Advertisement

ಮಳೆ-ಬಿಸಿಲಿಗೆ ಮಾಸಿದ ಕನ್ನಡ ಧ್ವಜ ಬದಲಾಯಿಸಲು ಬಂದ ಕನ್ನಡ ಸಂಘಟನೆ ಕಾರ್ಯಕರ್ತರು ವಶಕ್ಕೆ

01:42 PM Jul 05, 2021 | Team Udayavani |

ಬೆಳಗಾವಿ: ಮಹಾನಗರ ಪಾಲಿಕೆ ಎದುರು ಅಳವಡಿಸಿರುವ ಕನ್ನಡ ಬಾವುಟ ಮಳೆ-ಬಿಸಿಲಿಗೆ ಮಾಸಿದ್ದರಿಂದ ಅದನ್ನು ಬದಲಾಯಿಸಿ ಹೊಸ ಬಾವುಟ ಅಳವಡಿಸಲು ಸೋಮವಾರ ಬಂದಿದ್ದ ಕನ್ನಡ ಸಂಘಟನೆ ಕಾರ್ಯಕರ್ತರನ್ನು ತಡೆದ ಪೊಲೀಸರು ಅವರನ್ನು ವಶಕ್ಕೆ ಪಡೆದುಕೊಂಡರು.

Advertisement

ಕನ್ನಡ ಹೋರಾಟಗಾರರಾದ ಶ್ರೀನಿವಾಸ ತಾಳೂಕರ ಹಾಗೂ ವಾಜೀದ್ ಹಿರೇಕೋಡಿ ನೇತೃತ್ವದಲ್ಲಿ ಕನ್ನಡ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪಾಲಿಕೆ ಎದುರು ಪ್ರತಿಭಟನೆ ನಡೆಸಿದರು. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರು ದ್ವಜ ಸ್ತಂಬದ ಕಡೆಗೆ ಹೋಗುವುದನ್ನು ತಡೆದರು. ಆಗ ಪೊಲೀಸರೊಂದಿಗೆ ವಾಗ್ವಾದ ನಡೆಸಿದರು.

ಇದನ್ನೂ ಓದಿ:ಹೆಣ್ಣಿನ ಬಗ್ಗೆ ಹೇಗೆ ಮಾತಾಡಬೇಕು ಅಂತ ಕುಮಾರಸ್ವಾಮಿ ಅರ್ಥಮಾಡಿಕೊಳ್ಳಬೇಕು : ಸುಮಲತಾ

ಕನ್ನಡ ಧ್ವಜ ಮಳೆ-ಬಿಸಿಲಿನಿಂದ ಬಣ್ಣ ಕಳೆದುಕೊಂಡಿದೆ. ತುದಿಯಲ್ಲಿ ಸಣ್ಣ ಪ್ರಮಾಣದಲ್ಲಿ ಹರಿದಿದೆ. ಆದರೂ ಪಾಲಿಕೆಯವರು ಧ್ವಜ ಬದಲಾಯಿಸಲು ಮುಂದಾಗುತ್ತಿಲ್ಲ. ರಾಜಕೀಯ ಒತ್ತಡದಿಂದ ಧ್ವಜ ತೆರವುಗೊಳಿಸಲು  ಅಧಿಕಾರಿಗಳು ಮುಂದಾಗಿದ್ದಾರೆ ಎಂದು ಆರೋಪಿಸಿದರು

Advertisement

Udayavani is now on Telegram. Click here to join our channel and stay updated with the latest news.

Next