Advertisement

KCR rallyಗೆ ಮುನ್ನ ತೆಲಂಗಾಣ ಕಾಂಗ್ರೆಸ್‌ ನಾಯಕ ಪೊಲೀಸರ ವಶ

11:39 AM Dec 04, 2018 | Team Udayavani |

ಹೈದರಾಬಾದ್‌ : ಉಸ್ತುವಾರಿ ಮುಖ್ಯಮಂತ್ರಿ ಮತ್ತು ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಮುಖ್ಯಸ್ಥ ಕೆ ಚಂದ್ರಶೇಖರ ರಾವ್‌ (ಕೆಸಿಆರ್‌) ಅವರ rally ನಡೆಯಲಿಕ್ಕಿರುವಂತೆಯೇ ಯಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸುವ ಸಲುವಾಗಿ ಪೊಲೀಸರಿಂದು ನಸುಕಿನ ವೇಳೆ ತೆಲಂಗಾಣ ಕಾಂಗ್ರೆಸ್‌ ಕಾರ್ಯಾಧ್ಯಕ್ಷ , ಹಾಲಿ ಕೊಡಂಗಳ ಶಾಸಕ ರೇವಂತ ರೆಡ್ಡಿ ಅವರನ್ನು ತಮ್ಮ ವಶಕ್ಕೆ ತೆಗೆದುಕೊಂಡಿರುವುದಾಗಿ ವರದಿಗಳು ತಿಳಿಸಿವೆ. 

Advertisement

ಕೆಸಿಆರ್‌ ಅವರ ರಾಲಿ ಕೊಡಂಗಳದ ಕೋಸಿಗಿ ಎಂಬಲ್ಲಿ  ಇಂದು ನಡೆಯಲಿದ್ದು ಈ rally ಯಲ್ಲಿ ಅಹಿತಕರ ಘಟನೆ ನಡೆಯುವ ಸಂಭಾವ್ಯತೆಯನ್ನು ಅರಿತ ಪೊಲೀಸರು ಮುನ್ನೆಚ್ಚರಿಕೆ ಕ್ರಮವಾಗಿ ರೆಡ್ಡಿ ಅವರನ್ನು ಅವರ ನಿವಾಸದಲ್ಲೇ ಇಂದು ನಸುಕಿನ ವೇಳೆ ತಮ್ಮ ವಶಕ್ಕೆ ತೆಗೆದುಕೊಂಡು ಅಜ್ಞಾತ ಸ್ಥಳಕ್ಕೆ ಒಯ್ದರೆಂದು ಐಎಎನ್‌ಎಸ್‌ ಸುದ್ದಿ ಸಂಸ್ಥೆ ವರದಿ ಮಾಡಿದೆ.

ರೆಡ್ಡಿ ಅವರು ಈ ಮೊದಲೇ ತಾನು ಕೆಸಿಆರ್‌ rallyಯನ್ನು ಹಾಳುಗೆಡವುದಾಗಿ ಬೆದರಿಕೆ ಹಾಕಿದ್ದರಲ್ಲದೆ ರಾಲಿಯ ವೇಳೆ ಪಟ್ಟಣವನ್ನು ಸಂಪೂರ್ಣ ಬಂದ್‌ ಮಾಡಬೇಕೆಂದು ಕರೆ ನೀಡಿದ್ದರು. ಈ ಬೆದರಿಕೆಗಳಿಗಾಗಿ ಚುನಾವಣಾ ಆಯೋಗ ರೆಡ್ಡಿಗೆ ನೊಟೀಸ್‌ ಕೂಡ ಜಾರಿ ಮಾಡಿತ್ತು. 

ರೆಡ್ಡಿ ಅವರು ಈ ವರ್ಷಾರಂಭದಲ್ಲಿ ತೆಲುಗೆ ದೇಶಂ ಪಕ್ಷವನ್ನು (ಟಿಡಿಪಿ) ತೊರೆದು ಕಾಂಗ್ರೆಸ್‌ ಸೇರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next