Advertisement
ನಗರದ ವಿದ್ಯುತ್ ವ್ಯವಸ್ಥೆಯ ದುರಸ್ತಿವನ್ನು ಅಪರಾಹ್ನದ ಬಳಿಕ ನಡೆಸಲಾಗುತ್ತಿತ್ತು. ಅಶ್ವತ್ಥ ಮರದ ಕೆಳಗೆ ವಿದ್ಯುತ್ ತಂತಿಯೂ ಹಾದುಹೋಗಿರುವುದ ರಿಂದ ಸಾರ್ವಜನಿಕ ವ್ಯವಸ್ಥೆಗೆ ತೊಂದರೆಯಾಗುತ್ತಿರುವ ಕಾರಣದಿಂದ ಪೊಲೀಸ್ ಇಲಾಖೆಯು ಸರ್ಕಲ್ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್ ನೇತೃತ್ವದಲ್ಲಿ ಅಶ್ವತ್ಥ ಮರದ ರಸ್ತೆಗೆ ಗೆಲ್ಲುಗಳನ್ನು ಕಡಿಯುವ ಕೆಲಸ ಆರಂಭಿಸಿತ್ತು. ಈ ಕುರಿತು ಮಾಹಿತಿ ಪಡೆದ ಅಶ್ವತ್ಥ ಮರದ ಸಂರಕ್ಷಣೆಗೆ ನಿರಂತರ ಹೋರಾಟ ನಡೆಸುತ್ತಾ ಬಂದಿರುವ ಪುತ್ತೂರು ಎಚ್ಚರ ಬಳಗದ ಪುರಂದರ ಭಟ್ ಅವರ ತಂಡ ಮರದ ಗೆಲ್ಲುಗಳನ್ನು ಕಡಿಯುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಕೆಲಸ ಸ್ಥಗಿತಗೊಳಿಸುವಂತೆ ಒತ್ತಾಯಿಸಿದರು. ಅವರ ಒತ್ತಾಯಕ್ಕೆ ಮಣಿದ ಪೊಲೀಸರು ಕಾರ್ಯಸ್ಥಗಿತಗೊಳಿಸಿದರು.
ಎಚ್ಚರ ಬಳಗದ ಪುರಂದರ ಭಟ್ ಮಾತನಾಡಿ, ರಾಷ್ಟ್ರಪಿತ ಮಹಾತ್ಮಾ ಗಾಂಧಿ ಪುತ್ತೂರಿಗೆ ಬಂದ ಸಂದರ್ಭ ಅಶ್ವತ್ಥ ಮರದಡಿಯಲ್ಲಿ ವಿಶ್ರಾಂತಿ ಪಡೆದಿದ್ದರು. ಇಂತಹ ಐತಿಹಾಸಿಕ ಮನ್ನಣೆ ಗಳಿಸಿರುವ ಅಶ್ವತ್ಥ ಮರದ ಗೆಲ್ಲುಗಳನ್ನು ಪೊಲೀಸರು ಬಂದು ಏಕಾಏಕಿ ತೆರವುಗೊಳಿಸಿರುವುದು ಸರಿಯಲ್ಲ. ಅರಣ್ಯ ಇಲಾಖೆ, ನಗರಸಭೆಗೂ ಮಾಹಿತಿ ಇಲ್ಲದೆ ತತ್‌ಕ್ಷಣಕ್ಕೆ ಐತಿಹಾಸಿಕ ಅಶ್ವತ್ಥ ಮರದ ಗೆಲ್ಲುಗಳನ್ನು ಕಡಿಯುವ ಅಗತ್ಯವಿಲ್ಲ. ಇದು ಪೊಲೀಸ್ ಇಲಾಖೆಗೆ ಸಂಬಂಧಪಟ್ಟ ಕೆಲಸವೂ ಅಲ್ಲ. ಇದಕ್ಕೆ ನಮ್ಮ ವಿರೋಧವಿದೆ ಎಂದರು. ಇನ್ಸ್ಪೆಕ್ಟರ್ ಮಹೇಶ್ ಪ್ರಸಾದ್ ಮಾತನಾಡಿ, ಮರದ ಗೆಲ್ಲುಗಳು ರಸ್ತೆಯಿಂದ ಮುಂದಕ್ಕೆ ಚಾಚಿ ಕಟ್ಟಡದ ಮೇಲ್ಬಾಗಕ್ಕೂ ಹರಡುತ್ತಿದೆ. ಸಾರ್ವಜನಿಕ ಹಿತದೃಷ್ಟಿಯಿಂದ ಮರದ ಗೆಲ್ಲುಗಳನ್ನು ಕಡಿ ಯುವುದು ಅನಿವಾರ್ಯ. ಈ ಕುರಿತು ಸಾರ್ವಜನಿಕರಿಂದಲೂ ದೂರು ಬಂದಿದೆ. ಯಾರ ಆತ್ಮಸಾಕ್ಷಿಗೂ ನೋವುಂಟು ಮಾಡುವ ಉದ್ದೇಶ ನಮಗಿಲ್ಲ. ಸಾರ್ವಜನಿಕ ಸಮಸ್ಯೆಯ ವಿಚಾರವಾಗಿರುವುದರಿಂದ ಮತ್ತು ಪೊಲೀಸ್ ಇಲಾಖೆಗೂ ಸಂಬಂಧಪಟ್ಟಿರುವುದರಿಂದ ರಸ್ತೆಗೆ ಚಾಚಿರುವ ಅಪಾಯಕಾರಿ ಗೆಲ್ಲುಗಳನ್ನು ಕಡಿಯಲು ವ್ಯವಸ್ಥೆ ಮಾಡಲಾಗಿದೆ ಎಂದರು.
Related Articles
ಎಚ್ಚರ ಬಳಗದ ಮುಖಂಡರ ಜತೆ ಇನ್‌ಸ್ಪೆಕ್ಟರ್ ಚರ್ಚೆ ನಡೆಸಿದರು. ಸೋಮವಾರ ಬೆಳಗ್ಗೆ 10 ಗಂಟೆಗೆ ಎಚ್ಚರ ಬಳಗದ ಉಪಸ್ಥಿತಿಯೊಂದಿಗೆ ಮರದ ಗೆಲ್ಲುಗಳನ್ನು ಕಡಿಯಲು ವ್ಯವಸ್ಥೆ ಮಾಡುವಂತೆ ಸಂಚಾರ ಪೊಲೀಸರಿಗೆ ಪಿಐ ಮಹೇಶ್ ಪ್ರಸಾದ್ ಸೂಚಿಸಿದರು.
Advertisement