೆ ನಿಲುಗಡೆ ಮಾಡುವ ವಾಹನಗಳನ್ನು ಬಿಬಿಎಂಪಿ ಹಿಂಭಾಗದಲ್ಲಿ ನಿರ್ಮಿಸಿರುವ ಶೆಡ್ ಬಳಿ ಅನ್ ಲೋಡ್ ಮಾಡಲು ಅನುವು ಮಾಡಿಕೊಡಲಾಗಿದೆ.
ಲೋಕೇಶ್ ಕೆ.ಆರ್.ಪುರ ಠಾಣೆ ಸಂಚಾರಿ ನಿರೀಕ್ಷಕ