Advertisement
ಬೆಳ್ಳಾರೆ ಮಸೂದ್, ಪ್ರವೀಣ್ ನೆಟ್ಟಾರು ಮತ್ತು ಫಾಝಿಲ್ ಕೊಲೆ ಪ್ರಕರಣಗಳಿಂದ ಸೂಕ್ಷ್ಮ ಪ್ರದೇಶವಾಗಿರುವ ಮಂಗಳೂರಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಠಿಯಿಂದ ನಿರ್ಬಂಧ ಹೇರಲಾಗಿತ್ತು. ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅವರು, ಮಂಗಳೂರು ನಗರ ಸಹಿತ ಪೊಲೀಸ್ ಕಮಿಷನರೆಟ್ ವ್ಯಾಪ್ತಿಗೆ ಪ್ರವೇಶಿಸುವುದಕ್ಕೆ ಪ್ರಮೋದ್ ಮುತಾಲಿಕ್ ಅವರಿಗೆ ನಿರ್ಬಂಧ ಹೇರಿ ಗುರುವಾರ ಆದೇಶ ಹೊರಡಿಸಿದ್ದರು.
Related Articles
Advertisement
ದ.ಕ. ಜಿಲ್ಲೆಯಲ್ಲಿ ನಡೆದ ಪ್ರವೀಣ್ ಹತ್ಯೆಗೆ ಸಂಬಂಧಿಸಿ ಮಾತನಾಡಿದ ಮುತಾಲಿಕ್, ಬಿಜೆಪಿಗರು ಕಾರ್ಯಕರ್ತರ ಕಷ್ಟ- ಸುಖಕ್ಕೆ ಸ್ಪಂದಿಸಿದ್ದರೆ ಪ್ರವೀಣ್ ಹತ್ಯೆ ಆಗುತ್ತಿರಲಿಲ್ಲ. ಸುಳ್ಯದಲ್ಲಿ ನಡೆದ ಪ್ರವೀಣ್ ಹತ್ಯೆ ಅತ್ಯಂತ ದುರದೃಷ್ಟಕರ. ಶ್ರದ್ಧೆಯಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದ ಒಬ್ಬ ಕಾರ್ಯಕರ್ತನ ಕಷ್ಟವನ್ನು ನಾಯಕರು ಅರಿತಿದ್ದರೆ ಪ್ರವೀಣ್ ಗೆ ಆಶ್ರಯ ಸಿಗುತ್ತಿತ್ತು.
ಹತ್ಯೆ ಬಳಿಕ ಮನೆಗೆ ಭೇಟಿ ನೀಡಿ ಮುಖ್ಯಮಂತ್ರಿಗಳು ನೀಡಿರುವ 25 ಲಕ್ಷ ರೂ. ಒಪ್ಪಲಾಗದಿರುವುದು. ಇಂತಹ ಘಟನೆಗಳು ಮೇಲಿಂದ ಮೇಲೆ ನಡೆಯಬಾರದು ಎಂದು ಆಗ್ರಹಿಸಿದರು.
ಬಿಜೆಪಿಯ ನಾಯಕರುಗಳು ತಮ್ಮ 3-4 ಪೀಳಿಗೆ ಉಣ್ಣುವಷ್ಟು ಮಾಡಿಟ್ಟಿದ್ದಾರೆ. ಇದಕ್ಕೆ ನಾನು ಬಿಜೆಪಿಗೆ ಧಿಕ್ಕಾರ ಹೇಳುತ್ತೇನೆ. ಸಾರ್ವಜನಿಕರು ಪ್ರವೀಣ್ ಹತ್ಯೆಯಿಂದ ಆಕ್ರೋಶಗೊಂಡಿದ್ದಾರೆ. ಈ ತಪವೇ ಶವಯಾತ್ರೆಯ ದಿನ ಸ್ಫೋಟವಾಗಿದೆ. ಹತ್ಯೆ ಖಂಡಿಸಿ ರಾಜಿನಾಮೆ ಕೊಟ್ಟವರು ನಿಜವಾದ ಹಿಂದೂ ವಾದಿಗಳು ಎಂದು ಹೇಳಿ ಅವರೆಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಇದೇ ವೇಳೆ ಸುರತ್ಕಲ್ ನ ಫಾಝಿಲ್ ಹತ್ಯೆ ಗೆ ಸಂಬಂಧಿಸಿ ಮಾತನಾಡಿದ ಅವರು, ಸುರತ್ಕಲ್ ನಲ್ಲಿ ಯಾವುದಕ್ಕೆ ಕೊಲೆಯಾಗಿದೆ ಗೊತ್ತಿಲ್ಲ. ಕ್ರಿಯೆಗೆ ಪ್ರತಿಕ್ರಿಯೆಯಾಗಬಾರದು. ಇದನ್ನು ಹಿಂದು ಮತ್ತು ಮುಸ್ಲಿಂ ಧಾರ್ಮಿಕ ಮುಖಂಡರು ಒಟ್ಟಿಗೆ ಸೇರಿ ಬಗೆಹರಿಸಬೇಕು ಎಂದರು.