Advertisement
ತಾಲೂಕಿನ ಗುಡೂರ ಎಸ್.ಎ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಗುರುವಾರ ಆಯೋಜಿಸಲಾಗಿದ್ದ “ನಿಮ್ಮ ಮನೆ ಬಾಗಿಲಿಗೆ ಪೊಲೀಸ್’ ಗ್ರಾಮಸಭೆ ಉದ್ಘಾಟಿಸಿ ಅವರು ಮಾತನಾಡಿದರು.ಗ್ರಾಮದಲ್ಲಿ ನಡೆಯುತ್ತಿರುವ ಅಕ್ರಮ ಚಟುವಟಿಕೆಗಳ ಕಡಿವಾಣಕ್ಕೆ ಇಬ್ಬರು ಬೀಟ್ ಪೊಲೀಸರನ್ನು ನೇಮಿಸಲಾಗುವುದು. ರಾತ್ರಿ ಪೆಟ್ರೋಲಿಂಗ್ ಮಾಡುವಂತೆ ಪೊಲೀಸ್ ಸಿಬ್ಬಂದಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.
Related Articles
Advertisement
ಕಲಬುರಗಿ ಕಾಳಜಿ ತಂಡ, ಜೇವರ್ಗಿ ಪೊಲೀಸರಿಂದ ಮಹಿಳಾ ದೌರ್ಜನ್ಯ, ಕೋಮುವಾದ, ಮಾದಕವಸ್ತು, ಟ್ರಾಫಿಕ್, ಗಾಂಜಾ ಸೇವನೆ ಕುರಿತು ರೂಪಕದ ಮೂಲಕ ಜನ ಜಾಗೃತಿ ಮೂಡಿಸಲಾಯಿತು. ಐದು ಬಾರಿ ನಡೆದಿದೆ ಶಾಲೆಯಲ್ಲಿ ಕಳ್ಳತನ ಗುಡೂರ ಎಸ್.ಎ ಗ್ರಾಮದ ಸರ್ಕಾರಿ ಶಾಲೆ ಕೋಣೆಗಳ ಬಾಗಿಲ ಕೀಲಿಯನ್ನು ಐದು ಬಾರಿ ಮುರಿದು ಕಂಪ್ಯೂಟರ್, ಸಿಪಿಒ, ಕ್ರೀಡಾ ಸಾಮಗ್ರಿ, ಸೈಕಲ್‌ಗಳು, ಮಕ್ಕಳ ಶೂ, ಸಾಕ್ಸ್ ಸೇರಿದಂತೆ ಅನೇಕ ಉಪಯುಕ್ತ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ. ಅಲ್ಲದೇ ಶಾಲೆ ಕೋಣೆ ಆವರಣದಲ್ಲೇ ರಾತ್ರಿ ವೇಳೆ ಇಸ್ಪೀಟ್, ಮಧ್ಯಪಾನ ಮಾಡಲಾಗುತ್ತಿದೆ. ಗ್ರಾಮದ ಕಿರಾಣಿ, ಹೋಟೆಲ್‌ಗಳಲ್ಲಿಯೂ ಅಕ್ರಮವಾಗಿ ಮದ್ಯಪಾನ ಮಾರಾಟ ಮಾಡಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳು ಆತಂಕದಲ್ಲೇ ಶಾಲೆಗೆ ಬರುವಂತಾಗಿದೆ ಎಂದು 8ನೇ ತರಗತಿ ವಿದ್ಯಾರ್ಥಿನಿ ಭಾಗ್ಯಶ್ರೀ ಸಂಗಣ್ಣ ಎಸ್ಪಿಗೆ ಮಾಹಿತಿ ನೀಡಿದಳು.
ಶಾಲೆ ಆವರಣದಲ್ಲಿ ಅಕ್ರಮ ಚಟುವಟಿಕೆ ನಡೆಸುವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಕಳ್ಳತನ ಪ್ರಕರಣದ ಆರೋಪಿಗಳನ್ನು ಪತ್ತೆಹಚ್ಚಿ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಸ್ಪಿ ಭರವಸೆ ನೀಡಿದರು.