Advertisement
ಅವರು ಬುಧವಾರ ಗ್ಯಾಲಕ್ಸಿ ಸಭಾಭವನದಲ್ಲಿ ಜರಗಿದ ಕಾರ್ಕಳ ವೃತ್ತದ ಪೊಲೀಸ್ ಠಾಣೆಗಳ ಪರಿಷ್ಕೃತ ಉಪಗಸ್ತು, ನಾಗರಿಕ ಸದಸ್ಯರ ಸಭೆಯನ್ನುದ್ದೇಶಿಸಿ ಮಾತನಾಡಿದರು.
Related Articles
Advertisement
ಶುಭದ್ ರಾವ್, ಶೋಧನ್ ಶೆಟ್ಟಿ, ಪುಟ್ಟಣ್ಣ ಭಟ್ ಅನ್ನಿಸಿಕೆ ಹಂಚಿಕೊಂಡರು.ಇದೇ ಸಂದರ್ಭದಲ್ಲಿ ಬೀಟ್ ಸದಸ್ಯ ರೊಂದಿಗೆ ಹಾಗೂ ಸಾರ್ವಜನಿಕರೊಂದಿಗೆ ಸಂವಾದ,ನಾಗರಿಕ ಸಮಿತಿ ಸದಸ್ಯರಿಗೆ ಗುರುತಿನ ಚೀಟಿ ವಿತರಣಾ ಕಾರ್ಯಕ್ರಮ ನಡೆಯಿತು. ನಗರ ಠಾಣೆಯಲ್ಲಿ ಸಿಬಂದಿಯ ಕೊರತೆ ಇರುವುದು ಕಂಡುಬರುತ್ತಿದೆ. ಜಾತ್ರಾ ಸಮಯ ದಲ್ಲಿ ಇದರಿಂದ ಸಾರ್ವಜನಿಕ ಭದ್ರತೆಗೆ ತ್ರಾಸವಾಗುತ್ತದೆ.ಈ ಕುರಿತು ಕ್ರಮ ಕ್ರಮ ಗೊಳ್ಳುವಂತೆ ಗಿರಿಧರ್ ನಾಯಕ್ ಹೇಳಿದರು. ಬಜಗೋಳಿಯಲ್ಲಿ ಠಾಣೆಗೆ ಮನವಿ
ಮುಡಾರು, ಮಾಳ, ಹೊಸ್ಮಾರು ಪ್ರದೇಶ ವನ್ನು ಸಂದಿಸುವ ಮುಖ್ಯ ಪೇಟೆಯಾದ ಬಜಗೋಳಿಯಲ್ಲಿ ಪೊಲೀಸ್ ಠಾಣೆಯನ್ನು ಆರಂಭಿಸುವಂತೆ ಮುಡಾರು ಗ್ರಾ.ಪಂ. ಹಾಗೂ ಸಾರ್ವಜನಿಕರ ಪರವಾಗಿ ಅಧೀಕ್ಷಕರಾದ ಕೆ.ಟಿ. ಬಾಲಕೃಷ್ಣ ಅವರಿಗೆ ಇದೇ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು ಮನವಿ ಸಲ್ಲಿಸಿದರು.
ಕೃಷ್ಣಕುಮಾರ್ ಕಾರ್ಯಕ್ರಮ ನಿರೂಪಿಸಿದರು.ಕಾರ್ಕಳ ನಗರ ಠಾಣಾಧಿಕಾರಿ ರವಿ ವಂದಿಸಿದರು. ನಕಲಿ ಗೋರಕ್ಷಕರನ್ನು ಹಿಡಿಯುವ ಕಾರ್ಯ ಪೊಲೀಸರೇ ಮಾಡಲಿ
ಗ್ರಾಮಂತರ ಪ್ರದೇಶದಲ್ಲಿ ನಕಲಿ ಗೋರಕ್ಷರನ್ನು ಹಿಡಿಯುವ ಕೆಲಸವನ್ನು ಪೊಲೀಸರೇ ಮಾಡಬೇಕು. ಇದಕ್ಕೋಸ್ಕರ ರಾತ್ರಿ ಗಸ್ತು ಹಾಗೂ ನಾಕಾಬಂಧಿ ನಡೆಸಬೇಕು. ಈ ಜವಾಬ್ದಾರಿಯನ್ನು ನಾಗರಿಕ ಸದಸ್ಯರಿಗೆ ಕೊಡುವುದು ಬೇಡ ನಾಗರಿಕ ಚೀಟಿಯನ್ನು ತೋರಿಸಿ ಕೆಲವು ಸದಸ್ಯರು ತಾವೂ ಪೊಲೀಸ್ ಇಲಾಖೆಗೆ ಸೇರಿದವರು ಎಂಬಂತೆ ವರ್ತಿಸುತ್ತಿದ್ದಾರೆ ಎಂದು ನೀರೆ ಕೃಷ್ಣ ಶೆಟ್ಟಿ ಸಾರ್ವಜನಿಕ ಸಂವಾದದಲ್ಲಿ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಕೆ.ಟಿ. ಬಾಲಕೃಷ್ಣ ಅವರು, ಗುರುತಿನ ಚೀಟಿ ಅಜೀವ ಸದಸ್ಯತ್ವ ಹೊಂದಿಲ್ಲ. ಗುರುತಿನ ಚೀಟಿ ಲೈಸೆನ್ಸ್ ತರ ಕೆಲಸ ಮಾಡುವುದಿಲ್ಲ. ಇದೊಂದು ತಾತ್ಕಾಲಿಕ ಹಕ್ಕು ಹೊರತು ಅಧಿಕಾರ ದುರ್ಬಳಕೆಗೆ ಕೊಡುವ ಸೌಲಭ್ಯವಲ್ಲ. ಆ ರೀತಿ ಮಾಡಿದರೆ ಗುರುತಿನ ಚೀಟಿಯನ್ನು ರದ್ದುಗೊಳಿಸುವ ಹಕ್ಕು ಇಲಾಖೆಗಿದೆ ಎಂದರು.