ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಅಡಕೆ, ಕಾಫಿ, ಕಳ್ಳತನ ಪ್ರಕರಣ ವರದಿಯಾಗಿದ್ದು, ಇಂತಹ ಪ್ರಕರಣ ಬೇ ಧಿಸಲು ಪೊಲೀಸ್ ಇಲಾಖೆ ಕಾರ್ಯಪ್ರವೃತ್ತ ವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಎಚ್. ಅಕ್ಷಯ್ ತಿಳಿಸಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಹಲವೆಡೆ ಅಡಕೆ, ಕಾಫಿ ಕಳ್ಳತನ ಪ್ರಕರಣ ದಾಖಲಾಗಿವೆ. ಇಂತಹ ಪ್ರಕರಣ ನಿಯಂತ್ರಿಸಲು ಇಲಾಖೆ ಅಗತ್ಯ ಕ್ರಮ ಕೈಗೊಂಡಿದೆ. ಬೆಂಗಳೂರಿನ ಕಳ್ಳರ ಒಂದು ತಂಡ ಪ್ರವಾಸಿಗರ ಸೋಗಿನಲ್ಲಿ ಜಿಲ್ಲೆಯಲ್ಲಿ ಕಳ್ಳತನ ನಡೆಸುತ್ತಿದ್ದು, ಈ ತಂಡದವರು ರಾತ್ರಿ ವೇಳೆ ಬೈಕ್‌ಗಳಲ್ಲಿ ಒಂಟಿ ಮನೆಗಳ ಮಾಹಿತಿ ಸಂಗ್ರಹಿಸಿ ಸಮಯ ನೋಡಿ ಮನೆಗಳ್ಳತನ ಮಾಡುತ್ತಿರುವ ಮಾಹಿತಿ ಇದೆ. ಈ ತಂಡದ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ ಎಂದರು.
ಬಾಳೆಹೊನ್ನೂರಿನಲ್ಲಿ ನಡೆದ ಅಡಕೆ ಕಳ್ಳತನ ಪ್ರಕರಣಕ್ಕೆ ಸಂಬಂ ಧಿಸಿದಂತೆ 5 ಜನರನ್ನು ಬಂ ಧಿಸಲಾಗಿದೆ. ಅಜ್ಜಂಪುರ ತಾಲ್ಲೂನಲ್ಲಿ 2 ಕಳ್ಳತನ ಪ್ರಕರಣದಲ್ಲಿ ಆರೋಪಿಗಳುಮ ಸಖರಾಯಪಟ್ಟಣದಲ್ಲಿ ನಡೆದ 3 ಕಳ್ಳತನ ಪ್ರಕರಣದ ಆರೋಪಿಗಳನ್ನು ಹಾಗೂ ಬೀರೂರು ನಡೆದ 3 ಕಳ್ಳತನ ಪ್ರಕರಣ ಬೇಧಿ ಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು. ಮಲೆನಾಡು ಭಾಗದ ಅಡಕೆ, ಕಾಫಿ ಬೆಳೆಗಾರರು ಮತ್ತು ಸಾರ್ವಜನಿಕರು ಅನುಮಾನಾಸ್ಪದ ವ್ಯಕ್ತಿಗಳು ಕಂಡು ಬಂದಲ್ಲಿ ಆಯಾ ಪೊಲೀಸ್ ಠಾಣೆಗೆ ಮಾಹಿತಿ ನೀಡುವ ಮೂಲಕ ಇಂತಹ ಪ್ರಕರಣಗಳ ಆರೋಪಿಗಳ ಬಂಧನಕ್ಕೆ ಸಹಕಾರ ನೀಡಬೇಕೆಂದು ಮನವಿ ಮಾಡಿದರು.
ಕೇಂದ್ರ ಸರ್ಕಾರ ನಿರ್ಭಯ ನಿಧಿ ಯಡಿಯಲ್ಲಿ ಬಂದ ಅನುದಾನದಲ್ಲಿ ರಾಜ್ಯ ಸರ್ಕಾರ ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಮಹಿಳಾ ಸಹಾಯವಾಣಿ ಕೇಂದ್ರಗಳನ್ನು ಆರಂಭಿಸಲು ಅನುದಾನ ನೀಡಿದೆ. ಠಾಣಾ ವ್ಯಾಪ್ತಿಯಲ್ಲಿ ರಾತ್ರಿಗಸ್ತು ನಡೆಸಲು 29 ದ್ವಿಚಕ್ರ ವಾಹನ ನೀಡಿದೆ ಎಂದರು. ನಗರ ಪ್ರದೇಶದಲ್ಲಿ ಟಿಪ್ಪರ್ ವಾಹನಗಳು ಅತೀವೇಗದಲ್ಲಿ ಸಂಚರಿಸುವ ದೂರುಗಳು ಸಾರ್ವಜನಿಕರಿಂದ ಕೇಳಿ ಬಂದಿದೆ. ಟಿಪ್ಪರ್ ಚಾಲಕರು ಮತ್ತು ಮಾಲೀಕರಿಗೆ ಕಾನೂನಿನ ತಿಳುವಳಿಕೆ ನೀಡಲಾಗಿದೆ. ಕಾನೂನು ಉಲ್ಲಂಘಿಸುವ ಟಿಪ್ಪರ್‌ಗಳಿಗೆ ದಂಡ ವಿಧಿಸಲಾಗುತ್ತಿದೆ. ಅತೀ ವೇಗದಲ್ಲಿ ಟಿಪ್ಪರ್ ಚಾಲನೆ ಕಂಡು ಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಇದನ್ನೂ ಓದಿ:ಬೀದರನಲ್ಲಿ ರಾಜ್ಯದ ಮೊದಲ ಬೇಟಿ ಸರ್ಕಲ್
ನಗರದ ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಕಚೇರಿ ಮುಂಭಾಗದಲ್ಲಿ ನಿರ್ಮಿಸಲಾಗಿರುವ ವೃತ್ತಕ್ಕೆ ದಿವಂಗತ ಐಪಿಎಸ್ ಅಧಿ ಕಾರಿ ಮಧುಕರ ಶೆಟ್ಟಿ ಅವರ ಹೆಸರಿಡುವಂತೆ ಸಾರ್ವಜನಿಕರು ಸಂಘ-ಸಂಸ್ಥೆಗಳು ಮನವಿ ನೀಡಿದ್ದು, ಈ ಸಂಬಂಧ ಜಿಲ್ಲಾ ಧಿಕಾರಿ, ನಗರಸಭೆ ಅಧಿ ಕಾರಿಗಳೊಂದಿಗೆ ಚರ್ಚಿಸಿ ನಿರ್ಧಾರ ತಗೆದುಕೊಳ್ಳುವುದಾಗಿ ತಿಳಿಸಿದರು.