Advertisement
ಈ ವೇಳೆ ಮಾತನಾಡಿದ ಬಿಜೆಪಿ ರಾಜ್ಯ ಕಾರ್ಯದರ್ಶಿ ಎನ್. ಶಂಕ್ರಪ್ಪ, ಪೊಲೀಸರಿಗೆ ಕುಮ್ಮಕ್ಕು ನೀಡಿ ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ ಮಾಡಿಸಿದ ಶಾಸಕ ಪ್ರತಾಪಗೌಡ ಪಾಟೀಲರ ನಿಜವಾದ ಬಣ್ಣ ಬಯಲಾಗಿದೆ. ಅವರು ಬಿಜೆಪಿ ಕಾರ್ಯಕರ್ತ ಶರಣಬಸವ ನಾಯಕ ಹಂಚಿನಾಳ ಮೇಲೆ ಪೊಲೀಸ್ ಅಧಿಕಾರಿಗಳು ಶಾಸಕರ ಕುಮ್ಮಕ್ಕಿ ನಿಂದಾಗಿ ದೌರ್ಜನ್ಯ ನಡೆಸಿ ಅವಾಚ್ಯ ಶಬ್ದಗಳಿಂದ ನಿಂದಿಸಿರುವುದು ಖಂಡನೀಯ. ಬರೀ ಇದೊಂದೇ ಪ್ರಕರಣವಲ್ಲ.
Related Articles
Advertisement
ಮಸ್ಕಿ ಕ್ಷೇತ್ರದ ಬಿಜೆಪಿ ಮಹಿಳಾ ಘಟಕದ ಅಧ್ಯಕ್ಷೆ ಶಾರದಾ ರಾಠೊಡ ಮಾತನಾಡಿ, ಶಾಸಕ ಪ್ರತಾಪಗೌಡ ಪಾಟೀಲರ ಅಧಿಕಾರದ ಅವಧಿಯಲ್ಲಿ ಕ್ಷೇತ್ರದಲ್ಲಿ ಕಾಮಗಾರಿಗಳು ಯಾವ ರೀತಿಯಲ್ಲಿ ನಡೆಯುತ್ತಿವೆ ಎಂಬುದು ಎಲ್ಲರಿಗೂ ಗೊತ್ತಿದೆ. ಮಟ್ಟೂರು ಕುಡಿಯುವ ನೀರಿನ ಕೆರೆ ಕಾಮಗಾರಿ ಕಳಪೆಯಾಗಿದ್ದು, ಇದರಲ್ಲಿ ಅವ್ಯವಹಾರವಾಗಿದೆ. ಬೋಗಸ್ ಬಿಲ್‌ಗಳನ್ನು ಎತ್ತಲಾಗಿದೆ ಎಂದು ದೂರಿದರು. ಬಿಜೆಪಿ ಕಾರ್ಯಕರ್ತರು ಯಾರಿಗೂ ಹೆದರಬೇಕಿಲ್ಲ. ಕ್ಷೇತ್ರದಲ್ಲಿ ಎಲ್ಲಯೇ ಕಾಮಗಾರಿಗಳು ಕಳಪೆಯಾಗಿರಲಿ, ಅವುಗಳನ್ನು ನಮ್ಮ ವ್ಯಾಟ್ಸಾಪ್ ಗ್ರೂಪಿಗೆ ಹಾಕಿ. ಮುಂದಿನ ದಿನಗಳಲ್ಲಿ ಇದೇ ರೀತಿ ಪ್ರತಿಭಟಿಸೋಣ ಎಂದರು.
ಬಿಜೆಪಿ ಮುಖಂಡರಾದ ಮಹಾದೇವಪ್ಪಗೌಡ, ಬಸನಗೌಡ ತುರ್ವಿಹಾಳ, ಮಸ್ಕಿ ನಗರ ಘಟಕ ಅಧ್ಯಕ್ಷ ಅಪ್ಪಾಜಿಗೌಡ, ಜಿಲ್ಲಾಧ್ಯಕ್ಷ ಶರಣಪ್ಪಗೌಡ ಜಾಡಲದಿನ್ನಿ, ಹಲ್ಲೆಗೊಳಗಾದ ಸಂತ್ರಸ್ತ ಬಿಜೆಪಿ ಕಾರ್ಯಕರ್ತ ಶರಣಬಸವ ನಾಯಕ ಮಾತನಾಡಿದರು. ಮಸ್ಕಿ ಬಿಜೆಪಿ ಮಂಡಲ ಅಧ್ಯಕ್ಷ ವಿಶ್ವನಾಥ ರೆಡ್ಡಿ ಅಮೀನಗಡ, ರಾಜಶೇಖರ ಪಾಟೀಲ ಸಿಂಧನೂರು, ಶೇಖರಪ್ಪ ತಳವಾರ, ಜಿಲ್ಲಾ ಕಾರ್ಯದರ್ಶಿ ಸಂಗಮೇಶ ಹತ್ತಿಗುಡ್ಡ, ಪುರಸಭೆ ಅಧ್ಯಕ್ಷ ಮೌನೇಶ ಮುರಾರಿ, ಉಪಾಧ್ಯಕ್ಷ ರವಿಕುಮಾರ ಪಾಟೀಲ ಹಾಗೂ ಬಂಡೇಶ ವಲ್ಕಂದಿನ್ನಿ, ಪ್ರಾಣೇಶ ದೇಶಪಾಂಡೆ, ಶರಣಯ್ಯ ಗುಡದೂರು, ಶಿವಪುತ್ರಪ್ಪ ಹರಳಳ್ಳಿ, ಶರಣಪ್ಪ ವಕೀಲ, ಮಲ್ಲಪ್ಪ ಅಂಕುಶದೊಡ್ಡಿ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಪಾಲ್ಗೊಂಡಿದ್ದರು.